ಹೊಸನಗರ ರಾಮಕೃಷ್ಣ ವಿದ್ಯಾಸಂಸ್ಥೆಯ ನಡೆ ವಿರುದ್ಧ ಸಾರ್ವಜನಿಕರ ಆಕ್ರೋಶ ; ಯಾಕೆ ? ಏನಾಯ್ತು ?

0
1774

ಹೊಸನಗರ : ಇತ್ತೀಚೆಗಷ್ಟೇ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯದ ಖಾಸಗಿ ವಿದ್ಯಾಸಂಸ್ಥೆ ಹಾಗೂ ಅನೇಕ ಸರ್ಕಾರಿ ಶಾಲೆಗಳಲ್ಲಿ ನೂರಕ್ಕೆ ನೂರು ಫಲಿತಾಂಶವನ್ನು ಕಾಣಬಹುದು. ಮೆರಿಟ್ ನಲ್ಲಿ ಉತ್ತೀರ್ಣವಾದ ಖಾಸಗಿ ವಿದ್ಯಾಸಂಸ್ಥೆಗಳಲ್ಲಿ ತಮ್ಮ ಶಾಲೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳ ಬಗ್ಗೆ ಮಾಹಿತಿ ನೀಡುವ ಸದುದ್ದೇಶದಿಂದ ಶೇಕಡಾವಾರು ಫಲಿತಾಂಶದ ವಿದ್ಯಾರ್ಥಿಗಳ ಭಾವಚಿತ್ರ ಮತ್ತು ಅವರು ಪಡೆದ ಅಂಕಗಳ ಮಾಹಿತಿ ಹೊಂದಿರುವ ಪ್ಲೆಕ್ಸ್ ಗಳನ್ನ ಜನ ದಟ್ಟಣೆ ಇರುವ ಪ್ರದೇಶಗಳಲ್ಲಿ ಜನರಿಗೆ ಕಾಣುವ ರೀತಿಯಲ್ಲಿ ಎರಡು ಕಡೆ ದಪ್ಪ – ದಪ್ಪ ಕಂಬಗಳನ್ನು ನೆಟ್ಟು ಪ್ರದರ್ಶನ ಮಾಡುವುದು ಸರ್ವೇ ಸಾಮಾನ್ಯ. ಈ ರೀತಿ ಗುಂಡಿತೆಗೆದು ಗೂಟಗಳನ್ನು ನೆಡುವ ಕೆಲಸವನ್ನು ಮಾಡಲು ಕಾರ್ಮಿಕರಿಂದ ಮಾಡಿಸುವುದು ಒಳ್ಳೆಯದು.

ಆದರೆ ಹೊಸನಗರದ ರಾಮಕೃಷ್ಣ ವಿದ್ಯಾಸಂಸ್ಥೆಯಲ್ಲಿ ಶಾಲೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಂದ ಇಂತಹ ಹೇಯ ಕೃತ್ಯ ನಡೆದಿದೆ. ಈ ಖಾಸಗಿ ವಿದ್ಯಾಸಂಸ್ಥೆಯಿಂದ ಅದೇ ಶಾಲೆಯಲ್ಲಿ ಓದುವ ಸದುದ್ದೇಶದಿಂದ ನೂರಾರು ಕಿಲೋಮೀಟರ್ ದೂರದ ಊರುಗಳಿಂದ ಬಂದು ಹಾಸ್ಟೆಲ್ ನಲ್ಲಿ ವಾಸವಾಗಿರುವ ವಿದ್ಯಾರ್ಥಿಗಳ ಮೂಲಕ ಸುಮಾರು ಹತ್ತು ಗಂಟೆಯ ನಂತರ ಪಟ್ಟಣದ ಬಸ್ ನಿಲ್ದಾಣದ ಬಳಿ ಗೂಟಗಳನ್ನು ನೆಡುವ ಕೆಲಸ ಮಾಡಲಾಗಿದೆ. ತಮ್ಮ ಶಾಲೆಯ ಪ್ರಚಾರದ ಪೋಸ್ಟರ್ ಅಳವಡಿಸುವ ಕೆಲಸ ಕಾರ್ಯಗಳಿಗೆ ರಾತ್ರಿ 10-45ಅಥವಾ 11-00 ಸಮಯದಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳುವುದು ಸರಿನಾ…?? ಇದರ ಬಗ್ಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಶಿಕ್ಷಣ ಇಲಾಖೆ ಗಮನ ಹರಿಸಬಹುದಾ…?? ಎಂಬ ಪ್ರಶ್ನೆ ಇಲ್ಲಿ ಮೂಡುವುದರಲ್ಲಿ ಅನುಮಾನವಿಲ್ಲ ಎಂದು ಇಲ್ಲಿನ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಲವಾರು ಕಿಲೋಮೀಟರ್ ದೂರದ ಊರಿನಿಂದ ಬಂದ ವಿದ್ಯಾರ್ಥಿಗಳು ಇಲ್ಲಿ ನೆಲೆಸಿರುತ್ತಾರೆ ಅವರನ್ನು ವಿದ್ಯಾಭ್ಯಾಸಕ್ಕೆಂದು ಕರೆತಂದು, ಪೋಷಕರಿಂದ ಸಾವಿರಾರು ರೂಪಾಯಿ ಹಣ ಪಡೆದ ಶಾಲೆಯ ಶಿಕ್ಷಕರು ಮನಸ್ಸಿಗೆ ಬಂದಂತೆ ನಡೆಸಿಕೊಳ್ಳುತ್ತಿರುವುದು ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ತಿಳಿಯುವುದಿಲ್ಲ ಎಂದು ಇಂಥ ಸಂದರ್ಭದಲ್ಲಿ ಯಾವುದಾದರೂ ತೊಂದರೆ ಆದರೆ ಇವರು ತಮಗೆ ಬೇಕಾದಂತ ಉತ್ತರಗಳನ್ನು ಸಿದ್ಧಪಡಿಸಿಕೊಳ್ಳುತ್ತಾರೆ ಎಂದು ಸಾರ್ವಜನಿಕರ ಮಕ್ಕಳು ಸಹಾಯವಾಣಿಗೆ ಕರೆ ಮಾಡಿ ತಿಳಿಸಿರುತ್ತಾರೆ.

ಜಾಹಿರಾತು

LEAVE A REPLY

Please enter your comment!
Please enter your name here