ಹೊಸನಗರ ; ರಾಮಭವನ ಹೋಟೆಲ್ ಮಾಲೀಕ ರಘುಭಟ್ ನಿಧನ

0
899

ಹೊಸನಗರ: ಪಟ್ಟಣದಲ್ಲಿ ಸುಮಾರು 50ವರ್ಷಗಳಿಂದ ಹೋಟೆಲ್ ಉದ್ಯೋಗದಲ್ಲಿ ತೋಡಗಿಸಿಕೊಂಡು ಸ್ವಂತ ರಾಮಭವನ ಹೋಟೆಲ್ ಮಾಲೀಕರಾಗಿ ಸೇವೆ ಸಲ್ಲಿಸುತ್ತಿದ್ದ ರಘುಭಟ್ (75) ರವರು ಹೃದಯಘಾತದಿಂದ ಗುರುವಾರ ಬೆಳಿಗ್ಗೆ ಹಳೇ ಸಾಗರ ರಸ್ತೆಯ ಶ್ರೀರಾಘವೇಂದ್ರ ಸ್ವಾಮಿ ಮಠದ ಎದುರಿನಲ್ಲಿರುವ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಇವರಿಗೆ ಓರ್ವ ಪುತ್ರ ಹಾಗೂ ಮೂವರು ಪುತ್ರಿಯರು, ಪತ್ನಿ ಹಾಗೂ ಅಳಿಯದಿರು ಮತ್ತು ಮೊಮ್ಮಕ್ಕಳು ಮತ್ತು ಅಣ್ಣ, ತಮ್ಮಂದಿರನ್ನು, ಅಪಾರ ಬಂಧು – ಬಳಗದವರನ್ನು ಅಗಲಿದ್ದಾರೆ.

ಸಂತಾಪ:

ಮೃತರ ಮನೆಗೆ ಭೇಟಿ ನೀಡಿದ ಬ್ರಾಹ್ಮಣರ ಸಂಘದ ಅಧ್ಯಕ್ಷರಾದ ಡಾ|| ರಾಮಚಂದ್ರರಾವ್, ಪತ್ರಬರಹಗಾರರಾದ ಎನ್ ಶ್ರೀಧರ ಉಡುಪ, ರಾಮಕೃಷ್ಣ ಮೆಡಿಕಲ್ಸ್ ಮಾಲೀಕರಾದ ಎನ್ ದತ್ತಾತ್ರೇಯ ಉಡುಪ, ಪಿಗ್ಮಿ ಭೋಜರಾವ್, ಎನ್ ಆರ್ . ದೇವಾನಂದ್, ಪತ್ರಕರ್ತ ಎನ್ ನರಸಿಂಹಮೂರ್ತಿ, ಶ್ರೀಕಂಠ, ಚಂದ್ರಶೇಖರ ಶೇಟ್, ವಿಜೇಂದ್ರ ಶೇಟ್, ಶ್ರೀನಿವಾಸ್ ಕಾಮತ್, ಸಂತೋಷ್ ಕಾಮತ್, ರಾಜು ಕಾಮತ್ ಹಾಗೂ ಅನೇಕ ಗಣ್ಯರು ಕುಟುಂಬಸ್ಥರನ್ನು ಸಂತೈಸುವುದರ ಜೊತೆಗೆ ಮೃತರ ಆತ್ಮಕ್ಕೆ ಶಾಂತಿ ಕೋರಿ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳುವ ಶಕ್ತಿ ನೀಡಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here