ಹೊಸನಗರ ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿ ಓಡಾಡುವ ಯಮಸ್ವರೂಪಿ ಲಾರಿಗಳು, ಆತಂಕದಲ್ಲಿ ಪೋಷಕರು !

0
1280

ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ಮಾಡುವ, ಇಟ್ಟಿಗೆ ಕಲ್ಲುಗಳನ್ನು ಹಾಗೂ ಅಕ್ರಮ ಜಾನುವಾರುಗಳನ್ನು ಸಾಗಿಸುವ ಲಾರಿಗಳು ಟಿಪ್ಪರ್ ಗಳ ವ್ಯಾನ್ ಗಳು ಪಟ್ಟಣ ವ್ಯಾಪ್ತಿಯಲ್ಲಿ ಅತಿವೇಗದಿಂದ ಚಾಲನೆ ಮಾಡುತ್ತಿದ್ದು ಕಾರಣ ಆ ಭಾಗದ ಪೋಷಕರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

ಈ ರಸ್ತೆಯಲ್ಲಿ ಶ್ರೀರಾಮಕೃಷ್ಣ ವಿದ್ಯಾಲಯದ, ಶ್ರೀ ಮಲೆನಾಡು ಪ್ರೌಢಶಾಲೆ ಹಾಗೂ ಶ್ರೀ ಗುರೂಜಿ ಇಂಟರ್ ನ್ಯಾಷನಲ್ ಶಾಲೆಯ ನೂರಾರು ಮಕ್ಕಳು ಹಾಗೂ ಶ್ರೀ ರಾಘವೇಂದ್ರ ಸ್ವಾಮಿ ಮಠ, ಶ್ರೀ ಮಾರಿಕಾಂಬ ದೇವಸ್ಥಾನ, ಶ್ರೀ ರಾಮೇಶ್ವರ ದೇವಸ್ಥಾನಗಳಿಗೆ ಹೋಗುವ ಭಕ್ತರು, ವಿದ್ಯಾರ್ಥಿ ನಿಲಯಗಳಿಗೆ ಹೋಗುವ ವಿದ್ಯಾರ್ಥಿಗಳು, ಪ್ರವಾಸಿ ಮಂದಿರ, ಸಾಮರ್ಥ್ಯ ಸೌಧ, ಸರ್ಕಲ್ ಇನ್ಸ್‌ಪೆಕ್ಟರ್ ರವರ ಕಚೇರಿ, ಅಗ್ನಿಶಾಮಕ ದಳದ ಕಚೇರಿಗಳಿಗೆ ಹೋಗುವವರು ಇದೇ ರಸ್ತೆಯನ್ನು ಅವಲಂಬಿಸಿದ್ದು, ಈ ರಸ್ತೆಯಲ್ಲಿ ಓಡಾಡೋ ವಾಹನಗಳಿಂದ ಸಾರ್ವಜನಿಕರಿಗೆ ಆತಂಕ ಪ್ರಾಣಭಯ ಉಂಟಾಗಿದ್ದು ಪ್ರತಿದಿನ ಈ ರಸ್ತೆಗಳಲ್ಲಿ ಬಿಡಾಡಿ ನಾಯಿಗಳು ದನ-ಕರುಗಳು ಈ ವಾಹನಗಳಿಗೆ ಸಿಕ್ಕಿ ಸಾಯುತ್ತಿದ್ದ ಬಗ್ಗೆ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಹಗಲು ರಾತ್ರಿ ಎನ್ನದೆ ಓಡಾಡುವ ವಾಹನಗಳಿಗೆ ಕಡಿವಾಣ ಹಾಕಬೇಕೆಂದು ಈ ರಸ್ತೆಯ ಆಯ್ದ ಸ್ಥಳಗಳಲ್ಲಿ ಅಪಘಾತಗಳನ್ನು ತಪ್ಪಿಸಲು ಹಂಪ್ ಗಳನ್ನು ನಿರ್ಮಿಸಿ ಈ ರಸ್ತೆ ಯಲ್ಲಿ ಓಡಾಡುವ ಸಾರ್ವಜನಿಕರಿಗೆ ಹಾಗೂ ನಿವಾಸಿಗಳ ಆತಂಕ ನಿವಾರಿಸುವಂತಾಗಬೇಕು ಎಂದು ಆಗ್ರಹಿಸಿದ್ದಾರೆ.

ಹಗಲು ರಾತ್ರಿಯೆನ್ನದೆ ದಿನದ 24ಗಂಟೆಯೂ ಅತಿವೇಗದಿಂದ ಚಲಿಸುವ ವಾಹನಗಳ ವಿರುದ್ಧ ರಕ್ಷಣಾ ಇಲಾಖೆ ಕ್ರಮ ಕೈಗೊಳ್ಳುವ ಮೂಲಕ ಕಡಿವಾಣ ಹಾಕಬೇಕೆಂದು ಅಲ್ಲಿನ ನಿವಾಸಿಗಳು ಒತ್ತಾಯಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here