ಹೊಸನಗರ: ಶ್ರೀ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹಾಸ್ಟೆಲ್’ನಲ್ಲಿ ಕೂಡಿ ಹಾಕಿ ಕಿರುಕುಳ..!?

0
9511

ಹೊಸನಗರ: ಇಲ್ಲಿನ ಶ್ರೀ ರಾಮಕೃಷ್ಣ ವಿದ್ಯಾಲಯದಲ್ಲಿ ಹಣಕ್ಕಾಗಿ 9ನೇ ತರಗತಿ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಲ್ಲಿ ಕೂಡಿ ಹಾಕಿ ಅವರ ತಂದೆ ತಾಯಿಗೆ ಶಾಲಾ ಶುಲ್ಕ ಪಾವತಿಸಿ ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಒತ್ತಾಯಿಸಿ ಮಕ್ಕಳನ್ನು ಕೂಡಿ ಹಾಕಿ ಹಿಂಸೆ ನೀಡಿರುವ ಬಗ್ಗೆ ಗಂಭೀರ ಆರೋಪವೊಂದು ಕೇಳಿ ಬಂದಿದೆ.

ಇದರಿಂದಾಗಿ ನೊಂದ ಹಲವು ವಿದ್ಯಾರ್ಥಿಗಳು ಶಾಲೆಯಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು ನಿನ್ನೆ ಸಂಜೆ 3 ಜನ ವಿದ್ಯಾರ್ಥಿಗಳು ಹೊಸನಗರದ ಹೊರವಲಯದಲ್ಲಿ ಹೋಗುವಾಗ ಸಾರ್ವಜನಿಕರಿಗೆ ಸಿಕ್ಕಿ ಬಿದ್ದಿದ್ದಾರೆ.

ಸರ್ಕಾರದ ಆದೇಶದಂತೆ 20ನೇ ತಾರೀಖಿನವರೆಗೂ 1 ರಿಂದ 9ನೇ ತರಗತಿ ವಿದ್ಯಾರ್ಥಿಗಳು ಶಾಲೆಗೆ ಬರುವಂತಿಲ್ಲ. ಆದರೆ ಇದನ್ನೆಲ್ಲ ಲೆಕ್ಕಿಸದೆ ವಿದ್ಯಾರ್ಥಿಗನ್ನು ಹಣಕ್ಕಾಗಿ ಕೂಡಿ ಹಾಕಿ ಹಿಂಸೆ ನೀಡಿದ್ದಾರೆ. ಸುಮಾರು 15ಕ್ಕೂ ಹೆಚ್ಚು ಮಕ್ಕಳು ಹಾಸ್ಟೆಲ್ ನಿಂದ ಓಡಿ ಹೋಗಿದ್ದು ನಿನ್ನೆ ವಿದ್ಯಾರ್ಥಿಗಳೆಲ್ಲ ನಿರ್ಧಾರ ಮಾಡಿ ಮೂರು ಜನರನ್ನು ಶೌಚಾಲಯದ ಕಿಟಕಿಯಿಂದ ಹೊರಗೆ ಕಳಿಸಿ ಈ ಎಲ್ಲಾ ವಿಷಯವನ್ನು ಮಾಧ್ಯಮದವರಿಗೆ ನೀಡುವಂತೆ ಚೀಟಿ ಬರೆದು ಅದನ್ನು ಒಬ್ಬ ವಿದ್ಯಾರ್ಥಿಯ ಗುಪ್ತಾಂಗದ ಭಾಗದಲ್ಲಿ ಇರಿಸಿ ಕಳುಹಿಸಿದ್ದಾರೆ.

ಈ ವಿಚಾರ ತಿಳಿದ ಜಿಲ್ಲಾ ಪಂಚಾಯಿತಿ ಸದಸ್ಯ ಸುರೇಶ್ ಸ್ವಾಮಿರಾವ್ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್ ಹಾಗೂ ಮತ್ತಿತರರು ಕೂಡಲೇ ವಿಷಯವನ್ನು ಬಿಇಓ ಹಾಗೂ ಪೊಲೀಸ್ ಇಲಾಖೆಗೆ ತಿಳಿಸಿ ಶಾಲೆಗೆ ಧಾವಿಸಿ ವಿಚಾರಿಸಿದ್ದಾರೆ.

ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ನಿರೀಕ್ಷಿಸಿ…

ಜಾಹಿರಾತು

LEAVE A REPLY

Please enter your comment!
Please enter your name here