ಹೊಸನಗರ: ಇಲ್ಲಿನ ಪಟ್ಟಣ ಪಂಚಾಯಿತಿ ಕಾರ್ಯಾಲಯವು ಪಟ್ಟಣ ವ್ಯಾಪ್ತಿಯ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಮುಕ್ತಿ ವಾಹನ ಸೌಲಭ್ಯ ಕಲ್ಪಿಸಿದೆ.
ಈ ವಾಹನ ಸೌಲಭ್ಯ ಪಟ್ಟಣ ವ್ಯಾಪ್ತಿಯ ಹೊರಗಿನವರಿಗೆ ದೊರಕುತ್ತಿಲ್ಲದ ಕಾರಣ ಅಲ್ಲದೆ ಪಟ್ಟಣ ವ್ಯಾಪ್ತಿಯಲ್ಲಿ ಮೃತಪಟ್ಟವರಿಗೆ ಶವಸಂಸ್ಕಾರಕ್ಕೆ ಹೆಣ ಸುಡಲು ಕಟ್ಟಿಗೆಯ ತೀವ್ರ ಕೊರತೆಯಿದ್ದು ಅರಣ್ಯ ಇಲಾಖೆಯಲ್ಲಿ ಸಹಿತ ಹೆಣ ಸುಡಲು ಕಟ್ಟಿಗೆ ನೀಡುತ್ತಿಲ್ಲವಾದ ಕಾರಣ ಪಟ್ಟಣ ಪಂಚಾಯಿತಿಯವರು ಮುಕ್ತಿ ವಾಹನವನ್ನು ಪಟ್ಟಣ ವ್ಯಾಪ್ತಿಯ 20 ಕಿಲೋ ಮೀಟರ್ ಸುತ್ತಳತೆಯಲ್ಲಿ ಸೌಲಭ್ಯ ಒದಗಿಸುವ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಹಾಗೂ ಶವ ಸಂಸ್ಕಾರಕ್ಕೆ ಲಭ್ಯವಾದ ಕಟ್ಟಿಗೆ ವ್ಯವಸ್ಥೆಯನ್ನು ಸಹ ಪಂಚಾಯತಿಯವರು ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕೆಂದು ಹಾಗೂ ಪಟ್ಟಣ ಪಂಚಾಯತಿಯ ಬಸ್ ನಿಲ್ದಾಣದಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳು ಬಂದಾಗ ಖಾಸಗಿ ಬಸ್ಸು ಏಜೆಂಟರುಗಳು ವಿನಃಕಾರಣ ಜಗಳ ಮಾಡುತ್ತಿದ್ದ ಕಾರಣ ಪಟ್ಟಣ ಪಂಚಾಯತಿಯ ಬಸ್ಸು ನಿಲ್ದಾಣ ಒಳಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಸುಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸುವುದು ಅಗತ್ಯವಾಗಿದೆ ಎಂದು ಪಟ್ಟಣದ ಸಾರ್ವಜನಿಕರ ಪರವಾಗಿ ಪೂರ್ಣೇಶ್ ಮಲೆಬೈಲ್, ಹಿಟಾಚಿ ಶ್ರೀಧರ್, ಸ್ಪಂದನ ಸುರೇಶ್, ನವಶಕ್ತಿ ರಮೇಶ್, ಕೆ.ಎಸ್ ಚಂದ್ರಶೇಖರ್ ಶೆಟ್ಟಿ, ಕೆ.ಜಿ ನಾಗೇಶ್, ಮನು ಮೊದಲಾದವರು ಪಟ್ಟಣ ಪಂಚಾಯತಿಗೆ ತೆರಳಿ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪನವರಿಗೆ ಪರಿಸ್ಥಿತಿಯ ಮನವರಿಕೆ ಮಾಡಿ ಮನವಿ ಸಲ್ಲಿಸಿ ತಕ್ಷಣ ತುರ್ತು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.