ಹೊಸನಗರ ಪಪಂ ವ್ಯಾಪ್ತಿಯ 10ನೇ ವಾರ್ಡ್‌ನ 4ನೇ ಕ್ರಾಸ್ ಡೆಸ್ಟ್ ಸ್ಲಾಬ್ ಸರಿಪಡಿಸಿ ಇಲ್ಲವಾದರೇ ಅನಾಹುತ ಗ್ಯಾರಂಟಿ

0
426

ಹೊಸನಗರ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ 10ನೇ ವಾರ್ಡ್‌ನ 4ನೇ ಕ್ರಾಸ್ ನ್ಯಾಯಾಲಯಕ್ಕೆ ಹೋಗುವ ದಾರಿಯ ಡೆಸ್ಟ್ ಸ್ಲಾಬ್ ಮುರಿದು 10ದಿನ ಕಳೆದರೂ ಸರಿಪಡಿಸಿಲ್ಲ ಓಡಾಟ ಮಾಡುವ ಜನರು ಹಾಗೂ ವಾಹನಗಳು ಬಂದರೆ ಚರಂಡಿಗೆ ಬೀಳುವುದರಲ್ಲಿ ಯಾವುದೇ ಅನುಮಾನವಿಲ್ಲವಾಗಿದೆ. ಅನಾಹುತವಾಗುವುದರ ಒಳಗೆ ಸರಿಪಡಿಸಿದರೆ ಮುಂದೆ ಆಗುವ ಅನಾಹುತ ತಪ್ಪಿಸಬಹುದು ಈ ಡೆಸ್ಟ್ ಸ್ಲಾಬ್ ಮಾಡಿ ಸುಮಾರು 20 ವರ್ಷಗಳ ಹಳೆಯದಾಗಿದೆ ಎಂದು ಹೇಳಲಾಗಿದೆ. ಮಳೆಗಾಲ ಪ್ರಾರಂಭವಾಗಿರುವುದರಿಂದ ಮಳೆ ನೀರು ನಿಂತು ಡೆಸ್ಟ್ ಸ್ಲಾಬ್ ಯಾವುದು ಚರಂಡಿ ಯಾವುದು ಎಂದು ಕಾಣದೇ ಸಾರ್ವಜನಿಕರು, ವಾಹನಗಳು ಅನಾಹುತಕ್ಕೆ ತುತ್ತಾಗುತ್ತಾರೆ ಎಂದು ಅಲ್ಲಿನ ನಿವಾಸಿ ಶ್ರೀಕಾಂತರವರು ಹೇಳುತ್ತಿದ್ದು ತಕ್ಷಣ ಕಾಮಾಗಾರಿ ಪ್ರಾರಂಭಿಸಿ ಎಂದು ಪಟ್ಟಣ ಪಂಚಾಯಿತಿ ಸದಸ್ಯರಿಗೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

“ಡೆಸ್ಟ್ ಸ್ಲಾಬ್ ಮುರಿದು ಹೋಗಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದ್ದು ತುರ್ತು ಕ್ರಮ ಕೈಗೊಂಡು ಪ್ಲಾನಿಂಗ್ ತಯಾರಿಸಿ ತಕ್ಷಣ ಕಾಮಾಗಾರಿಯನ್ನು ಪ್ರಾರಂಭಿಸಲಾಗುವುದು.”

– ಬಾಲಚಂದ್ರ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ

“ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ತುರ್ತು ಎಷ್ಟು ಕೆಲಸಗಳು ಆಗಬೇಕಾಗಿದೆ ಎಂದು ಪಟ್ಟಿ ತಯಾರಿಸಲಾಗಿದೆ. ಅತೀ ಶೀಘ್ರದಲ್ಲಿಯೇ ಡಸ್ಟ್ ಸ್ಲಾಬ್ ಸರಿಪಡಿಸಲಾಗುವುದು.”

– ಗುರುರಾಜ್, ಪಪಂ 10ನೇ ವಾರ್ಡ್‌ನ ಸದಸ್ಯ
ಜಾಹಿರಾತು

LEAVE A REPLY

Please enter your comment!
Please enter your name here