ಹೊಸನಗರ: ಶಾಸಕ ಹರತಾಳು ಹಾಲಪ್ಪನವರಿಂದ ಸ್ವಚ್ಛತಾ ವಾಹಿನಿ ವಾಹನಕ್ಕೆ ಚಾಲನೆ ಹಾಗೂ ಗಾಲಿಕುರ್ಚಿ ವಿತರಣೆ

0
692

ಹೊಸನಗರ : ಸ್ವಚ್ಛ ಭಾರತ ಆಂದೋಲನ ಯಶಸ್ಸಿನ ನಿಟ್ಟಿನಲ್ಲಿ ಶನಿವಾರ ಪಟ್ಟಣ ಪಂಚಾಯಿತಿಯ ನೂತನ ಘನ ತ್ಯಾಜ್ಯ ವಿಲೇ ಆಟೋ ಟಿಪ್ಪರ್ ಗೆ ಎಂಎಸ್ಐಎಲ್ ಅಧ್ಯಕ್ಷರು, ಶಾಸಕರಾದ ಹರತಾಳು ಹಾಲಪ್ಪನವರು ಇಂದು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಹೆಮ್ಮಾರಿ ಕೋವಿಡ್ ಎರಡನೆಯ ಅಲೆ ಹೊಡೆದೊಡಿಸುವ ನಿಟ್ಟಿನಲ್ಲಿ ಜನರು ಸ್ವಚ್ಛತೆಯನ್ನು ಕಾಪಾಡಬೇಕು, ಕಡ್ಡಾಯವಾಗಿ ಮಾಸ್ಕ್ ಧರಿಸಿ ಅಂತರ ಕಾಪಾಡಬೇಕೆಂದು ಕರೆ ನೀಡಿದರು.

ಅವರು ಇದೇ ಸಂದರ್ಭದಲ್ಲಿ ಶೇ.5 ಯೋಜನೆಯಡಿ ಅಂಗವಿಕಲ ಪಲಾನುಭವಿಗಳಿಗೆ ಗಾಲಿಕುರ್ಚಿ ವಿತರಿಸಿ ಸರ್ಕಾರ ನೀಡುವ ಸೌಲಭ್ಯವನ್ನು ಸದ್ಬಳಕೆ ಮಾಡಬೇಕೆಂದರು.

ಇದಕ್ಕೆ ಮುನ್ನ ಹೊಸನಗರ ಬಸ್ ನಿಲ್ದಾಣದ ಅಂಗಡಿ ಹೋಟೆಲುಗಳ ಮಾಲೀಕರು ಶಾಸಕರಿಗೆ ಮನವಿ ಅರ್ಪಿಸಿ ಕಳೆದ ವರ್ಷದ ಮಹಾಮಾರಿ ಕೋವಿಡ್ ಅವಧಿಯಲ್ಲಿ ಲಾಕ್ ಡೌನ್ ನಿಂದ ಅಂಗಡಿ ಹೋಟೆಲ್ ಗಳ ಮಾಲೀಕರು ತೀವ್ರ ನಷ್ಟ ಬಾಡಿಗೆ ಕಟ್ಟಲಾಗದ ಹಾಗೂ ಕೆಲಸಗಾರರಿಗೆ ವೇತನ ಕೊಡಲು ಸಹ ಪರದಾಡಬೇಕಾದ ಪರಿಸ್ಥಿತಿ ಬಂದಿದೆ. ಈ ಅವಧಿಯ ಪಟ್ಟಣ ಪಂಚಾಯತಿಗೆ ನೀಡಬೇಕಾದ ಅಂಗಡಿ ಮಳಿಗೆಗಳ ಬಾಡಿಗೆಯನ್ನು ಮನ್ನಾ ಮಾಡಬೇಕೆಂದರು. ನೀಡಿದ ಮನವಿಗೆ ಸರ್ಕಾರದ ಈ ಪರಿಸ್ಥಿತಿಯಲ್ಲಿ ಮನ್ನಾ ಮಾಡಲು ಸಾಧ್ಯವಾಗದ ಕಾರಣ ಬಾಡಿಗೆ ಕಟ್ಟುವ ಅವಧಿಯನ್ನು ಮುಂದೂಡುವ ಬಗ್ಗೆ ಪ್ರಯತ್ನಿಸುವುದಾಗಿ ಅವರುಗಳಿಗೆ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷ ವೀರೇಶ್ ಆಲವಳ್ಳಿ, ಸದಸ್ಯ ಸುಬ್ರಹ್ಮಣ್ಯ ಕೆ.ವಿ, ಜಿಪಂ ಸದಸ್ಯ ಸುರೇಶ ಸ್ವಾಮಿರಾವ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಉಪಾಧ್ಯಕ್ಷೆ ಕೃಷ್ಣವೇಣಿ, ಸದಸ್ಯರಾದ ಗುರುರಾಜ್, ಸುರೇಂದ್ರ ಕೋಟ್ಯಾನ್, ನಾಗಪ್ಪ ಕೆ‌.ಕೆ, ಅಶ್ವಿನಿ ಕುಮಾರ್, ಗಾಯತ್ರಿ, ಸಿಂಥಿಯಾ, ಚಂದ್ರಕಲಾ ನಾಗರಾಜ್, ಶಾಹಿನಾ, ಮುಖ್ಯಾಧಿಕಾರಿ ಟಿ. ಬಾಲಚಂದ್ರಪ್ಪ ಮೊದಲಾದವರು ಉಪಸ್ಥಿತರಿದ್ದರು.

ಹೊಸನಗರ ಹಾಗೂ ಸುತ್ತಮುತ್ತಲಿ ಸುದ್ದಿಗಳಿಗಾಗಿ ಸಂಪರ್ಕಿಸಿ: 8277173177
ಜಾಹಿರಾತು

LEAVE A REPLY

Please enter your comment!
Please enter your name here