ಹೊಸನಗರ ತಾಲ್ಲೂಕಿನ 09 ಕೇಂದ್ರಗಳಲ್ಲಿ 1620 ವಿದ್ಯಾರ್ಥಿಗಳ ಪೈಕಿ 1615 ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಾಜರು ; ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ

0
563

ಹೊಸನಗರ: ರಾಜ್ಯಾದ್ಯಂತ ಇಂದಿನಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಆರಂಭವಾಗಿದ್ದು 1620 ಪರೀಕ್ಷೆಗೆ ಹಾಜರಾಗಬೇಕಾಗಿದ್ದು 1615 ವಿದ್ಯಾರ್ಥಿನಿಗಳು ಹಾಜರಾಗಿದ್ದಾರೆ ಎಂದು ಹೊಸನಗರ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪನವರು ತಿಳಿಸಿದ್ದಾರೆ.

ಅವರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಹೊಸನಗರ ತಾಲ್ಲೂಕಿನಲ್ಲಿ 9 ಕೇಂದ್ರಗಳನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಹೊಸನಗರದ ಸರ್ಕಾರಿ ಜೂನಿಯರ್ ಕಾಲೇಜ್ ಆವರಣ ಮತ್ತು ಖಾಸಗಿ ಹೋಲಿ ರೆಡಿಮರ್ ಶಾಲೆಯಲ್ಲಿ ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ಎರಡು ಶಾಲೆಗಳಲ್ಲಿ 352 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 9ಪರೀಕ್ಷಾ ಕೇಂದ್ರಗಳನ್ನು ತೆರೆಯಲಾಗಿದ್ದು ರಿಪ್ಪನ್‌ಪೇಟೆಯಲ್ಲಿ ಎರಡು ಕೇಂದ್ರಗಳು ಜಯನಗರ, ಮಾರುತಿಪುರ, ನಗರ, ಅಮೃತದಲ್ಲಿ ಹಿಂದಿನಿಂದಲೂ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯುತ್ತಿದ್ದು ನಿಟ್ಟೂರು, ಜಯನಗರ, ಮಾರುತಿಪುರ ಹಾಗೂ ಕಮ್ಮಚಿಯಲ್ಲಿ ನೂತನವಾಗಿ ಪರೀಕ್ಷಾ ಸೆಂಟರ್ ತೆರೆಯಲಾಗಿದೆ ಎಂದರು.

ಪರೀಕ್ಷೆಗೆ 80ಜನ ಮೇಲ್ವೀಚಾರಕರು, 9ಜನ ಮೊಬೈಲ್ ಅಧಿಕಾರಿಗಳು, 9ಜನ ಮುಖ್ಯ ಅಧೀಕ್ಷಕರುಗಳನ್ನು, 9ಜನ ಅಧೀಕ್ಷಕರುಗಳು, 3ಜನ ವೀಕ್ಷಕರನ್ನು ನೇಮಿಸಲಾಗಿದ್ದು ಹೊಸನಗರ ತಾಲ್ಲೂಕು ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಆಶಾ ಕಾರ್ಯಕರ್ತೆಯರು ಪರೀಕ್ಷಾ ಕೇಂದ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಪ್ರತಿಯೊಂದು ಕೇಂದ್ರಗಳಿಗೆ ದೈಹಿಕ ಶಿಕ್ಷಕರನ್ನು ನೇಮಿಸಲಾಗಿದ್ದು ಹೊಸನಗರ ತಾಲ್ಲೂಕು ತಹಶೀಲ್ದಾರ್ ವಿ.ಎಸ್. ರಾಜೀವ್ ಮತ್ತು ಸಿಬ್ಬಂದಿಗಳು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪ್ರವೀಣ್ ಸಿಬ್ಬಂದಿಗಳು ವಾಹನದ ವ್ಯವಸ್ಥೆಯನ್ನು ನೀಡಿದ್ದು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಅಹಿತಕರ ಘಟನೆ ನಡೆಯದಂತೆ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಕ್ಷೇತ್ರ ಶಿಕ್ಷಣಾಧಿಕಾರಿ ವೀರಭದ್ರಪ್ಪ ನೇತೃತ್ವದ ತಂಡದವರಾದ ಸಹಾಯಕ ನಿರ್ದೆಶಕರು, ಅಕ್ಷರ ದಾಸೋಹ ಸಮಾನ್ವಯಾಧಿಕಾರಿ ಬಿ.ಆರ್.ಸಿ ಯವರಾದ ನಾಗರಾಜ್ ಎಸ್.ಪಿ, ಅಧೀಕ್ಷಕರಾದ ಅಶೋಕ್, ಮಾರುತಿರವರು 9ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದೇವೆ ಎಂದರು.

ಹೊಸನಗರ ತಾಲ್ಲೂಕಿನಲ್ಲಿ ಒಟ್ಟು 860 ಜನ ವಿದ್ಯಾರ್ಥಿಗಳು ಹಾಗೂ 785ಜನ ವಿದ್ಯಾರ್ಥಿನೀಯರು ಪರೀಕ್ಷೆ ಬರೆದಿದ್ದಾರೆ.

ಮುಸ್ಲಿಂ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರ್:

ಹೊಸನಗರ ತಾಲ್ಲೂಕಿನಲ್ಲಿ ಸುಮಾರು 40 ವಿದ್ಯಾರ್ಥಿಗಳಿದ್ದು ಅವರೆಲ್ಲರೂ ಶಾಲೆಯವರೆಗೆ ಹಿಜಾಬ್ ಹಾಕಿಕೊಂಡು ಬಂದು ಪರೀಕ್ಷಾ ಕೊಠಡಿಗೆ ಹಿಜಾಬ್ ತೆಗೆದು ಯಾವುದೇ ಗೊಂದಲಗಳಿಗೆ ಎಡೆ ಮಾಡಿಕೊಡದೇ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಬರೆದಿದ್ದಾರೆ.

ಕೆಲವು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯವ ವಿದ್ಯಾರ್ಥಿಗಳಿಗೆ ಲಘು ಉಪಹಾರ ವ್ಯವಸ್ಥೆಯನ್ನು ಮಾಡಲಾಗಿದೆ. ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಮಾಸ್ಕ್ ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿದೆ ಎಂದರು.

ಜಾಹಿರಾತು

LEAVE A REPLY

Please enter your comment!
Please enter your name here