23.2 C
Shimoga
Sunday, November 27, 2022

ಹೊಸನಗರ ; ಪರಿಶಿಷ್ಟ ಪಂಗಡದವರಿಗೆ ಸ್ಪಿಂಕ್ಲರ್ ಸೆಟ್ ಯೋಜನೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನ


ಹೊಸನಗರ: ಭಾರತ ಸಂವಿಧಾನದ ಅನುಚ್ಛೇಧ 275ರ ಅಡಿಯಲ್ಲಿ ಹಾಗೂ ವಿಶೇಷ ಕೇಂದ್ರಿಯ ನೆರವಿನಡಿಯಲ್ಲಿ ಹೊಸನಗರ ತಾಲ್ಲೂಕಿನ ಪರಿಶಿಷ್ಟ ಪಂಗಡದವರಿಗೆ ಸ್ಪಿಂಕ್ಲರ್ ಸೆಟ್ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ಹೊಸನಗರ ಸಮಾಜ ಕಲ್ಯಾಣ ಇಲಾಖೆಯಿಂದ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಈ ಯೋಜನೆಗೆ ಅರ್ಜಿ ಸಲ್ಲಿಸಲು ನವೆಂಬರ್ 10ನೇ ತಾರೀಖಿನ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಹೊಸನಗರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ಗ್ರೇಡ್2 ಸಹಾಯಕ ನಿರ್ದೆಶಕರಾದ ಮಹೇಶ್ ಕೆ.ಎಂ ರವರು ತಿಳಿಸಿದ್ದಾರೆ.


ಪರಿಶಿಷ್ಟ ಪಂಗಡಕ್ಕೆ ಸೇರಿರುವ ಹಾಗೂ ಅರ್ಹರಾದ ಅಭ್ಯರ್ಥಿಗಳು ಅರ್ಜಿ ಫಾರಂಗಳನ್ನು ಸಮಾಜ ಕಲ್ಯಾಣ ಇಲಾಖೆಯ ಕಛೇರಿಯ ಸಮಯದಲ್ಲಿ ಪಡೆಯಬಹುದಾಗಿದ್ದು ಭರ್ತಿ ಮಾಡಿದ ಅರ್ಜಿಗಳನ್ನು ಮೂಲ ದಾಖಲೆಗಳೊಂದಿಗೆ ನವೆಂಬರ್ 10ನೇ ತಾರೀಖಿನ ಒಳಗೆ ಹೊಸನಗರದ ಸಮಾಜ ಕಲ್ಯಾಣ ಇಲಾಖೆಗೆ ತಲುಪಿಸಬಹುದು.

ಹೆಚ್ಚಿನ ಮಾಹಿತಿಯನ್ನು ಕಛೇರಿಯ ವೇಳೆಯಲ್ಲಿ ವಿಚಾರಿಸಬಹುದಾಗಿದೆ ಎಂದು ತಿಳಿಸಿದರು.

- Advertisement -

More articles

1 COMMENT

LEAVE A REPLY

Please enter your comment!
Please enter your name here

- Advertisement -

Latest article

error: Content is protected !!