ಹೊಸನಗರ ಪಪಂ ವ್ಯಾಪ್ತಿಯ ಜನರು ಹಾಗೂ ಸಾರ್ವಜನಿಕರು ಓಡಾಟ ನಡೆಸುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿ: ಟಿ. ಬಾಲಚಂದ್ರಪ್ಪ

0
429

ಹೊಸನಗರ: ಪಟ್ಟಣ ಪಂಚಾಯಿತಿಯ ವ್ಯಾಪ್ತಿಯ 11 ವಾರ್ಡ್ ಗಳ ಗ್ರಾಮಸ್ಥರು ಹಾಗೂ ಹೊಸನಗರ ತಾಲ್ಲೂಕಿನ ಜನರು ಬಸ್ ಗಳಲ್ಲಿ ಓಡಾಟ ನಡೆಸುವಾಗ ಬಸ್ಸ್ ಸ್ಟ್ಯಾಂಡ್‌ಗೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಬರಬೇಕೆಂದು ಹೊಸನಗರ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪನವರು ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದರು.

ಭಾರತ ದೇಶದಲ್ಲಿ ಕೊರೊನಾ ವೈರಸ್‌ನ ಎರಡನೇ ಅಲೆ ಅಬ್ಬರವಾಗಿ ಬೆಳೆಯುತ್ತಿದ್ದು ಅದರಲ್ಲಿಯು ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರಲ್ಲಿ ಹಬ್ಬುತ್ತಿದೆ ಅದಕ್ಕಾಗಿ ಹೊಸನಗರದ ಬಸ್ಸ್ ಸ್ಟ್ಯಾಂಡ್ ಆವರಣದಲ್ಲಿ ಜನರಿಗೆ ಜಾಗೃತಿ ಮಟ್ಟಿಸುವ ಸಲುವಾಗಿ ಪಟ್ಟಣ ಪಂಚಾಯಿತಿ ವತಿಯಿಂದ ಜನ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಿ ಜನರಲ್ಲಿ ಜಾಗೃತಿ ಮೂಡಿಸುವ ಸಂದರ್ಭದಲ್ಲಿ ಮಾತನಾಡಿದರು.

ಈ ಕೊರೊನಾ ವೈರಸ್ ದೇಶದಿಂದ ಓಡಿಸಬೇಕಾದರೆ ಜನರೇ ಜಾಗೃತರಾಗಬೇಕು ಕಡ್ಡಾಯವಾಗಿ ಮಾಸ್ಕ್ ಪ್ರತಿಯೊಬ್ಬರು ಹಾಕಿಕೊಂಡು ಓಡಾಟ ನಡೆಸಬೇಕು ಅಂಗಡಿ ಹೋಟೆಲ್‌ಗಳಲ್ಲಿ ವ್ಯವಹಾರಿಸುವಾಗ ಸಾಮಾಜಿಕ ಅಂತರದಿಂದ ವ್ಯವಹರಿಸಬೇಕು ಬಸ್ ಗಳಲ್ಲಿ ಪ್ರಯಾಣಿಸುವಾಗ ಮಾಸ್ಕ್ ಹಾಗೂ ಅಂತರದ ಮೂಲಕ ಓಡಾಟ ನಡೆಸಬೇಕು ಎಂದು ಜಾಗೃತಿ ಮೂಡಿಸಿ ಕಡ್ಡಾಯವಾಗಿ ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರು ಮಾಸ್ಕ್ ಹಾಕಿಕೊಳ್ಳದೇ ಇದ್ದಾಗ ಪಟ್ಟಣ ಪಂಚಾಯಿತಿ ವತಿಯಿಂದ ಯಾವ ಮೂಲಾಜಿಲ್ಲದೇ ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಕಂದಾಯ ಅಧಿಕಾರಿ ಪರಶುರಾಮ, ಆರೋಗ್ಯಾಧಿಕಾರಿ ಪ್ರಶಾಂತ್, ಪ್ರಥಮ ದರ್ಜೆ ನೌಕರರಾದ ಲಕ್ಷ್ಮಣ್, ಇಂಜೀನಿಯರ್ ಬಸವರಾಜ್, ಪಟ್ಟಣ ಪಂಚಾಯಿತಿ ಉಪಾಧ್ಯಕ್ಷರಾದ ಕೃಷ್ಣವೇಣಿ, ಪೌರ ನೌಕರ ಚಂದ್ರಪ್ಪ ಹಾಗೂ ಪಟ್ಟಣ ಪಂಚಾಯಿತಿಯ ಪೌರ ನೌಕರರು ಜನ ಜಾಗೃತಿಯಲ್ಲಿ ಭಾಗವಹಿಸಿದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here