ಹೊಸನಗರ ಪಪಂ ವತಿಯಿಂದ ಶೀಘ್ರ ಬಟ್ಟೆ ಚೀಲ, ಬಕೇಟ್ ವಿತರಣೆ: ಟಿ.ಬಾಲಚಂದ್ರಪ್ಪ

0
641

ಹೊಸನಗರ: ಪಟ್ಟಣವನ್ನು ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿ ಮಾಡುವ ಉದ್ಧೇಶದಿಂದ ಹೊಸನಗರ ಪಟ್ಟಣದಲ್ಲಿರುವ ಪ್ರತಿ ಮನೆ-ಮನೆಗಳಿಗೂ ಬಟ್ಟೆ ಚೀಲವನ್ನು ವಿತರಿಸಲಾಗುವುದು ಎಂದು ಪಟ್ಟಣ ಪಂಚಾಯಿತಿಯ ಮುಖ್ಯಾದಿಕಾರಿ ಟಿ‌ ಬಾಲಚಂದ್ರಪ್ಪನವರು ಹೇಳಿದರು.

ಪಟ್ಟಣ ಪಂಚಾಯಿತಿಯ ಆವರಣದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿ, ಸುಪ್ರೀಂಕೋರ್ಟ್ ಆದೇಶದ ಅನ್ವಯ ಹಾಗೂ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳು ಪ್ಲಾಸ್ಟಿಕ್ ನಿಷೇಧ ಕಾಯ್ದೆ ಜಾರಿಗೆ ತಂದಿದ್ದು ಆದರೂ ಕೆಲವು ದಿನಸಿ ಅಂಗಡಿಗಳಲ್ಲಿ, ಸಂತೆಗಳಲ್ಲಿ ಸಾಮಾನುಗಳನ್ನು ಪ್ಲಾಸ್ಟಿಕ್‌ಗಳಲ್ಲಿ ಹಾಕಿಕೊಡುವುದು ನಮ್ಮ ಗಮನಕ್ಕೆ ಬಂದಿದೆ‌‌‌. ಈ ಪ್ಲಾಸ್ಟಿಕ್ ನಿರ್ಮೂಲನೆ ಮಾಡಬೇಕಾದರೆ ಹೆಚ್ಚು-ಹೆಚ್ಚು ಬಟ್ಟೆಯ ಚೀಲದ ಅವಶ್ಯಕತೆಯಿದ್ದು ಸಾರ್ವಜನಿಕರು ಹಾಗೂ ಅಂಗಡಿಯವರು ನಮ್ಮೊಂದಿಗೆ ಕೈ ಜೋಡಿಸಬೇಕಾಗಿದೆ. ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಗುಲಾಬಿ ಮರಿಯಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಪ್ರತಿ ಮನೆ-ಮನೆಗೆ ಬಟ್ಟೆ ಚೀಲಗಳನ್ನು ನೀಡುವ ಬಗ್ಗೆ ಸರ್ವಾನುಮತದಿಂದ ತಿರ್ಮಾನಿಸಲಾಗಿದೆ ಮುಂದಿನ ದಿನದಲ್ಲಿ ಅಂಗಡಿ ಮಾಲೀಕರು ಹೆಚ್ಚು-ಹೆಚ್ಚು ಬಟ್ಟೆ ಚೀಲಗಳನ್ನು ಉಪಯೋಗಿಸಿ ಸರ್ಕಾರದ ಪ್ಲಾಸ್ಟಿಕ್ ಮುಕ್ತ ಆದೇಶಕ್ಕೆ ಕೈ ಜೋಡಿಸಬೇಕಾಗಿದೆ ಆದ್ದರಿಂದ ತಕ್ಷಣ ಬಟ್ಟೆ ಚೀಲವನ್ನು ನೀಡುವ ವ್ಯವಸ್ಥೆ ಮಾಡಲಾಗುವುದು ನಂತರವೂ ಪ್ಲಾಸ್ಟಿಕ್ ಚೀಲಗಳನ್ನು ಉಪಯೋಗಿಸಿದರೆ ಸರ್ಕಾರದ ಕಾಯ್ದೆಯಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಹಸಿಕಸ, ಒಣ ಕಸ ಬೇರ್ಪಡಿಸಲು ಬಕೇಟ್‌ಗಳ ಹಂಚಿಕೆ:

ಹೊಸನಗರ ಪಟ್ಟಣದ ನಿವಾಸಿಗಳು ಹಸಿಕಸ-ಒಣಕಸವನ್ನು ಬೇರ್ಪಡಿಸದೇ ಹಾಗೇ ನಮ್ಮ ವಾಹನಕ್ಕೆ ನೀಡುತ್ತಿದ್ದು ಇದರಿಂದ ಗೊಬ್ಬರವನ್ನು ಮಾಡಲು ತೊಂದರೆಯಾಗುತ್ತಿದೆಯಲ್ಲದೇ ಬೇರ್ಪಡಿಸಲು ಸಾಧ್ಯವಾಗದೇ ಇರುವುದರಿಂದ ಪ್ರತಿ ಮನೆ-ಮನೆಗಳಿಗೆ ಹಸಿಕಸ-ಒಣ ಕಸವನ್ನು ಬೇರ್ಪಡಿಸಿ ಕೊಡಲು ಎರಡು ಬಕೇಟ್‌ಗಳನ್ನು ನೀಡಲು ತಿರ್ಮಾನಿಸಿದ್ದು ಪಟ್ಟಣದ ನಿವಾಸಿಗಳು ಹಸಿಕಸ-ಒಣಕಸವನ್ನು ಬೇರ್ಪಡಿಸಿ ನಮ್ಮ ವಾಹನಕ್ಕೆ ನೀಡಬೇಕೆಂದು ಕೇಳಿಕೊಂಡರು.

ಪಪಂಯಿಂದ ಹೂ ಅಂಗಡಿ ನೀಡಿಕೆ:

ಹೊಸನಗರದ ಬಸ್ಸ್ ಸ್ಟ್ಯಾಂಡ್ ಸಮೀಪ ರಸ್ತೆಗಳಲ್ಲಿ ಹೂ ವ್ಯಾಪಾರಿಗಳು ಬೀದಿ ಬದಿಯಲ್ಲಿ ಹೂ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡುತ್ತಿದ್ದು ಅದಕ್ಕಾಗಿ ಬಸ್ ಸ್ಟ್ಯಾಂಡ್ ಎದುರಿಗೆ ಶೆಡ್ ಖಾಲಿ ಇದ್ದು ಹೂ ವ್ಯಾಪಾರಿಗಳಿಗೆ ಒಂದೆ ಕಡೆ ಕುಳಿತು ವ್ಯಾಪಾರ ಮಾಡಲಿ ಎಂಬ ಉದ್ದೇಶದಿಂದ ಬಸ್ಸ್ ಸ್ಟ್ಯಾಂಡ್ ಎದುರಿನ ಶೆಡ್‌ನಲ್ಲಿ ಜಾಗ ಮಾಡಿಕೊಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ಪರಶುರಾಮ್, ಆರೋಗ್ಯಾಧಿಕಾರಿ ಪ್ರಶಾಂತ್, ಇಂಜಿನೀಯರ್ ಗಣೇಶ್ ಹೆಗ್ಡೆ, ಐ.ಟಿ ಇಂಜಿನೀಯರ್, ಗಿರೀಶ್, ರೆವಿನ್ಯೂ ಇನ್ಸ್‌ಪೆಕ್ಟರ್ ಉಮಾ ಶಂಕರ್, ವಾಟರ್ ಇಂಜಿನೀಯರ್ ಬಸವರಾಜ್, ಲೆಕ್ಕಾಧಿಕಾರಿ ಆಸ್ಮಾ, ಪ್ರಥಮ ದರ್ಜೆ ಗುಮಾಸ್ಥರಾದ ನೇತ್ರಾ, ಕುಮಾರಿ, ಚಂದ್ರಪ್ಪ, ಯಶೋಧಮ್ಮ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here