ಹೊಸನಗರ: ತಾಲ್ಲೂಕು ಕಛೇರಿಯ ಆವರಣದಲ್ಲಿ ದೇವರ ದಾಸಿಮಯ್ಯ ಜಯಂತಿ ಆಚರಣೆ

0
413

ಹೊಸನಗರ: ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ದೇವರ ದಾಸಿಮಯ್ಯ ಜಯಂತಿಯನ್ನು ಕೋವಿಡ್-19 ಇರುವುದರಿಂದ ಅತೀ ಸರಳವಾಗಿ ಇಂದು ಆಚರಿಸಲಾಯಿತು.

ತಾಲ್ಲೂಕು ಕಛೇರಿಯ ಶಿರಾಸ್ಥೆದಾರ್ ಶ್ರೀಕಾಂತ್ ಹೆಗ್ಡೆಯವರು ದಾಸಿಮಯ್ಯರವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೇವರ ದಾಸಿಮಯ್ಯನವರು ವೃತ್ತಿಯಲ್ಲಿ ನೆಯ್ಗೆಕಾರನಾದ ಇವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವ ಭಕ್ತಿ ಮೆರೆದಂತೆ ಐತಿಹ್ಯ ಪುರಾಣಗಳಲ್ಲಿ ಉಲ್ಲೇಖಗಳು ಸಿಗುತ್ತಿದ್ದು ದುಗ್ಗಲೆಯೆಂಬ ಶರಣೆಯೊಂದಿಗೆ ಸಂಸಾರಿಯೂ ಆಗಿದ್ದ ಜೇಡರ ದಾಸಿಮಯ್ಯರನ್ನೇ ಮೊದಲ ವಚನಕಾರರೆಂದು ಗುರುತಿಸಲಾಗುತ್ತಿದೆ ಎಂದು ದೇವರ ದಾಸಿಮಯ್ಯನವರ ಬಗ್ಗೆ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುಮಾಸ್ಥರಾದ ವಿನಯ್ ಎಂ.ಆರಾಧ್ಯ, ಆಹಾರ ಇಲಾಖೆಯ ನಿರೀಕ್ಷಕರಾದ ಬಾಲಚಂದ್ರ, ನಾಗರಾಜ್, ಹೇಮಾಂತ್, ಸತೀಶ್, ಮಂಜುಳ, ಚಾಂದಿನಿ, ಶ್ರೀಮತಿ ಶಿಲ್ಪ, ಸೌಮ್ಯ, ಚಿರಾಗ್, ರಾಘವೇಂದ್ರ, ನಾಗರಾಜ್ ಕಿಣಿ, ರೇಣುಕಯ್ಯ, ನವೀನ್, ಮಂಜಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here