20.6 C
Shimoga
Friday, December 9, 2022

ಹೊಸನಗರ ; ಪಿಎಸ್ಐ ಸೇರಿದಂತೆ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಸಮವಸ್ತ್ರ ಹರಿದು ಜೀವ ಬೆದರಿಕೆ ! ಇಬ್ಬರು ಅಂದರ್

ಹೊಸನಗರ: ಪಿಎಸ್ಐ ಸೇರಿದಂತೆ ಪೊಲೀಸರ ಸಮವಸ್ತ್ರ ಹರಿದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಘಟನೆ ನಗರ ಪೊಲೀಸ್ ಠಾಣೆಯಲ್ಲೇ ನಡೆದಿದ್ದು ಪೊಲೀಸರಿಂದಲೇ ದೂರು ದಾಖಲಾಗಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಬೇಳೂರು ಗ್ರಾಮದ ಮಕ್ಕಿಮನೆ ವಾಸಿಗಳಾದ ಕೃಷ್ಣಮೂರ್ತಿ (45) ಮತ್ತು ರಾಮಚಂದ್ರ (50) ಬಂಧಿತರು.

ಹಲ್ಲೆಯಲ್ಲಿ ಗಾಯಗೊಂಡ ಪೊಲೀಸ್ ಸಿಬ್ಬಂದಿ ದೇವರಾಜ ನಾಯ್ಕ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

ಏನಿದು ಘಟನೆ?

ಭಾನುವಾರ ಸಂಜೆ ಠಾಣೆಗೆ ಬಂದ ಹರೀಶ್ ನೀಡಿದ ದೂರಿನ ಅರ್ಜಿಯಂತೆ, ಕೃಷ್ಣಮೂರ್ತಿ ಮತ್ತು ರಾಮಚಂದ್ರ ಎಂಬುವರನ್ನು ವಿಚಾರಣೆ ನಡೆಸುತ್ತಿದ್ದ ವೇಳೆ, ಪಿಎಸ್ಐ ನಾಗರಾಜ್, ಹೆಚ್ ಸಿ ವೆಂಕಟೇಶ್ ಮತ್ತು ದೇವರಾಜ ನಾಯ್ಕ ಎಂಬುವವರ ಮೇಲೆ ವಿಚಾರಣೆಗೆ ಬಂದಿದ್ದ ಕೃಷ್ಣಮೂರ್ತಿ ಮತ್ತು ರಾಮಚಂದ್ರ ಸಮವಸ್ತ್ರ ಹರಿದು, ಅವಾಚ್ಯವಾಗಿ ಬೈದಯ, ಹಲ್ಲೆ ಮಾಡಿ, ಜೀವ ಬೆದರಿಕೆಯನ್ನು ಹಾಕಿದ್ದಲ್ಲದೇ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಸೆಕ್ಷನ್ 504, 353, 332, 506 r/w, 34 IPC ನಂತೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳಾದ ಕೃಷ್ಣಮೂರ್ತಿ ಮತ್ತು ರಾಮಚಂದ್ರ ಎಂಬುವರನ್ನು ಬಂಧಿಸಲಾಗಿದೆ.

- Advertisement -

More articles

LEAVE A REPLY

Please enter your comment!
Please enter your name here

- Advertisement -

Latest article

error: Content is protected !!