ಹೊಸನಗರ: ಮಾ.28 ರಂದು ಶ್ರೀ ದುರ್ಗಾಂಬಾ ದೇವಿಯ ವರ್ಧಂತ್ಯೋತ್ಸವ

0
310

ಹೊಸನಗರ: ಹೊಸನಗರದ ಹಳೇ ಸಾಗರ ರಸ್ತೆಯಲ್ಲಿರುವ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ದಿನಾಂಕ: 28.03.2021ನೇ ಭಾನುವಾರ ಶ್ರೀ ದುರ್ಗಾಂಬಾ ದೇವಿಯ ವರ್ಧಂತ್ಯೋತ್ಸವ ಪ್ರಯುಕ್ತ ಶ್ರೀ ದುರ್ಗಾಂಬಾ ಮತ್ತು ಶ್ರೀ ನಾಗದೇವರಿಗೆ ಕಲಾಹೋಮ, ಕಲಶಾಭಿಷೇಕ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ ಎಂದು ದುರ್ಗಾಂಬಾ ದೇವಸ್ಥಾನ ಕಮಿಟಿಯ ಅಧ್ಯಕ್ಷರಾದ ಹೆಚ್.ಎನ್ ಶ್ರೀಪತಿರಾವ್‌ರವರು ತಿಳಿಸಿದ್ದಾರೆ.

ಭಾನುವಾರ ಬೆಳಿಗ್ಗೆ 9ಗಂಟೆಯಿಂದ 11 ಗಂಟೆಯ ವರೆಗೆ ಶ್ರೀ ದೇವಿಯ ಸನ್ನಿಧಿಯಲ್ಲಿ ಹಾಗೂ ನಾಗನ ಸನ್ನಿಧಿಯಲ್ಲಿ ಪೂಜಾ ಕಾರ್ಯಕ್ರಮ ನಡೆಯಲಿದ್ದು ಮಧ್ಯಾಹ್ನ 12:30ಕ್ಕೆ ಪೂರ್ಣಾಹುತಿ ಮಧ್ಯಾಹ್ನ 1ಗಂಟೆಗೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ನಂತರ ಹೊಸನಗರದ ಗಾಯತ್ರಿ ಮಂದಿರದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಲಿದ್ದು, ದೇವಿಯ ಭಕ್ತಾರು ಹಾಗೂ ಸಾರ್ವಜನಿಕರು ಆಗಮಿಸಿ ಈ ಪೂಜಾ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಈ ಸಂದರ್ಭದಲ್ಲಿ ದುರ್ಗಾಬ ದೇವಸ್ಥಾನ ಕಮಿಟಿಯ ಪ್ರಧಾನ ಕಾರ್ಯದರ್ಶಿ ಶ್ರೀಧರ ಉಡುಪ, ಕಾರ್ಯದರ್ಶಿ ವಾದಿರಾಜ್ ಭಟ್, ಖಜಾಂಚಿ ನಾಗರಾಜ್ ಚಡಗ, ವಾಸುದೇವ ಆಚಾರ್, ಕನಕರಾಜ್, ನಟರಾಜ್, ಶ್ರೀಧರ, ಬೇಕರಿ ಸುಬ್ರಹ್ಮಣ್ಯ, ಗುರುರಾಜ್, ಪರಮೇಶ್ವರರಾವ್, ಚಿ ಕೆ.ಬಿ. ಮಂಜುನಾಥ್, ಕೆ,ಬಿ.ಸತೀಶ್, ಸುದೇಶ್ ಕಾಮಾತ್, ಡಿ.ಎಂ.ಸದಾಶಿವ ಶ್ರೇಷ್ಠಿ, ವಿಜೇಂದ್ರ ಶೇಟ್, ವಾಸುದೇವ, ಫೋಟೋ ಸತೀಶ್, ರಾಧಾಕೃಷ್ಣ ಹಾಗೂ ಸಂಘದ ಎಲ್ಲ ಸದಸ್ಯರು ಉಪಸ್ಥಿತರಿದ್ದರು.

ವರದಿ: ಹೆಚ್.ಎಸ್.ನಾಗರಾಜ್
ಜಾಹಿರಾತು

LEAVE A REPLY

Please enter your comment!
Please enter your name here