20.6 C
Shimoga
Friday, December 9, 2022

ಹೊಸನಗರ ; ನ. 23 ರಂದು ಮಹೇಶ್ವರ-ಪಾರ್ವತಿ-ಗಣಪತಿ ದೇವರ ಸನ್ನಿಧಿಯಲ್ಲಿ ಅದ್ದೂರಿ ದೀಪೋತ್ಸವ


ಹೊಸನಗರ : ಇತಿಹಾಸ ಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಮಹೇಶ್ವರ-ಪಾರ್ವತಿ-ಗಣಪತಿ ದೇವಸ್ಥಾನದ ಸನ್ನಿದ್ಧಿಯಲ್ಲಿ ನವೆಂಬರ್ 23 ಬುಧವಾರ ಅದ್ಧೂರಿ ದೀಪೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೀಪೋತ್ಸವ ಕಮಿಟಿಯ ಅಧ್ಯಕ್ಷರಾದ ಎನ್ ಶ್ರೀಧರ ಉಡುಪ ತಿಳಿಸಿದರು.


ಅವರು ದೇವಸ್ಥಾನದ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ನವೆಂಬರ್ 23ನೇ ಬುಧವಾರ ಬೆಳಿಗ್ಗೆ 9ಗಂಟೆಯಿಂದ 12;30ರವರೆಗೆ ಶ್ರೀಗಣಪತಿ ದೇವರ ಸನ್ನಿಧಿಯಲ್ಲಿ ಷಣ್ಣಾಳಿಕೇರ ಮಹಾಗಣಪತಿ ಹವನ, ಶತರುದ್ರಾಭಿಷೇಕ ಪ್ರರ್ಣಾಹುತಿ, ಕುಂಕುಮಾರ್ಚನೆ, ತುಳಸಿ ಅರ್ಚನೆ, ಪುಷ್ಪಾರ್ಚನೆ ಮಹಾಮಂಗಳಾರತಿ ಪ್ರಸಾದ ವಿನಿಯೋಗ ಪ್ರಜಾ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 1ಗಂಟೆಗೆ ಹಾಗೂ ರಾತ್ರಿ 9;00ಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ರಾತ್ರಿ 10ಗಂಟೆಗೆ ಅಂಚೆ ಕಛೇರಿಯ ರಸ್ತೆಯಲ್ಲಿ ಭವ್ಯ ರಂಗಮಂದಿರದಲ್ಲಿ ಕರಾವಳಿಯ ಸುಪ್ರಸಿದ್ಧ ಯಕ್ಷಗಾನ ಬಯಲಾಟ ಸುದರ್ಶನ ವಿಜಯ ಎಂಬ ಪುಣ್ಯಕಥಾಭಾಗವನ್ನು ಸುಂದರವಾಗಿ ಅಭಿನಯಿಸಲಿದ್ದು ರಾತ್ರಿ 9ಗಂಟೆಯಿಂದ ದೇವಸ್ಥಾನದ ಮಹಾದ್ವಾರ ವೃತ್ತದಲ್ಲಿ ಗಣಪತಿ ದೇವರ ಮೂರ್ತಿಯನ್ನು ಪೂಜೆಗೆ ಇಡಲಾಗಿದ್ದು ಹೊಸನಗರ ತಾಲ್ಲೂಕಿನ ಈ ದೇವಸ್ಥಾನದ ಭಕ್ತಾರು ಹಾಗೂ ಸಾರ್ವಜನಿಕರು ಹಣ್ಣು-ಕಾಯಿ ಪೂಜೆ ಸಲ್ಲಿಸುವುದರ ಜೊತೆಗೆ ಈ ದೀಪೋತ್ಸವವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡರು.


ಈ ಸಂದರ್ಭದಲ್ಲಿ ದಿಪೋತ್ಸವ ಕಮಿಟಿಯ ಕಾರ್ಯದರ್ಶಿ ಸುದೇಶ್ ಕಾಮತ್, ಶ್ರೀನಿವಾಸ್ ಕಾಮತ್ ಹಾಗೂ ದೀಪೋತ್ಸವ ಕಮಿಟಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!