ಹೊಸನಗರ ಪಟ್ಟಣದಲ್ಲಿ 2ನೇ ವೀಕೆಂಡ್ ಕರ್ಫ್ಯೂ ಯಶಸ್ವಿ

0
419

ಹೊಸನಗರ: ರಾಜ್ಯ ಸರ್ಕಾರ ಶುಕ್ರವಾರ ರಾತ್ರಿ 10ಗಂಟೆಯಿಂದ ಸೋಮವಾರ ಬೆಳಿಗ್ಗೆ 5ಗಂಟೆಯವರೆಗೆ ಕೊರೊನಾ ನಿಯಂತ್ರಣಕ್ಕಾಗಿ ಕರ್ಫ್ಯೂ ಜಾರಿಗಳಿಸಲಾಗಿದ್ದು ಹೊಸನಗರ ಪಟ್ಟಣದ ಕೆಲವು ಅಂಗಡಿಗಳು ಸ್ವಯಂ ಘೋಷಿತವಾಗಿ ಬಂದ್ ಮಾಡಿ 2ನೇ ವೀಕ್ ಎಂಡ್ ಕರ್ಫ್ಯೂಗೆ ಜನ ಸ್ಪಂದಿಸಿದ್ದಾರೆ.

ಹೊಸನಗರದಲ್ಲಿ ಎಂದಿನಂತೆ ದಿನಸಿ ಅಂಗಡಿ, ಹಾಲು, ತರಕಾರಿ, ಪೆಟ್ರೋಲ್ ಬಂಕ್‌ಗಳು ಕೆಲವು ಹೋಟೆಲ್‌ಗಳಲ್ಲಿ ಪಾರ್ಸೆಲ್‌ ಸೇವೆ ಲಭ್ಯವಿದ್ದು, ಮಾಂಸದ ಅಂಗಡಿ ಕೋಳಿ ಅಂಗಡಿಗಳು ತೆರೆದಿದ್ದು ಕೇಂದ್ರ ಸರ್ಕಾರದ ಅಧೀನದಲ್ಲಿರುವ ಅಂಚೆ ಕಛೇರಿ ಎಂದಿನಂತೆ ಕೆಲಸ ನಿರ್ವಹಿಸುತ್ತಿದ್ದು ಶಾಲಾ ಕಾಲೇಜ್‌ಗಳು, ಬ್ಯಾಂಕ್, ಸರ್ಕಾರಿ ಕಛೇರಿಗಳು, ಪಾತ್ರೆ ಅಂಗಡಿ, ಬ್ಯಾಂಗಲ್ ಸ್ಟೋರ್ ಗಳು, ಬಟ್ಟೆ ಅಂಗಡಿಗಳು, ಸಲೂನ್ ಅಂಗಡಿಗಳು ಚಿನ್ನದ ಅಂಗಡಿಗಳು ಮುಚ್ಚಿವೆ. ಬಸ್‌ಗಳ ಸಂಚಾರ ವಿರಳವಾಗಿದೆ. ಆದರೆ ವಾಹನಗಳು ಎಂದಿನಂತೆ ಸಂಚರಿಸುತ್ತಿವೆ.

ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿರುವ ಇತರೆ ಅಂಗಡಿಯವರು :

ಕೆಲವು ಅಂಗಡಿಗಳು ಲಾಕ್‌ಡೌನ್ ಕರ್ಫ್ಯೂ ಇರಲಿ ತಮ್ಮ ಪಾಡಿಗೆ ವ್ಯಾಪಾರ ವಾಹಿವಾಟು ಮಾಡಿಕೊಂಡು ಮನೆ ಕಡೆಗೆ ಹೋಗುತ್ತಿದ್ದಾರೆ ಹೋಟೆಲ್‌ಗಳಲ್ಲಿಯೂ ಪಾರ್ಸೆಲ್ ಸರ್ವಿಸ್ ಇದೆ. ಜನರು ಹೊರಬರಲು ಯಾವುದೇ ತೊಂದರೆಯಿಲ್ಲ ಆದರೆ ನಮಗೆ ಮಾತ್ರ ಅಂಗಡಿಗಳ ಬಾಗಿಲು ತೆರೆದರೆ ಕೊರೊನಾ ಬರುತ್ತದೆ ಎಂದು ಕೇಸು ಹಾಕಲು ಪೊಲೀಸ್ ಇಲಾಖೆಗೆ ಸರ್ಕಾರ ತಿಳಿಸಿರುವುದು ಎಷ್ಟು ಸಮಂಜಸ? ಎಂದು ಬಾಗಿಲು ಹಾಕಿರುವ ಇತರೆ ಅಂಗಡಿಯವರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಸರ್ಕಾರಗಳು ಎಲ್ಲರಿಗೂ ಒಂದೇ ಕಾನೂನು ಜಾರಿಗೊಳಿಸಲಿ ಅದನ್ನು ಬಿಟ್ಟು ಒಬ್ಬರಿಗೆ ಒಂದು ನ್ಯಾಯ ಇನ್ನೊಬ್ಬರಿಗೆ ಇನ್ನೊಂದು ನ್ಯಾಯ ಸರಿಯಲ್ಲ. ಮುಂದಿನ ಲಾಕ್‌ಡೌನ್ ಸಂದರ್ಭದಲ್ಲಿ ಎಲ್ಲರಿಗೂ ಒಂದು ಸಮಯ ನಿಗದಿ ಮಾಡಿ ನಮಗೂ ವ್ಯಾಪಾರ ಮಾಡಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here