ಹೊಸನಗರ ; ಲಿಂಗೈಕ್ಯ ಡಾ|| ಶಿವಕುಮಾರ ಮಹಾಸ್ವಾಮೀಜಿಯವರ 115ನೇ ಜಯಂತಿ ಪ್ರಯುಕ್ತ ಭಕ್ತ ವೃಂದದಿಂದ ಅನ್ನ ದಾಸೋಹ

0
645

ಹೊಸನಗರ: ಸಿದ್ದಗಂಗೆಯ ಲಿಂಗೈಕ್ಯ ಡಾ|| ಶಿವಕುಮಾರ ಸ್ವಾಮೀಜಿಯವರ 115 ನೇ ಜಯಂತಿಯ ಪ್ರಯುಕ್ತ ಹೊಸನಗರದ ಬಸ್‌ಸ್ಟ್ಯಾಂಡ್ ಆವರಣದಲ್ಲಿ ಡಾ|| ಶಿವಕುಮಾರ ಸ್ವಾಮೀಜಿಯ ಭಕ್ತರು ಸ್ವಾಮೀಜಿಯರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಜೊತೆಗೆ ಮಧ್ಯಾಹ್ನ 12:30ರಿಂದ ಸಂಜೆಯವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಏರ್ಪಡಿಸಿದ್ದಾರೆ‌.

ನಡೆದಾಡುವ ದೇವರು ಡಾ|| ಶಿವಕುಮಾರ್ ಸ್ವಾಮೀಜಿ : ಎನ್.ಆರ್ ದೇವಾನಂದ್

ದೇವರು ಮಾತನಾಡುವುದಿಲ್ಲ ನಾವು ದೇವರ ಮೂರ್ತಿಗಳನ್ನು ನಂಬಿ ಪೂಜೆ ಸಲ್ಲಿಸುತ್ತಿದ್ದೇವೆ ಆದರೆ ಸಿದ್ದಗಂಗೆ ಮಠದ ನಡೆದಾಡುವ ದೇವರು ಎಂದು ಇಡೀ ಜಗತ್ತು ನಂಬಿರುವ ಸ್ವಾಮೀಜಿಯವರು. ದೇವ ಲೋಕ ಸೇರಿರುವುದು ನಮಗೆಲ್ಲರಿಗೂ ದುಃಖದ ಸಂಗತಿಯಾಗಿದೆ ಆದರೆ ಅವರು ನಮ್ಮನ್ನು ಬಿಟ್ಟು ಎಲ್ಲಿಗೂ ಹೋಗಿಲ್ಲ ಸದಾ ನಮ್ಮ ಜೊತೆಗೆ ಇದ್ದಾರೆ ಅವರೊಂದಿಗೆ ನಾವಿದ್ದೇವೆ. ಅವರ ಜೀವಿತವಾಧಿಯಲ್ಲಿ ಈ ರಾಜ್ಯಕ್ಕೆ ಸೇವೆ ಸಲ್ಲಿಸಿದ್ದಾರೆ ಅವರ ಸೇವೆ ಸದಾ ಜೀವಿತವಾಗಿರುತ್ತದೆ ಎಂದು ಡಾ|| ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಕರ್ನಾಟಕ ರಾಜ್ಯ ಅಂಬೇಡ್ಕರ್ ನಿಗಮದ ನಿರ್ದೆಶಕರಾದ ಎನ್.ಆರ್. ದೇವಾನಂದ್‌ರವರು ಹೇಳಿದರು.

ಡಾ|| ಶಿವಕುಮಾರ ಸ್ವಾಮೀಜಿಯ ಭಕ್ತರುಗಳಾದ ದುಮ್ಮ ವಿನಯ್‌ಕುಮಾರ್, ಜಿ.ಟಿ ಈಶ್ವರಗೌಡ, ವಸವೆ ಈಶ್ವರಗೌಡ, ಕಲ್ಯಾಣಪ್ಪ ಗೌಡ, ಡಾ|| ಗುರುರಾಜ್, ಶ್ರೀಧರ ಉಡುಪ, ಕಾಡಳ್ಳಿ ವಿಶು, ರಾಜಶೆಖರ ಗೌಡ, ಎಂ.ಎನ್ ಸುದಾಕರ್, ಮನೋಹರ, ಸುನೀಲ್‌ಕುಮಾರ್, ಪ್ರಶಾಂತ್, ಶ್ರೀನಿವಾಸ್ ಹೆಚ್, ದೀಪಕ್ ಸ್ವರೂಪ್, ಬಿ.ಎಸ್. ಸುರೇಶ್, ನಿತ್ಯಾನಂದ ಇನ್ನೂ ನೂರಾರು ಭಕ್ತರಿಂದ ಈ ಸೇವೆ ನಡೆಸಲಾಯಿತು.

ಜಾಹಿರಾತು

LEAVE A REPLY

Please enter your comment!
Please enter your name here