ಹೊಸನಗರ ನೂತನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಬಾರಿಗೆ ಸಿಸೇರಿಯನ್ ಮೂಲಕ ಪ್ರಸವ

0
4097

ಹೊಸನಗರ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಈವರೆಗೆ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಸೌಲಭ್ಯ ಲಭ್ಯ ಇಲ್ಲದ ಕಾರಣ ಗರ್ಭಿಣಿಯರು ಪಕ್ಕದ ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಹಾಗೂ ಉಡುಪಿ ಜಿಲ್ಲೆಯ ಆಸ್ಪತ್ರೆಗಳಿಗೆ ತೆರಳುತ್ತಿದ್ದರು.

ಈಗ ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ತಜ್ಞ ವೈದ್ಯರುಗಳು ಸಿಬ್ಬಂದಿಗಳು ನೇಮಕಗೊಂಡಿದ್ದರಿಂದ ಎಲ್ಲ ಬಗೆಯ ಚಿಕಿತ್ಸೆಗಳು ಆಸ್ಪತ್ರೆಗಳಲ್ಲಿ ಲಭ್ಯವಿದೆ.

ಇಂದು ರಿಪ್ಪನ್‌ಪೇಟೆ ಭಾಗದ ಗರ್ಭಿಣಿಯೊಬ್ಬರು ಹೆರಿಗೆ (ಪ್ರಸವ)ಗಾಗಿ ದಾಖಲಾಗಿದ್ದು ಅವರಿಗೆ ಸಾಮಾನ್ಯ ಹೆರಿಗೆ ಕಷ್ಟಸಾಧ್ಯವಾಗಿದ್ದು ಆಸ್ಪತ್ರೆ ವೈದ್ಯ ಸಿಬ್ಬಂದಿಗಳು ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ಮಗು ಆರೋಗ್ಯವಾಗಿದ್ದು, ಮೂರೂವರೆ ಕೆಜಿ ತೂಕವಿದ್ದು ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಶಾಂತರಾಜ್, ಪ್ರಸೂತಿ ತಜ್ಞೆ ಅಮೂಲ್ಯ, ಸರ್ಜನ್ ಡಾ.ಹೇಮಂತ್, ಕೀಲು ಮೂಳೆ ತಜ್ಞ ಡಾ. ಶಿವಯೋಗಿ, ನರ್ಸಿಂಗ್ ಆಫೀಸರ್ ಶೈಲಜಾ, ಚೇತನ, ದಿನೇಶ್, ನಾಗರಾಜ್, ಧನ್ಯಕುಮಾರ್, ಗಜೇಂದ್ರ ಮೊದಲಾದ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹೊಸನಗರ ಸಾರ್ವಜನಿಕ ಆಸ್ಪತ್ರೆ ಈಗ ಸುಸಜ್ಜಿತವಾಗಿದ್ದು ಆಸ್ಪತ್ರೆ ಎಲ್ಲ ವಿಭಾಗಕ್ಕೆ ವೈದ್ಯ ಸಿಬ್ಬಂದಿಗಳು ನೇಮಕಗೊಂಡಿದ್ದು ಈ ಭಾಗದ ಜನರ ಪಾಲಿಗೆ ಒಂದು ವರವಾಗಿ ಪರಿಣಮಿಸಿದೆ.

ಜಾಹಿರಾತು

LEAVE A REPLY

Please enter your comment!
Please enter your name here