ಹೊಸನಗರ ತಾಲ್ಲೂಕಿನಲ್ಲಿ ವಿದ್ಯುತ್ ಕೊರೊನಾ ಮಹಾಮಾರಿಗೆ ಬಲಿ! ವಿದ್ಯುತ್ ಶವಪೆಟ್ಟಿಗೆಗೆ ಕೊನೆಯ ಮೊಳೆ ಹೊಡೆದ ಶಾಸಕ ಹೆಚ್. ಹಾಲಪ್ಪ: ಬಿ‌.ಜಿ ನಾಗರಾಜ್ ಗಂಭೀರ ಆರೋಪ

0
2287

ಹೊಸನಗರ : ಮಲೆನಾಡಿನ ತವರೂರು ಲಿಂಗನಮಕ್ಕಿ ಜಲಾಶಯಕ್ಕೆ ನೀರುಣಿಸುವ ಪ್ರಧಾನ ಜಲಾನಯನ ಪ್ರದೇಶವಾದ ಹೊಸನಗರ ತಾಲೂಕು, ರಾಜ್ಯಕ್ಕೆ ವಿದ್ಯುತ್ ಒದಗಿಸಿದರು ದೀಪದ ಬುಡ ಕತ್ತಲೆ ಎಂಬಂತೆ ಹೊಸನಗರ ತಾಲೂಕಿನ ಜನತೆ ವಿದ್ಯುತ್ ಎಂಬ ವಸ್ತುವನ್ನು ಕಾಣುವುದೇ ದುಸ್ತರವೆನಿಸಲಿದೆ ಎಂದು ಹೊಸನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ.ಜಿ ನಾಗರಾಜ್ ರವರು ಗಂಭೀರ ಆರೋಪ ಮಾಡಿದ್ದಾರೆ.

ಕಳೆದ ವಾರವಷ್ಟೇ ವಿದ್ಯುತ್ ಸಮಸ್ಯೆ ಪರಿಹರಿಸಲು ಹೆಚ್ಚುವರಿ ಪರಿವರ್ತಕದ (5MVA) ಉದ್ಘಾಟನೆಯನ್ನು ಶಾಸಕರು ಮಾಡಿದ ನಂತರವಂತೂ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಗಂಭೀರತೆ ಪಡೆದುಕೊಂಡಿದೆ. ಗ್ರಾಮೀಣ ಪ್ರದೇಶದಲ್ಲಿ ಜನರು ವಿದ್ಯುತ್ ಕಾಣದೆ ವಾರಗಳೇ ಕಳೆದವು. ಇದೀಗ 30 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಲಿದೆ. ಅಲ್ಲಿಯ ವ್ಯವಸ್ಥೆಗೆ ದಿನದ 24 ಗಂಟೆಯೂ ವಿದ್ಯುತ್ ಅಗತ್ಯವಿದೆ. ಆದರೆ ಹೊಸನಗರ ಮೆಸ್ಕಾಂನಿಂದ ವಿದ್ಯುತ್ತ ಅನ್ನು ಕಾಣುವುದೇ ದುಸ್ತರವೆನಿಸಲಿದೆ ಎಂದು ಹೇಳಿದ ನಾಗರಾಜ್, ‘ತಾಲೂಕಿನ ವಿದ್ಯುತ್ ಎಂಬ ವಸ್ತು ಮಹಾಮಾರಿ ಕೊರೊನಾದಿಂದ ಮೃತಪಟ್ಟಿದ್ದು ಶಾಸಕರಾದ ಹರತಾಳು ಹಾಲಪ್ಪ ಅದರ ಶವಪೆಟ್ಟಿಗೆಗೆ ಮೊಳೆಯನ್ನು ಹೊಡೆದು ಆಗಿದೆ’ ಎಂದು ವಿಶ್ಲೇಷಿಸಿದ್ದಾರೆ.

ಇಂದು ಭಾನುವಾರವಾಗಿದ್ದು ಬೆಳಗ್ಗೆಯಿಂದ ವಿದ್ಯುತ್ ಕಾಣದ ಜನರು ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಪವರ್ ಇಲ್ಲದೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಸೇರಿದಂತೆ ಖಾಸಗಿ ಮೊಬೈಲ್ ಟವರ್ ಗಳು ಹಲವೆಡೆ ಕಾರ್ಯನಿರ್ವಹಿಸದೆ ಇರುವುದರಿಂದ ಕೊರೊನಾದಂತಹ ಇಂತಹ ಗಂಭೀರ ಸ್ಥಿತಿಯಲ್ಲಿ ತುರ್ತು ಕರೆ ಮಾಡಲಾಗದೆ ತಾಲ್ಲೂಕಿನ ಜನ ಪರಿತಪಿಸುತ್ತಿದ್ದಾರೆ. ಇನ್ನೂ ಹೋಂ ಐಸೋಲೇಷನ್ ನಲ್ಲಿರುವವರನ್ನು ಹಾಗೂ ಕೊರೊನಾ ಸೋಂಕಿತರನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ದೂರವಾಣಿ ಮೂಲಕ ಸಂಪರ್ಕಿಸಲು ಸಾಧ್ಯವಾಗದ ಸ್ಥಿತಿ ತಾಲ್ಲೂಕಿನ ಹಲವೆಡೆ ನಿರ್ಮಾಣವಾಗಿದೆ. ಇದರಿಂದ ತೀವ್ರ ತೊಂದರೆಯಾಗಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here