ಹೊಸನಗರ ಪಟ್ಟಣದಲ್ಲಿ ಬೀದಿ ನಾಯಿ ಹಾಗೂ ಮಂಗಗಳ ಹಾವಾಳಿ ಹೆಚ್ಚಿದೆ: ಹಾಲಗದ್ದೆ ಉಮೇಶ್

0
777

ಹೊಸನಗರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ನಾಯಿಗಳು ಮತ್ತು ಮಂಗಗಳ ಹಾವಾಳಿ ಹೆಚ್ಚಾಗಿದ್ದು ಪಟ್ಟಣದ ನಿವಾಸಿಗಳಿಗೆ ತೊಂದರೆ ನೀಡುತ್ತಿದೆ ತಕ್ಷಣ ಟೆಂಡರ್ ಕರೆದು ಅವುಗಳನ್ನು ಹಿಡಿಸಬೇಕೆಂದು ಪಟ್ಟಣ ಪಂಚಾಯಿತಿಯ ಮಾಜಿ ಅಧ್ಯಕ್ಷ, ಹಾಲಿ ಸದಸ್ಯರಾದ ಹಾಲಗದ್ದೆ ಉಮೇಶ್‌ರವರು ಸಭೆಯ ಗಮನಕ್ಕೆ ತಂದರು.

ಹೊಸನಗರದ ಪಟ್ಟಣ ಪಂಚಾಯಿತಿ ಆವರಣದಲ್ಲಿ ಶುಕ್ರವಾರ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಯು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಗುಲಾಬಿ ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ನಡೆಯಿತು.

ಸುಮಾರು ಮೂರು ತಿಂಗಳಿಂದ ವಿಪರೀತ ನಾಯಿಗಳ ಸಂಖ್ಯೆ ಹೆಚ್ಚಾಗಿದೆ. ಬೆಳಗ್ಗೆ ವಾರ್ಕಿಂಗ್‌ಗೆ ಹೋಗುವಾಗ ನನಗೆ ಬೀದಿ ನಾಯಿ ಕಚ್ಚಿದೆ ಬೆಳಗಿನ ವೇಳೆಯಲ್ಲಿ ವಯೋವೃದ್ಧರು, ಮಕ್ಕಳು, ಸಾಮಾನ್ಯ ಜನರು ವಾಕಿಂಗ್ ಮಾಡುತ್ತಿದ್ದಾರೆ ಬೀದಿ ನಾಯಿಗಳಿಂದ ಎಲ್ಲರಿಗೂ ತೊಂದರೆಯಾಗುವ ಜೊತೆಗೆ ಮುಖ್ಯ ರಸ್ತೆಗಳಲ್ಲಿ ವಾಹನಗಳಿಗೆ ಅಡ್ಡಾದಿಡ್ಡಿಯಾಗಿ ಬಂದು ವಾಹನ ಸಾವರರು ಬೀಳುತ್ತಿರುವ ದೃಶ್ಯಗಳನ್ನು ನಾವು ನೋಡುತ್ತಿದ್ದೇವೆ. ಅದೇ ರೀತಿ ಮಂಗಗಳು ಮನೆಯಲ್ಲಿ ಲೂಟಿ ನೀಡುತ್ತಿದೆ ತಕ್ಷಣ ಮಂಗಗಳನ್ನು ಹಾಗೂ ನಾಯಿಗಳನ್ನು ಹಿಡಿಸುವ ಕಾರ್ಯ ಕೈಗೊಳ್ಳಿ ಎಂದರು.

ಇದಕ್ಕೆ ಉತ್ತರಿಸಿದ ಪಟ್ಟಣ ಪಂಚಾಯಿತಿ ಸದಸ್ಯ ಗುರುರಾಜ್, ನಾಯಿ ಹಾಗೂ ಮಂಗಗಳನ್ನು ಹಿಡಿಯಲು ಯಾರು ಬರುತ್ತಿಲ್ಲ. ಟೆಂಡರ್ ಕರೆದು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಹೊಸನಗರ ಪಟ್ಟಣ ಅಭಿವೃದ್ಧಿಪಡಿಸಿ:

ಜೆಡಿಎಸ್ ಪಕ್ಷದಿಂದ ಅಧ್ಯಕ್ಷರ, ಉಪಾಧ್ಯಕ್ಷರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಹೋಗಿ ಉಪಾಧ್ಯಕ್ಷರಾಗಿರುವ ಕೃಷ್ಣವೇಣಿಯವರೇ ಪಟ್ಟಣವನ್ನು ಅಭಿವೃದ್ಧಿಪಡಿಸಿ, ನೀವು ಜೆಡಿಎಸ್ ಪಕ್ಷದಿಂದ ಬಿಜೆಪಿಗೆ ಹೋಗುವ ಸಂದರ್ಭದಲ್ಲಿ ಹೊಸನಗರ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವಿದೆ. ಹೊಸನಗರ ಪಟ್ಟಣವನ್ನು ಅಭಿವೃದ್ಧಿಪಡಿಸುವ ಉದ್ಧೇಶದಿಂದ ಜೆಡಿಎಸ್ ಪಕ್ಷ ತೊರೆದು ಬಿಜೆಪಿಗೆ ಹೋಗಿ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾಗಿದ್ದೀರಿ ಇನ್ನಾದರೂ ಶಾಸಕರು ಹಾಗೂ ಸರ್ಕಾರದಿಂದ ಅನುದಾನ ತರುವ ಬಗ್ಗೆ ಯೋಚಿಸಿ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಹಾಲಗದ್ದೆ ಉಮೇಶ್‌ರವರು ಹೇಳಿದಾಗ, ನೀವು ನಮ್ಮ ಪಟ್ಟಣ ಪಂಚಾಯಿತಿ ಸದಸ್ಯರು ನೀವು ಪಟ್ಟಣದ ಅಭಿವೃದ್ಧಿಗಾಗಿ ಎಲ್ಲ ಸದಸ್ಯರು ಒಟ್ಟಾಗಿ ಶಾಸಕರನ್ನು ಕೇಳೋಣ ಬನ್ನಿ ಎಂದು ಕೃಷ್ಣವೇಣಿಯವರು ಸಭೆಗೆ ತಿಳಿಸಿದರು.

ಈ ಸಭೆಯಲ್ಲಿ ಒಟ್ಟು 17 ವಿಷಯಗಳ ಬಗ್ಗೆ ಚರ್ಚೆ ನಡೆಯಿತು.

ಈ ಸಾಮಾನ್ಯ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಬಾಲಚಂದ್ರಪ್ಪ, ಸದಸ್ಯರಾದ ಗುರುರಾಜ್, ಸುರೇಂದ್ರ, ನಾಗಪ್ಪ, ಗಾಯಿತ್ರಿ ನಾಗರಾಜ್, ಅಶ್ವಿನಿಕುಮಾರ್, ಶಾಹೀನಬಾನು, ಸಿಂಥೀಯ, ಚಂದ್ರಕಲಾ ನಾಗರಾಜ್, ಪಟ್ಟಣ ಪಂಚಾಯಿತಿಯ ಆರೋಗ್ಯಾಧಿಕಾರಿ ಪ್ರಶಾಂತ್, ಕಂದಾಯ ಅಧಿಕಾರಿ ಪರಶುರಾಮ್, ಇಂಜಿನೀಯರ್ ಗಣೇಶ್ ಹೆಗಡೆ, ಉಮಾ ಶಂಕರ್, ಬಸವರಾಜ್, ಶ್ರೀಮತಿ ಸುಮಿತ್ರ, ಆಸ್ಮಾ ಬಾನು, ಶ್ರೀಮತಿ ನೇತ್ರಾ, ಕುಮಾರಿ, ಲಕ್ಷ್ಮಣ, ಯಶೋದಮ್ಮ, ಚಂದ್ರಪ್ಪ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here