24.3 C
Shimoga
Friday, December 9, 2022

ಹೊಸನಗರ ; ಪಾರದಕಂಡಿ ಸೇತುವೆ ದುರಸ್ತಿಗೆ ಆಗ್ರಹ


ಹೊಸನಗರ: ತಾಲೂಕಿನ ತ್ರಿಣಿವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾರಣಗಿರಿ-ತೀರ್ಥಹಳ್ಳಿ ಸಂಪರ್ಕ ರಸ್ತೆಯಲ್ಲಿನ ನಾಗರಕೊಡಿಗೆ ಸಮೀಪದ ಪಾರದಕಂಡಿ ಸೇತುವೆ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.


ಈ ಸೇತುವೆ ನಿರ್ಮಾಣಗೊಂಡು ಶತಮಾನವೇ ಕಳೆದಿದೆ. ಸೇತುವೆ ಮೂಲಕ ವಾಹನ ಪ್ರಯಾಣಕ್ಕೆ ತೀವ್ರ ಇಕ್ಕಟ್ಟಾಗಿದೆ. ಸೇತುವೆಯ ತಡೆಗೋಡು ಕುಸಿದಿದೆ. ನಾಗರಕೊಡಿಗೆ ಸುತ್ತಮುತ್ತಲ ಮಧ್ಯರಾತ್ರಿಯ ಅಕ್ರಮ ಮರಳು, ನಾಟ ಸಾಗಾಣಿಕೆ ಈ ಸೇತುವೆಯ ಮೂಲಕವೇ ನಡೆಯುತ್ತಿರುವುದು ಇಂದಿನ ದುಸ್ಥಿತಿಗೆ ಸಾಕ್ಷಿಯಾಗಿದೆ. ಅಲ್ಲದೆ, ಈಗಾಗಲೇ ಮರ‍್ರ್ನಾಕು ಜಾನುವಾರುಗಳು ಮರಳು ಸಾಗಾಣಿಕೆ ವಾಹನ ಬಲಿ ಪಡೆದಿವೆ. ಶಾಲಾ ವಿದ್ಯಾರ್ಥಿಗಳು ಸಹ ಈ ಸೇತುವೆ ಮಲೆ ಸಂಚರಿಸುವಾಗ ಸಂಭವನೀಯ ಅವಘಡದಿಂದ ಪಾರಾಗಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.


ಈ ಸಂಬಂಧ ಹಲವು ಬಾರಿ ಶಾಸಕ ಆರಗ ಜ್ಞಾನೇಂದ್ರ ಸಹಿತ ಚುನಾಯಿತ ಜನಪ್ರತಿನಿಧಿಗಳಿಗೆ ಸೇತುವೆ ದುರಸ್ತಿ ಹಾಗೂ ನೂತನ ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಜಿಲ್ಲಾಡಳಿತ ಸೇತುವೆ ನಿರ್ಮಾಣಕ್ಕೆ ಸೂಕ್ತ ಕ್ರಮಕೈಗೊಳ್ಳಬೇಕು. ತಪ್ಪಿದ್ದಲ್ಲಿ ತಹಶೀಲ್ದಾರ್ ಕಚೇರಿ ಎದುರು ಉಗ್ರ ಹೋರಾಟ ನಡೆಸುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.


ಈ ವೇಳೆ ಗ್ರಾಮಸ್ಥರಾದ ವಕೀಲ ತರುವೆ ರಾಮಪ್ಪ, ತಾಲೂಕು ಜೆಡಿಎಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ತ್ರಿಣಿವೆ ಜಯರಾಮಶೆಟ್ಟಿ, ಹರೀಶ್, ತುಷಾರಗೌಡ ಇದ್ದರು.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!