ಹೊಸನಗರ: ಪಿಯುಸಿ ವಿದ್ಯಾರ್ಥಿನಿ ಅನಘ ಸಾವು !

0
33902

ಹೊಸನಗರ: ಪಟ್ಟಣದ ಖಾಸಗಿ ಹೋಲಿ ರೆಡಿಮರ್ ನಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ಅನಘರವರು ಬ್ರೈನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದು ಕಳೆದ ಮೂರು ದಿನಗಳಿಂದ ಉಡುಪಿಯ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಇವರು ತೀರ್ಥಹಳ್ಳಿ ಮೂಲದ ವಿದ್ಯಾರ್ಥಿನಿಯಾಗಿದ್ದು ತಂದೆ ಸುಂದ್ರೇಶ್ ತಾಯಿ ಪೃಥ್ವಿ ದಂಪತಿಗಳ ಪುತ್ರಿಯಾಗಿದ್ದು, ಅಣ್ಣ ಆಶಿಕ್ ಸೇರಿದಂತೆ ಅಪಾರ ಬಂಧು-ಬಳಗ ಹಾಗೂ ಸ್ನೇಹಿತರನ್ನು ಅಗಲಿದ್ದಾರೆ.

ಹೊಸನಗರ ಹೋಲಿ ರೆಡಿಮರ್ ಶಾಲೆಯಲ್ಲಿ ಓದುತ್ತಿದ್ದು ಅತ್ಯಂತ ಉತ್ತಮ ರೀತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಹೇಳಲಾಗಿದ್ದು, ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದರು. ಉತ್ತಮ ಗುಣ ನಡತೆಯಿಂದ ಶಿಕ್ಷಕ ವೃಂದಕ್ಕೆ ಪ್ರೀತಿ ಪಾತ್ರಳಾಗಿದ್ದರು.

ಸಂತಾಪ:

ಹೋಲಿ ರೆಡಿಮರ್ ಶಾಲೆಯ ಪ್ರಾಂಶುಪಾಲರಾದ ಐರೀನ್ ಡಿಸಿಲ್ವಾ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿಯಾದ ಸಿಸ್ಟರ್ ರೋಫಿನಾ ಹಾಗೂ ಶಿಕ್ಷಕರ ನೇತೃತ್ವದಲ್ಲಿ ಸಂತಾಪ ಸಭೆಯನ್ನು ಏರ್ಪಡಿಸಿ ಮೃತರಿಗೆ ಸಂತಾಪ ಸೂಚಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಿಸಿ ಶಾಲೆಯ ವಿದ್ಯಾರ್ಥಿಗಳಿಗೆ ಒಂದು ದಿನ ರಜೆ ಘೋಷಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here