ಹೊಸನಗರ: ತ್ರಿಣಿವೆ ಗ್ರಾಪಂ ಆವರಣದಲ್ಲಿ ಸಾಮಾಜಿಕ ಲೆಕ್ಕ ಪರಿಶೋಧನ ಸಭೆಯಲ್ಲಿ ಹೊಡೆದಾಟ..!! ದೂರು ದಾಖಲು

0
1093

ಹೊಸನಗರ: ತಾಲ್ಲೂಕಿನ ತ್ರಿಣಿವೆ ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆಯಲ್ಲಿ ಗ್ರಾಮಸ್ಥರು ಮತ್ತು ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನಡುವೆ ಮಾತಿನ ಚಕಮುಕಿ ನಡೆದು ಸಭೆಯಲ್ಲಿ ವಿಡಿಯೋ ಮಾಡುತ್ತಿದ್ದ ಗ್ರಾಮಸ್ಥನಿಗೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಪಾಳಕ್ಕೆ ಹೊಡೆದಿದ್ದಾರೆ ಎಂದು ಹೊಸನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಗ್ರಾಮ ಪಂಚಾಯಿತಿಯ ಸಾಮಾಜಿಕ ಲೆಕ್ಕ ಪರಿಶೋಧನಾ ಸಭೆ ನಡೆಯುತ್ತಿದ್ದಂತೆ ಗ್ರಾಮಸ್ಥರು ಸಭೆಗೆ ಮುತ್ತಿಗೆ ಹಾಕಿ ಈ ಹಿಂದೆ ನಡೆದ ಕಾಮಗಾರಿಗಳ ಪೂರ್ಣ ತನಿಖೆ ನಡೆಯದೆ ನೆನೆಗುದಿಗೆ ಬಿದ್ದಿದೆ. ಈ ವೇಳೆಯಲ್ಲಿ ಆ ಕಾಮಗಾರಿಗಳ ಲೆಕ್ಕ ಪರಿಶೋಧನೆ ನಡೆಯುವುದು ಅನುಮಾನಕ್ಕೆ ಕಾರಣವಾಗಿದೆ. ಸಭೆ ಮುಂದುಡುವಂತೆ ಆಗ್ರಹಿಸಿದ್ದಾರೆ. ಆಗ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದು ಗದ್ದಲ-ಗಲಾಟೆ ನಡೆದಿದೆ. ಸಭೆಯಲ್ಲಿ ಗಲಾಟೆ ನಡೆಯುವುದನ್ನು ಸಂದೀಪ್ ಎಂಬ ಗ್ರಾಮಸ್ಥ ವಿಡೀಯೋ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ವಿಡಿಯೋ ಮಾಡದಂತೆ ಎಚ್ಚರಿಸಿದ್ದಾರೆ ಎಂದು ಹೇಳಲಾಗಿದ್ದು ಆಗ ಸಂದೀಪ್ ಮತ್ತು ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ಅವರ ನಡುವೆ ಪರಸ್ಪರ ಹೊಡೆದಾಟ ನಡೆದಿದೆ ಎನ್ನಲಾಗಿದೆ.

ದೂರು ದಾಖಲು:

ಸಭೆಯಲ್ಲಿ ವಿಡಿಯೋ ಮಾಡುತ್ತಿದ್ದ ಗ್ರಾಮಸ್ಥನ ಮೇಲೆ ಉಪಾಧ್ಯಕ್ಷ ತೊಗರೆ ಕೃಷ್ಣಮೂರ್ತಿ ಅವರು ಏಕಾಏಕಿ ಎದ್ದು ಬಂದು ಹಲ್ಲೆ ಮಾಡಿದ್ದಾರೆ. ಕಪಾಳಕ್ಕೆ ಹೊಡೆದಿದ್ದಾರೆ ಎಂದು ಗ್ರಾಮಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಸಭೆಯಲ್ಲಿ ಅವ್ಯಹಾರಗಳ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಿದ್ದಾರೆ. ಸಭೆಯಲ್ಲಿ ಈ ಹಿಂದೆ ಅವ್ಯಹಾರ ಎಸಗಿದವರೆ ಅಧಿಕಾರದಲ್ಲಿ ಇರುವಾಗ ನ್ಯಾಯಯುತ ತನಿಖೆ ಸಾಧ್ಯವಿಲ್ಲ. ಈ ಹಿಂದಿನ ಎಲ್ಲಾ ಕಾಮಗಾರಿಗಳ ಬಗ್ಗೆ ಸಮಗ್ರ ತನಿಖೆ ಆಗಬೇಕು. ಅಲ್ಲಿಯವರೆಗೆ ಸಭೆ ನಡೆಯಬಾರದು ಎಂದು ಆಗ್ರಹಿಸಲಾಗಿದೆ. ಇದರಿಂದ ಕುಪಿತಗೊಂಡ ಉಪಾಧ್ಯಕ್ಷ ಕೃಷ್ಣಮೂರ್ತಿ ವಿಡಿಯೋ ಮಾಡುತ್ತಿದ್ದ ಅಮಾಯಕನ ಮೇಲೆ ಹಲ್ಲೆ ಮಾಡಿದ್ದಾರೆ. ಗ್ರಾಮ ಪಂಚಾಯಿತಿಯಲ್ಲಿ ನಡೆಯುತ್ತಿರುವ ಅವ್ಯವಹಾರಗಳ ಬಗ್ಗೆ ಗ್ರಾಮಸ್ಥರು ಪ್ರಶ್ನೆ ಮಾಡಬಾರದು ಎಂದು ಭಯ ಹುಟ್ಟಿಸುವ ಹುನ್ನಾರದಿಂದ ಹಲ್ಲೆ ಮಾಡಲಾಗಿದೆ. ತಪ್ಪಿತಸ್ಥ ಜನಪ್ರತಿನಿದಿಯನ್ನು ಬಂಧಿಸಬೇಕೆಂದು ಗ್ರಾಮಸ್ಥರು ದೂರಿನಲ್ಲಿ ತಿಳಿಸಿದ್ದಾರೆ.

ರಾಜಕೀಯ ಪ್ರತಿನಿಧಿಗಳೆ ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿ:

ಅನೇಕ ವರ್ಷಗಳಿಂದ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ನಡುವೆ ಜಗಳ ನಡೆಯುತ್ತಿದ್ದು ಒಂದೇ ಗ್ರಾಮದಲ್ಲಿ ಹೊಡೆದಾಟ ಬಡಿದಾಟ ಸರಿಯಲ್ಲ ಒಂದು ಗ್ರಾಮದ ಉದ್ಧಾರಕ್ಕಾಗಿ ಹಾಗೂ ಗ್ರಾಮದ ಅಭಿವೃದ್ಧಿಯ ದೃಷ್ಠಿಯಿಂದ ಚುನಾವಣೆಯ ಸಂದರ್ಭದಲ್ಲಿ ಪಕ್ಷದ ಮೂಲಕ ಚುನಾವಣೆ ಎದುರಿಸುವುದು ಸೂಕ್ತ, ನಂತರ ಎಲ್ಲರೂ ಒಟ್ಟಿಗೆ ಗ್ರಾಮದ ಅಭಿವೃಧ್ಧಿಗಾಗಿ ಶ್ರಮಿಸಲಿ ಇದಕ್ಕೆ ಹಿರಿಯ ದೊಡ್ಡ ದೊಡ್ಡ ನಾಯಕರು ಹಿರಿಯ ರಾಜಕೀಯ ನಾಯಕರು ಚಂದ ನೋಡುವುದನ್ನು ಬಿಟ್ಟು ಗ್ರಾಮಸ್ಥರನ್ನು ಒಟ್ಟಿಗೆ ಸೇರಿಸಿ ಒಂದು ಮಾಡುವ ಕೆಲಸ ಮಾಡಲಿ ಇಲ್ಲವಾದರೆ ಮುಂದಿನ ದಿನದಲ್ಲಿ ಈ ಗ್ರಾಮದಲ್ಲಿ ದೊಡ್ಡ ಮಟ್ಟಕ್ಕೆ ಹೋಗಿ ಬಾರೀ ದೊಡ್ಡ ಅನಾಹುತವಾಗುವುದರಲ್ಲಿ ಅನುಮಾನವಿಲ್ಲ ಎಂದು ಅಲ್ಲಿನ ನಿವಾಸಿಯೊಬ್ಬರು ಹೇಳಿದ್ದಾರೆ

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here