ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯ ಶ್ರೀ ದುರ್ಗಾಂಬ ದೇವಸ್ಥಾನ (ಮಾರಿಗುಡಿ)ದಲ್ಲಿ ಮೇ 9 ಸೋಮವಾರ ಸಂಜೆ 6:30 ಕ್ಕೆ ವಾಸ್ತು ರಾಕ್ಷೋಘ್ನ ಹೋಮ ಹಾಗೂ ಇತರೆ ಧಾರ್ಮಿಕ ಕಾರ್ಯಕ್ರಮಗಳು ಮೇ 10ರ ಮಂಗಳವಾರ ಬೆಳಿಗ್ಗೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಶೇಷವಾಗಿ ನಮ್ಮ ಸಾತ್ವಿಕ ಪ್ರಾರ್ಥನೆಗಳ ಬೇಡಿಕೆಗಳ ಶೀಘ್ರ ಈಡೇರಿಕೆಗಾಗಿ ನೂತನ ಪ್ರಾರ್ಥನಾ ಗಂಟೆಗೆ ಪೂಜೆ ಸಲ್ಲಿಸಿ ಮಹಾದ್ವಾರದಲ್ಲಿ ಸ್ಥಾಪಿಸಲಾಗುವುದು.
ಅಂದು ಮಧ್ಯಾಹ್ನ 12:30 ಕ್ಕೆ ಕಲಾಭಿವೃದ್ಧಿ ಹೋಮ ಪೂರ್ಣಾಹುತಿ ಹಾಗೂ ಮಂಗಳಾರತಿ ಮಧ್ಯಾಹ್ನ 1:00 ಗಂಟೆಯಿಂದ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ದುರ್ಗಾಂಬಾ ದೇವಸ್ಥಾನದ ಆಡಳಿತ ಮಂಡಳಿಯವರು ತಿಳಿಸಿದ್ದು ಭಕ್ತಮಹಾಶಯರು ಈ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಶ್ರೀದೇವಿಯ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.