ಹೊಸನಗರ: ತಾಲ್ಲೂಕಿನಲ್ಲಿ 30ಗ್ರಾಮ ಪಂಚಾಯಿತಿಗಳಿದ್ದು ಅದರಲ್ಲಿ ತಾಲ್ಲೂಕಿನಲ್ಲಿಯೇ 23 ವಿವಿಧ ಹುದ್ದೆಗಳು ಖಾಲಿ ಇದೆ ಅದರಲ್ಲಿಯೂ ಬೇಸಿಗೆಯಲ್ಲಿ ನೀರಿಗಾಗಿ ಪರದಾಟ ನಡೆಸುವ ಸುಮಾರು 12 ಗ್ರಾಮ ಪಂಚಾಯಿತಿಗಳಲ್ಲಿ ನೀರುಗಂಟಿಯನ್ನೆ ನೇಮಕ ಮಾಡಿಕೊಂಡಿಲ್ಲದಿರುವುದು ಮುಂದಿನ ದಿನದಲ್ಲಿ ನೀರುಗಂಟಿಯಿಲ್ಲದ ಗ್ರಾಮ ಪಂಚಾಯಿತಿಯಲ್ಲಿ ನೀರಿಗಾಗಿ ಪರದಾಟ ನಡೆಸುವುದರಲ್ಲಿ ಯಾವುದೇ ಅನುಮಾನವಿಲ್ಲ.
ನೀರು ಗಂಟಿಯಿಲ್ಲದ ಅಮೃತ ಗ್ರಾಮ ಪಂಚಾಯಿತಿ, ಅರಮನೆಕೊಪ್ಪ ಗ್ರಾಮ ಪಂಚಾಯಿತಿ, ಖೈರಗುಂದ ಗ್ರಾಮ ಪಂಚಾಯಿತಿ, ಅರಸಾಳು ಗ್ರಾಮ ಪಂಚಾಯಿತಿ, ಚಿಕ್ಕಜೇನಿ ಗ್ರಾಮ ಪಂಚಾಯಿತಿ, ನಿಟ್ಟೂರು ಗ್ರಾಮ ಪಂಚಾಯಿತಿ, ತ್ರಿಣಿವೆ ನಗರ ಗ್ರಾಮ ಪಂಚಾಯಿತಿ, ಜೇನಿ ಗ್ರಾಮ ಪಂಚಾಯಿತಿಗಳಲ್ಲಿ ನೀರುಗಂಟಿ ಹುದ್ದೆ ಖಾಲಿ ಇದ್ದು ಆದರೆ, 2020ರಿಂದ ನೇಮಕಾತಿಗೊಂಡಿಲ್ಲದಿರುವುದರಿಂದ ಈ ಗ್ರಾಮ ಪಂಚಾಯಿತಿಗಳಲ್ಲಿ ನೀರಿನ ಅಭಾವ ಸಂಭವಿಸಿದರೂ ಆಶ್ಚರ್ಯಪಡಬೇಕಾಗಿಲ್ಲ. ಉಳಿದ ಗ್ರಾಮ ಪಂಚಾಯಿತಿಗಳಲ್ಲಿ ಕರ ವಸೂಲಿಗಾರ 2, ಹುದ್ದೆ ಜವಾನ 7 ಹುದ್ದೆ ಹಾಗೂ ಸ್ವಚ್ಛತೆಗಾರ 2ಹುದ್ದೆ ಖಾಲಿ ಉಳಿದಿದೆ. ತಕ್ಷಣ ಸರ್ಕಾರ ಮತ್ತು ಸಾಗರ, ಹೊಸನಗರ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಮತ್ತು ತೀರ್ಥಹಳ್ಳಿ ಶಾಸಕರು ಗೃಹಮಂತ್ರಿಯಾದ ಆರಗ ಜ್ಞಾನೇಂದ್ರರವರು ನೀರುಗಂಟಿಗಳನ್ನು ನೇಮಕ ಮಾಡಿಕೊಳ್ಳದಿದ್ದರೇ ಮುಂದಿನ ದಿನದಲ್ಲಿ ಹೊಸನಗರ ತಾಲ್ಲೂಕಿನಲ್ಲಿ ನೀರಿನ ಅಭಾವ ಎದುರಿಸುವುದರ ಜೊತೆಗೆ ಗ್ರಾಮಸ್ಥರ ಪ್ರತಿಭಟನೆಗೆ ಒಳಗಾಗಬೇಕಾಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಸಾರ್ವಜನಿಕರಿಂದ ಪ್ರತಿಭಟನೆ ತಪ್ಪುವುದಿಲ್ಲ. ತಕ್ಷಣ ಎಚ್ಚರಿಕೆ ವಹಿಸಿ ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣಾಧಿಗಳು ನೇಮಕಾತಿ ಪ್ರಕ್ರಿಯೆ ನಡೆಸಲು ಆದೇಶಿಸಲಿ ಎಂಬುದು ತಾಲೂಕಿನ ಗ್ರಾಮಸ್ಥರ ಮನವಿಯಾಗಿದೆ.
ಖಾಲಿ ಹುದ್ದೆ ನೇಮಕಾತಿ ಪ್ರಕ್ರಿಯೆಯಲ್ಲಿದೆ : ಇಓ
2020ರ ಹಿಂದೆ ಗ್ರಾಮ ಪಂಚಾಯಿತಿಗಳಿಗೆ ವಿವಿಧ ಹುದ್ದೆಗಳನ್ನು ನೇಮಿಸಿಕೊಳ್ಳುವ ಅಧಿಕಾರವನ್ನು ಸರ್ಕಾರ ಗ್ರಾಮ ಪಂಚಾಯಿತಿ ಆಡಳಿತ ವರ್ಗಕ್ಕೆ ಹಾಗೂ ಅಲ್ಲಿನ ಅಧಿಕಾರಿಗಳಿಗೆ ನೀಡಲಾಗಿತ್ತು ಆದರೆ ಕಾರಣಾಂತರದಿಂದ ಈ ನೇಮಕಾತಿ ಪ್ರಕಿಯೆಯನ್ನು ತೆಗೆದು ನೇಮಕಾತಿಯ ಅಧಿಕಾರವನ್ನು ಜಿಲ್ಲಾ ಪಂಚಾಯಿತಿ ಕಾರ್ಯದರ್ಶಿಗಳಿಗೆ ನೀಡಲಾಗಿದೆ. ಆದರೆ, ಎರಡು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯುತ್ತಿಲ್ಲ ಈ ಬಗ್ಗೆ ಸಿಇಒ ಗಮನಕ್ಕೆ ಈಗಾಗಲೇ ತರಲಾಗಿದ್ದು ಮುಂದಿನ ದಿನದಲ್ಲಿ ನೇಮಕಾತಿ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ತಿಳಿಸಿದ್ದಾರೆ.
Related