ಹೊಸನಗರ ಪಟ್ಟಣದಲ್ಲಿ ಆರೋಗ್ಯಾಧಿಕಾರಿಗಳಿಂದ ಬೀಡಾ ಅಂಗಡಿಗಳ ಮೇಲೆ ದಾಳಿ !

0
2437

ಹೊಸನಗರ: ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಷೇಧ ಕಾಯ್ದೆಯ ಆದೇಶದ ಮೇರೆಗೆ ಹೊಸನಗರ ಪಟ್ಟಣದಲ್ಲಿ 10 ಅಂಗಡಿಗಳ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಸುಮಾರು 1 ಸಾವಿರದಷ್ಟು ರೂ ಅನ್ನು ದಂಡದ ರೂಪದಲ್ಲಿ ಸರ್ಕಾರಕ್ಕೆ ಕಟ್ಟಿಸಿಕೊಂಡಿದ್ದಾರೆ.

ಈ ದಾಳಿಯಲ್ಲಿ ಜಿಲ್ಲಾ ಸಲಹೆಗಾರರಾದ ಹೇಮಂತ್‌ರಾಜ್ ಅರಸ್, ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿಯಾದ ಕರಿಬಸಮ್ಮ, ಹಿರಿಯ ಆರೋಗ್ಯ ನಿರೀಕ್ಷಕ ಅಧಿಕಾರಿಗಳಾದ ರಮೇಶ್ ಆಚಾರ್ ಹಾಗೂ ಇನ್ನಿತರ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ದಾಳಿಯಲ್ಲಿ ಪಾಲ್ಗೊಂಡಿದ್ದರು.

ಅಧಿಕಾರಿಗಳಿಗೆ ಬೀಡಾ ಅಂಗಡಿಗಳು ಮಾತ್ರ ಕಣ್ಣಿಗೆ ಕಾಣುವುದೇ?

ಹೊಸನಗರ ಪಟ್ಟಣದಲ್ಲಿ ತಿಂಗಳಿಗೆ ಮೂರು ಬಾರಿ ಬೀಡ ಅಂಗಡಿ ಮತ್ತು ಸಣ್ಣ-ಪುಟ್ಟ ಅಂಗಡಿಗಳ ಮೇಲೆ ದಾಳಿ ನಡೆಸಿ ಒಂದೊಂದು ಅಂಗಡಿಯ ಮೇಲೆ 100ರೂಪಾಯಿಯಂತೆ ದಂಡ ಕಟ್ಟಿಸಿಕೊಳ್ಳುವುದು ಸರ್ಕಾರಕ್ಕೆ ಕಣ್ಣು ಒರೆಸುವ ತಂತ್ರವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದು ಅಧಿಕಾರಿಗಳು ದೊಡ್ಡ-ದೊಡ್ಡ ಅಂಗಡಿಗಳ ಮೇಲೆ ದಾಳಿ ನಡೆಸಿದರೆ ಲಾರಿ ತುಂಬುವಷ್ಟು ತಂಬಾಕು, ಗುಟ್ಕಾಗಳು ಸಿಗುತ್ತದೆ ದಂಡದ ರೂಪದಲ್ಲಿ ಸರ್ಕಾರಕ್ಕೆ ಸಾಕಷ್ಟು ಹಣ ಬರುತ್ತದೆ. ಆದರೆ ಅದಿಕಾರಿಗಳಿಗೆ ಸಣ್ಣ-ಪುಟ್ಟ ಅಂಗಡಿಗಳು ಮಾತ್ರ ಕಣ್ಣಿಗೆ ಕಾಣುತ್ತಿದ್ದು ಹೋಲ್ ಸೇಲ್ ಅಂಗಡಿಗಳಲ್ಲಿ ಮಾರಾಟವಾಗುವ ತಂಬಾಕು ಅಂಗಡಿಗಳು ಕಣ್ಣಿಗೆ ಕಾಣುತ್ತಿಲ್ಲ ಅದು ಅಲ್ಲದೇ ಕಣ್ಣಿಗೆ ಕಂಡರೂ ಕಣದಂತೆ ಹೋಗುತ್ತಿರುವುದು ಒಂದು ವಿಪರ್ಯಸವಾಗಿದೆ. ದಾಳಿ ನಡೆಸುವುದಾದರೆ ಎಲ್ಲ ಅಂಗಡಿಗಳ ಮೇಲೂ ದಾಳಿ ನಡೆಸಿ ಸರ್ಕಾರದ ಬೊಕ್ಕಸ ತುಂಬಿಸಲಿ ಎಂಬುದು ಗೂಡಂಗಡಿ ಸಣ್ಣ-ಪುಟ್ಟ ಅಂಗಡಿಗಳ ಮತ್ತು ಹೊಸನಗರದ ಸಾರ್ವಜನಿಕರ ಒತ್ತಾಯವಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here