24.3 C
Shimoga
Friday, December 9, 2022

ಹೊಸನಗರ ನ್ಯಾಯಾಲಯದಲ್ಲಿ ಲೋಕ್ ಅದಾಲತ್ |
ಯಾವುದೇ ದೂರುಗಳಿದ್ದಲ್ಲಿ ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳುವುದು ಸೂಕ್ತ ; ನ್ಯಾಯಾಧೀಶೆ ಪುಷ್ಪಲತಾ ಕೆಹೊಸನಗರ: ಹೊಸನಗರದ ನ್ಯಾಯಾಲಯದಲ್ಲಿ ದಾಖಲಾಗಿರುವ ಯಾವುದೇ ದೂರುಗಳಿದ್ದಲ್ಲಿ ಅವುಗಳನ್ನು ರಾಜೀ ಸಂಧಾನದ ಮೂಲಕ ಬಗೆ ಹರಿಸಿಕೊಳ್ಳುವುದು ಸೂಕ್ತ ಎಂದು ಹಿರಿಯ ವ್ಯವಹಾರ ನ್ಯಾಯಾಲಯದ ನ್ಯಾಯಧೀಶೆ ಪುಷ್ಪಲತಾ ಕೆಯವರು ಹೇಳಿದರು.


ಹೊಸನಗರದ ಹಿರಿಯ ವ್ಯವಹಾರ ನ್ಯಾಯಾಧೀಶರಾದ ಕೆ ಪುಪ್ಪಲತಾರವರ ನೇತೃತ್ವದಲ್ಲಿ ಲೋಕ್ ಅದಾಲತ್ ರಾಜೀ ಸಂಧಾನದ ಮೂಲಕ 42 ಕೇಸುಗಳಲ್ಲಿ 21 ಕೇಸುಗಳನ್ನು ಇತ್ಯರ್ಥಪಡಿಸಿ ಮಾತನಾಡಿದರು.


ಜಮಿನು ವ್ಯಾಜ್ಯ, ಚೆಕ್ ಅಮಾನ್ಯ ಕೇಸುಗಳು, ದಾಯಾದಿಗಳ ಜಗಳ, ಗಂಡ ಹೆಂಡತಿಯ ಜಗಳ, ಅಣ್ಣ ತಮ್ಮಂದಿರ ಜಗಳ, ಮೋಟಾರ್ ವಾಹನಗಳ ಕೇಸು ಇತ್ಯಾದಿ ಜಗಳಗಳನ್ನು ರಾಜೀ ಸಂಧಾನದ ಮೂಲಕ ಬಗೆ ಹರಿಸಿಕೊಂಡರೆ ಸಂಬಂಧಗಳು ವಿಶ್ವಾಸಗಳು ಹಾಗೇಯೇ ಉಳಿಯುವುದರ ಜೊತೆಗೆ ಯಾವುದೇ ದ್ವೇಷ ಭಾವನೆ ಉಂಟಾಗುವುದಿಲ್ಲ ಇದರಿಂದ ಯಾವುದೇ ಗ್ರಾಮದಿಂದ ಪಟ್ಟಣ-ನಗರ ವ್ಯಾಪ್ತಿಗಳಲ್ಲಿ ದ್ವೇಷ ಭಾವನೆ ಬೆಳೆಯುವುದಿಲ್ಲ ಜನರು ವಾಸಿಸುವ ಪ್ರದೇಶಗಳು ಶಾಂತಿ ನೆಮ್ಮದಿಯಿಂದ ಜನರು ಬಾಳುತ್ತಿರುತ್ತಾರೆ ಆದ್ದರಿಂದ ಯಾವುದೋ ಒಂದು ಸಿಟ್ಟಿಗೆ ಮಾಡಿದ ತಪ್ಪನ್ನು ಮುಂದುವರೆಸಿಕೊಂಡು ಹೋಗದೇ ರಾಜೀ ಸಂಧಾನದ ಮೂಲಕ ಎಲ್ಲರೂ ಬಗೆ ಹರಿಸಿಕೊಂಡು ಹೋಗಬೇಕೆಂದು ಕರೆ ನೀಡಿದರು.


ಈ ಸಂದರ್ಭದಲ್ಲಿ ಶಿರಾಸ್ತೆದಾರ್‌ರಾದ ಬಸವರಾಜ್ ಜಿ, ವಕೀಲರಾದ ಗುರುಕಿರಣ್, ಎ.ಜೆ ಕರ್ಣಕುಮಾರ್, ಅಮೃತ್, ಕೋರ್ಟ್ ಸಿಬ್ಬಂದಿಯಾದ ರೇಖಾ ಹರೀಶ್ ಹಾಗೂ ವಕೀಲರು ಕಕ್ಷಿದಾರರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!