ಹೊಸನಗರ ; ವನಜಾಕ್ಷಮ್ಮ ನಿಧನ

0
2047

ಹೊಸನಗರ: ಪಟ್ಟಣದ ಶಿವಮೊಗ್ಗ ರಸ್ತೆಯ ನಿವಾಸಿ ರೈತ ರತ್ನಾಕರ್‌ರವರ ಪತ್ನಿ ವನಜಾಕ್ಷಮ್ಮ (65) ಶನಿವಾರ ರಾತ್ರಿ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಇವರಿಗೆ ತಲೆ ನೋವಿನ ಕಾರಣ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.

ಮೃತರಿಗೆ ಎರಡು ಜನ ಗಂಡು ಮಕ್ಕಳಿದ್ದು ಒಬ್ಬರು ಸರ್ಕಾರಿ ಆಸ್ಪತ್ರೆಯ ವೈದ್ಯರಾದ ಜಯರಾಮ್, ಇನ್ನೊಬ್ಬರು ಗ್ರಾಮ ಪಂಚಾಯಿತಿಯ ಪಿಡಿಓ ಪವನ್ ಹಾಗೂ ಮೂವರು ಹೆಣ್ಣು ಮಕ್ಕಳು, ಮೊಮ್ಮಕ್ಕಳು ಹಾಗೂ ಪತಿ, ಅಪಾರ ಬಂಧು – ಬಳಗದವರನ್ನು ಅಗಲಿದ್ದಾರೆ.

ಇವರ ಅಂತ್ಯಕ್ರಿಯೆಯು ಇಂದು ಅವರ ಸ್ವಂತ ಜಮೀನಿನಲ್ಲಿ ನೆರವೇರಿತು.

ಸಂತಾಪ:

ಇವರ ನಿಧನಕ್ಕೆ ಹೊಸನಗರ ತಾಲ್ಲೂಕು ಕೋಟೆಗಾರ್ ವಿದ್ಯಾವರ್ಧಕ ಸಂಘದ ಗೌರವಾಧ್ಯಕ್ಷರಾದ ಬಿ.ಗೋವಿಂದಪ್ಪ, ಕಾರ್ಯದರ್ಶಿ ಹೆಚ್.ಆರ್.ಸುರೇಶ್, ಗುತ್ತಿಗೆದಾರರಾದ ಕೆಂಚನಮನೆ ಮಹಾಬಲ, ಗುತ್ತಿಗೆದಾರರಾದ ಸತ್ಯನಾರಾಯಣ ವಿ, ಮಹಾದೇವ, ಗೋವಿಂದ ರಾಜ್, ಡ್ರೈವರ್ ಅಣ್ಣಪ್ಪ, ಗೇರುಬೀಜ ಫ್ಯಾಕ್ಟರಿ ಮಾಲೀಕರಾದ ಪ್ರಶಾಂತ್ ಕಾಮತ್, ಬೃಂದಾವನ ಕೋಟಿ ಪ್ರವೀಣ್, ಕ್ಯಾಂಟಿನ್ ಗಣೇಶ್ ಇನ್ನೂ ಮುಂತಾದವರು ಇವರ ಮನೆಗೆ ತೆರಳಿ ಸಂತಾಪ ಸೂಚಿಸಿದರು.

ಕೋಣೆಮನೆ ಭೂತಾರಾಯನ ಪೂಜೆ ರದ್ದು:

ಆರಿದ್ರ ಮಳೆಯ ಪ್ರಯುಕ್ತ ಭಾನುವಾರ ಮಾವಿನಕೊಪ್ಪದ ಭೂತರಾಯನ ಗುಡಿಯಲ್ಲಿ ಪೂಜೆ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು ಇವರ ನಿಧನದಿಂದ ಪೂಜಾ ಕಾರ್ಯಕ್ರಮವನ್ನು ರದ್ದುಪಡಿಸಲಾಗಿದ್ದು ಮುಂದಿನ ದಿನದಲ್ಲಿ ದಿನಾಂಕವನ್ನು ತಿಳಿಸಲಾಗುವುದು ಎಂದು ಹೇಳಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here