Home Shivamogga News Hosanagara ಹೊಸನಗರ ಪಿಎಸ್ಐ ರಾಜೇಂದ್ರ ನಾಯಕ್ರವರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿಯಾಗಿ ಚಿತ್ರಿಕರಿಸಿ ಪ್ರಚಾರ ಪಡಿಸುತ್ತಿರುವವರ ಮೇಲೆ...
ಹೊಸನಗರ: ಪಟ್ಟಣದ ವ್ಯಾಪ್ತಿಯಲ್ಲಿ ದಕ್ಷ ಹಾಗೂ ಪ್ರಾಮಾಣಿಕ ಮತ್ತು ನಿಷ್ಟಾವಂತ ಅಧಿಕಾರಿ ಹೊಸನಗರ ಪೊಲೀಸ್ ಠಾಣಾ ಸಬ್ ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ರವರ ವಿರುದ್ಧ ನಿರಂತರ ನಿಂದನೆ ಹಾಗೂ ಸೇವೆ ಮಾಡಲು ಅಡ್ಡಿಪಡಿಸುವಂತಹ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯ ನಡೆಯುತ್ತಿದ್ದು ನಿತ್ಯ ಪ್ರಚಾರ ಪಡಿಸುತ್ತಿರುವವರನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ತ್ರಿಣಿವೆ ಬಿಜೆಪಿ ಮುಖಂಡರಾದ ಪ್ರಕಾಶ್ಶೆಟ್ಟಿ ಹಾಗೂ ಅಲ್ಲಿನ ಗ್ರಾಮಸ್ಥರು ಸರ್ಕಲ್ ಇನ್ಸ್ಪೆಕ್ಟರ್ ಮಧುಸೂದನ್ರವರಿಗೆ ಮನವಿ ಪತ್ರ ನೀಡಿ ಒತ್ತಾಯಿಸಿದ್ದಾರೆ.
ಮನವಿ ಪತ್ರದಲ್ಲಿ ಹೊಸನಗರದ ಸಬ್ಇನ್ಸ್ಪೆಕ್ಟರ್ ರಾಜೇಂದ್ರ ನಾಯಕ್ರವರು ಎರಡು ವರ್ಷಗಳಿಂದ ಹೊಸನಗರ ಜನತೆಗೆ ನೊಂದವರಿಗೆ ನ್ಯಾಯ ಕೊಡಿಸುವುದರಲ್ಲಿ ನಿಷ್ಟೆಯವರಾಗಿದ್ದು ಆದರೆ ಇಂಥಹ ದಕ್ಷ ಅಧಿಕಾರಿಗಳ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ರೀತಿ ವಿಡಿಯೋ ಚಿತ್ರಿಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಿರಿದುಬಿಟ್ಟು ಇವರ ವಿರುದ್ಧ ಷಡ್ಯಂತರ ರೂಪಿಸಿರುವ ಹೊಸನಗರದ ಕೆಲವು ಕಿಡಿಗೇಡಿಗಳು ಸಮಾಜಘಾತಕರು ಬೇರೆ ಬೇರೆ ಕಳ್ಳ ದಂಧೆ ಡ್ರಕ್ ಮಾಫಿಯ, ಹೆಣ್ಣು ಮಕ್ಕಳಿಗೆ ಕೆಲಸದ ಆಮಿಷವನ್ನು ತೋರಿಸಿ ಅನೈತಿಕ ಸಂಬಂಧಗಳಿಗೆ ಬಳಸುವುದು, ಮರಳು, ಕಲ್ಲುಕ್ವಾರೆ, ಗಾಂಜಾಗಳ ಸರಬರಾಜು ವಿವಿಧ ಕೆಟ್ಟ ವ್ಯವಹಾರ ಮಾಡಿಸುವವರನ್ನು ಮಟ್ಟ ಹಾಕಿರುವುದರ ಜೊತೆಗೆ ಇವರ ವ್ಯವಹಾರಗಳನ್ನು ಬಯಲಿಗೆಳೆದ ಪೊಲೀಸ್ ಇಲಾಖೆಯ ಸಬ್ ಇನ್ಸ್ಪೆಕ್ಟರ್ ವಿರುದ್ಧ ಇವರು ಷಡ್ಯಂತ್ರ ರೂಪಿಸುತ್ತಿದ್ದಾರೆ ಷಡ್ಯಂತ್ರ ರೂಪಿಸುವವರನ್ನು ಬಂಧಿಸಬೇಕು ಹಾಗೂ ರಾಜೇಂದ್ರನಾಯಕ್ ರವರನ್ನು ಇನ್ನೂ 1ವರ್ಷ ಇಲ್ಲಿಯೇ ಮುಂದುವರೆಸಬೇಕು ಮೇಲಿನ ಅಧಿಕಾರಿಗಳು ವರ್ಗಹಿಸಿದರೆ ಪೊಲೀಸ್ ಠಾಣೆಯ ಎದರು ಧರಣಿ ನಡೆಸುವುದಾಗಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಗರಕೊಡಿಗೆ ಶ್ರೀಧರ ಹಾಗೂ ಊರಿನ ಪ್ರಮುಖರು ಉಪಸ್ಥಿತರಿದ್ದರು.
Related