ರಿಪ್ಪನ್ಪೇಟೆ: ಹೊಸನಗರ ತಾಲ್ಲೂಕಿನ ಕೆರೆಹಳ್ಳಿ ಹೋಬಳಿಯ ನೇರಲುಮನೆ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಹೆಲ್ಪರ್ ನೇಮಕಾತಿಯಲ್ಲಿ ಅರ್ಹತೆಯಿರುವವರನ್ನು ಕೈಬಿಟ್ಟು ಅರ್ಹತೆ ಇಲ್ಲದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿ ರಾಜ್ಯ ಲೋಕಾಯುಕ್ತ ನ್ಯಾಯಲಯಕ್ಕೆ ದೂರು ದಾಖಲಿಸಿರುವುದಾಗಿ ನೊಂದ ಅಭ್ಯರ್ಥಿ ಸುದ್ದಿಗಾರರಿಗೆ ತಿಳಿಸಿದರು.
ಈ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯ್ತಿ ಸಿಇಓರಿಗೆ ಹಾಗೂ ಜಿಲ್ಲಾ ಶಿಶು ಕಲ್ಯಾಣಾಭಿವೃದ್ದಿ ಅಧಿಕಾರಿಗಳಿಗೆ ಕ್ಷೇತ್ರದ ಶಾಸಕರಿಗೆ ರಾಜ್ಯ ಗೃಹಸಚಿವರ ಬಳಿ ಸಾಕಷ್ಟು ಭಾರಿ ಗ್ರಾಮದಲ್ಲಿನ ಅಂಗನವಾಡಿ ಹೆಲ್ಪರ್ ಹುದ್ದೆಯ ನೇಮಕಾತಿಯಲ್ಲಿ ಮೋಸವಾಗಿದೆ ಈ ಬಗ್ಗೆ ತನಿಖೆ ನಡೆಸಿ ನ್ಯಾಯ ಕೊಡಿಸುವಂತೆ ದೂರು ನೀಡಲಾಗಿದ್ದರೂ ಪ್ರಯೋಜನವಾಗಿಲ್ಲ ಇದರಿಂದಾಗಿ ಬೇರೆ ಮಾರ್ಗವಿಲ್ಲದೆ ಲೋಕಾಯುಕ್ತ ನ್ಯಾಯಾಲಯಕ್ಕೆ ದೂರು ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಶೃತಿ ಕೆ.ಎನ್. 2007-08 ನೇ ಸಾಲಿನಲ್ಲಿ ರಿಪ್ಪನ್ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿಯಲ್ಲಿ 286 ಅಂಕಗಳನ್ನು ಪಡೆಯುವ ಮೂಲಕ ಶೇ. (47.66) ರಷ್ಟು ಫಲಿತಾಂಶದೊಂದಿಗೆ ಉತ್ತೀರ್ಣರಾಗಿದ್ದಾರೆ. ಅಲ್ಲದೆ ಗ್ರಾಮದಲ್ಲಿಯೇ ವಿವಾಹವಾಗಿ ಎರಡು ಮಕ್ಕಳ ತಾಯಿಯಾಗಿದ್ದು ಇನ್ನೋರ್ವ ಅಭ್ಯರ್ಥಿ ನಯನ ಎ.ಎಂ ಅವಿವಾಹಿತೆಯಾಗಿದ್ದು ಅರ್ಜಿ ಸಲ್ಲಿಸುವ ವೇಳೆಯಲ್ಲಿ ಸ್ಕೂಲ್ ದಾಖಲಾತಿಯಲ್ಲಿ ಯಾವುದೇ ಶಾಲಾ ಮುಖ್ಯೋಪಾಧ್ಯಾಯರ ಸಹಿ ಇಲ್ಲದ ದಾಖಲೆಯನ್ನು ನೀಡಲಾಗಿದ್ದರೂ ತಾಲ್ಲೂಕಿನ ಶಿಶುಕಲ್ಯಾಣಾಭಿವೃದ್ದಿ ಅಧಿಕಾರಿಗಳು ನೇಮಕಾತಿ ಸಮಿತಿಯವರಿಗೆ ದಿಕ್ಕು ತಪ್ಪಿಸಿ ಅರ್ಹತೆಯಿರುವ ಶೃತಿ ಕೆ.ಎನ್. ರವರ ಶಾಲಾ ದಾಖಲೆಯನ್ನು ಮರೆಮಾಚಿ ನಯನ ಎಂಬುವವರ ಹೆಸರನ್ನು ಕಳುಹಿಸುತ್ತಿದ್ದಾರೆಂದು ದೂರಿನಲ್ಲಿ ವಿವರಿಸಿದ್ದಾಳೆ.
ನೇರಲುಮನೆ ಅಂಗನವಾಡಿ ಹೆಲ್ಪರ್ ಹುದ್ದೆಗೆ ಇಲಾಖೆಯವರು ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಶೃತಿ ಕೆ.ಎನ್.ಆನ್ಲೈನ್ ಮತ್ತು ಆಫ್ಲೈನ್ ನಲ್ಲಿ ಸಮರ್ಪಕ ದಾಖಲಾತಿಯೊಂದಿಗೆ ಅರ್ಜಿ ಸಲ್ಲಿಸಲಾಗಿದ್ದು ನಯನ ಎ.ಎಂ.ಆಫ್ಲೈನ್ನಲ್ಲಿ ಶಾಲಾ ಮುಖ್ಯೋಪದ್ಯಾಯರ ಸಹಿ ಇಲ್ಲದ ಅಂಕಪಟ್ಟಿ ದಾಖಲೆಯನ್ನು ಸಲ್ಲಿಸಿರುವುದನ್ನು ಮಾಹಿತಿ ಹಕ್ಕಿನಡಿ ಪಡೆಯಲಾದ ದಾಖಲೆಯಿಂದ ಬಯಲಾಗುತ್ತಿದ್ದು ಈ ಬಗ್ಗೆ ಶೃತಿ ಕೆ.ಎನ್.ಜಿಲ್ಲಾಧಿಕಾರಿಗಳಿಗೆ ಮತ್ತು ಜಿ.ಪಂ. ಸಿಇಓ ರವರಿಗೆ ಕ್ಷೇತ್ರದ ಶಾಸಕರಿಗೆ ದಾಖಲೆಗಳೊಂದಿಗೆ ಮನವಿ ಸಲ್ಲಿಸಲಾದರೂ ಪರಿಶೀಲನೆ ನಡೆಸುವಷ್ಟು ವ್ಯಯದಾನ ಅಧಿಕಾರಿಗಳಿಗಿಲ್ಲದಂತಾಗಿದೆ.

ಇತ್ತೀಚೆಗೆ ಸಿಇಓ ಮತ್ತು ಜಿಲ್ಲಾಧಿಕಾರಿಗಳು ಶಿಶು ಕಲ್ಯಾಣಾಭಿವೃದ್ಧಿ ಇಲಾಖೆಯವರಿಗೆ ನೇಮಕಾತಿಯ ವೇಳೆ ಸಲ್ಲಿಸಲಾದ ದಾಖಲೆಗಳನ್ನು ಪರಿಶೀಲನೆ ನಡೆಸಲು ದಾಖಲೆಗಳನ್ನು ತಗೆದುಕೊಂಡು ಬರುವಂತೆ ತಿಳಿಸಲಾಗಿದ್ದರೂ ಮೇಲ್ಕಂಡ ಅರ್ಹತೆಹೊಂದಿರುವ ಶೃತಿ ಕೆ.ಎನ್.ದಾಖಲೆಯನ್ನು ಮರೆಮಾಚಿ ಬರೀ ನಯನ ರವರ ಸ್ಕೂಲ್ ದಾಖಲೆ ಹಿಡಿದು ಹೋಗುತ್ತಿದ್ದಾರೆಂದು ಸಂಶಯ ವ್ಯಕ್ತಪಡಿಸಿದರು.
