ಹೊಸನಗರ ; ವಾಣಿಜ್ಯ ಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವೇದಿಕೆ ಉದ್ಘಾಟನೆ

0
382

ಹೊಸನಗರ: ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವೇದಿಕೆ ಉದ್ಘಾಟನೆ, ವಾಣಿಜ್ಯ ಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ಪ್ರಯೋಗಾಲಯದ ಉದ್ಘಾಟನೆ, ಹಾಲ್ ಆಫ್ ಫೇಮ್ ಉದ್ಘಾಟನಾ ಕಾರ್ಯಕ್ರಮ ಮಂಗಳವಾರ ಕುವೆಂಪು ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಯುವ ಉದ್ಯಮಿ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರಾದ ನಿವೇದನ್ ನೆಂಪೆ ರವರು ವಾಣಿಜ್ಯ ಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ವೇದಿಕೆ ಉದ್ಘಾಟನೆಯೊಂದಿಗೆ ಹಾಲ್ ಆಫ್ ಫೇಮ್ ಉದ್ಘಾಟನೆ ನೆರವೇರಿಸಿದರು.

ನಿವೇದನ್ ನೆಂಪೆ ರವರು ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಲವು ಉದ್ಯಮಗಳ ಅವಕಾಶಗಳ ಬಗ್ಗೆ ಪರಿಪರಿಯಾಗಿ ವಿವರಿಸಿದರು. ವಿದ್ಯಾರ್ಥಿಗಳ ಜೀವನದಲ್ಲಿ ಅವಕಾಶಗಳು ಯಾವ ಯಾವ ರೀತಿಯಲ್ಲಿ ಸಂದರ್ಭಿಸಬಹುದೆಂದು ತಿಳಿಸಿದರು.

ಕಾರ್ಯಕ್ರಮದ ವಿಶೇಷ ಅತಿಥಿಗಳಾದ ನಿವೃತ್ತ ಪ್ರಾಧ್ಯಾಪಕರಾದ ಶಿವಾನಂದ ಹೆಚ್, ಎಂ ರವರು ವೇದಿಕೆ ಉದ್ಘಾಟನೆಯೊಂದಿಗೆ ವಾಣಿಜ್ಯ ಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರ ಪ್ರಯೋಗಾಲಯದ ಉದ್ಘಾಟನೆಯನ್ನು ನೆರವೇರಿಸಿಕೊಟ್ಟರು.

ಕಾರ್ಯಕ್ರಮವನ್ನು ಉದ್ದೇಶಿಸಿ ಈಗಿನ ಆಧುನಿಕ ಜೀವನಶೈಲಿಯಲ್ಲಿ ವಿದ್ಯಾರ್ಥಿಗಳ ಪಾತ್ರವನ್ನು ವಿಶ್ಲೇಷಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಿನ್ಸಿಪಾಲರಾದ ಜಯಪ್ಪ ಸಿ. ರವರು ವಿದ್ಯಾರ್ಥಿಗಳ ಜೀವನದಲ್ಲಿ ಶೈಕ್ಷಣಿಕ ಚಟುವಟಿಕೆಗಳ ಪಾತ್ರವು ಬಹು ಮುಖ್ಯವೆಂದು ವಿವರಿಸಿದರು.

ಕಾರ್ಯಕ್ರಮದಲ್ಲಿ ಸರ್ವರನ್ನೂ ಸುಧಾಕರ ಹೆಚ್.ವೈ ರವರು ಸ್ವಾಗತಿಸಿದರು ಹಾಗೂ ಪ್ರಾಸ್ತಾವಿಕ ನುಡಿಯನ್ನು ವೇದಿಕೆಯ ಸಂಚಾಲಕರಾದ ಮಂಜು ಬಿ ರವರು ನುಡಿದರು.

ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಅರ್ಚನ ಹಾಗೂ ಸಂಚಿತಾರವರು ನಿರೂಪಿಸಿದರು. ನೆರೆದ ಎಲ್ಲಾರನ್ನೂ ಮಂಜುನಾಥ ಡಿ. ರವರು ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ಮತ್ತು ಬೋಧಕೇತರ ವರ್ಗದವರು ಪಾಲ್ಗೊಂಡಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here