ಹೊಸನಗರ ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಲ್ಲಿ ಬಲವರ್ಧಿತ ಅಕ್ಕಿ ವಿತರಣೆ: ತಹಶೀಲ್ದಾರ್ ವಿ.ಎಸ್ ರಾಜೀವ್

0
551

ಹೊಸನಗರ: ದೇಶದ ಪ್ರತಿಯೊಬ್ಬ ಬಡವರಿಗೂ ಪೌಷ್ಟಿಕಾಂಶವನ್ನು ಒದಾಗಿಸುವ ಹಾಗೂ ಮಹಿಳೆಯರು ಮಕ್ಕಳು ಹಾಗೂ ಹಾಲುಣಿಸುವ ತಾಯಂದಿರಲ್ಲಿ ಅಪೌಷ್ಠಿಕತೆ ಮತ್ತು ಅವರ ಬೆಳವಣಿಗೆಯಲ್ಲಿ ಅಗತ್ಯ ಪೋಷಕಾಂಶಗಳ ಕೊರತೆಯನ್ನು ನೀಗಿಸುವ ನಿಟ್ಟಿನಲ್ಲಿ 75ನೇ ಸ್ವರ್ಣ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ನರೇಂದ್ರಮೋದಿಯವರು ಘೋಷಿಸಿರುವ ಹಾಗೇ ಬಲವರ್ಧಿತ ಅಕ್ಕಿ ಸಹಕಾರಿಯಾಗಲಿದೆ ಎಂದು ತಹಶೀಲ್ದಾರ್ ವಿ.ಎಸ್ ರಾಜೀವ್‌ರವರು ಹೇಳಿದರು.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಬಲವರ್ಧಿತ ಅಕ್ಕಿಯು ಹೊಸನಗರದ ನ್ಯಾಯಬೆಲೆ ಅಂಗಡಿಗಳ ಮೂಲಕ ಕಾರ್ಡ್‌ದಾರರು ಪಡೆದುಕೊಳ್ಳಬೇಕೆಂದು ಕೇಳಿಕೊಂಡರು.

ಹೊಸನಗರ ತಾಲ್ಲೂಕು ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಒಟ್ಟು 43ನ್ಯಾಯಬೆಲೆ ಅಂಗಡಿಗಳಿದ್ದು ಒಂದು ಬಿಪಿಎಲ್ ಕಾರ್ಡ್‌ಗೆ ಒಬ್ಬರಿಗೆ 5ಕೆ.ಜಿ ಪ್ರತಿ ತಿಂಗಳು ನೀಡುವ ಅಕ್ಕಿ ಹಾಗೂ 5ಕಿ.ಜಿ ಬಲವರ್ಧಿತ ಅಕ್ಕಿಯನ್ನು ನೀಡಲಿದ್ದು ಅದರಂತೆ ಅಂತ್ಯೋದಯ ಕಾರ್ಡ್‌ದಾರರಿಗೆ ಪ್ರತಿ ತಿಂಗಳು ನೀಡುವ 35 ಕಿ.ಜಿಯ ಅಕ್ಕಿಯ ಜೊತೆಗೆ ಒಬ್ಬರಿಗೆ 5 ಕೆ.ಜಿಯಂತೆ ಬಲವರ್ಧಿತ ಅಕ್ಕಿಯನ್ನು ನೀಡಲಾಗುವುದು ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕೇಳಿಕೊಂಡರು.

ಈ ಸಂದರ್ಭದಲ್ಲಿ ತಾಲ್ಲೂಕು ಕಛೇರಿಯ ಗ್ರೇಡ್2 ತಹಶೀಲ್ದಾರ್ ರಾಕೇಶ್, ಶಿರಾಸ್ಥೆದಾರ್ ಸುಧೀಂದ್ರ ಕುಮಾರ್, ಶ್ರೀಕಾಂತ್ ಹೆಗ್ಡೆ, ಆಹಾರ ನಿರೀಕ್ಷರಾದ ಬಾಲಚಂದ್ರ, ಪ್ರಥರ್ಮ ದರ್ಜೆ ಗುಮಾಸ್ಥರಾದ ವಿನಯ್ ಎಂ ಆರಾಧ್ಯ, ಚಿರಾಗ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here