ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ ಏ. 7ರಿಂದ 11 ರವರೆಗೆ ಅದ್ಧೂರಿ ಶ್ರೀ ರಾಮೋತ್ಸವ ಸಂಭ್ರಮ

0
442

ಹೊಸನಗರ: ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನ ಶ್ರೀ ಸಂಸ್ಥಾನ ಗೋಕರ್ಣ ರಾಮಚಂದ್ರಾಪುರ ಮಠದ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ದಿವ್ಯ ಸಾನಿಧ್ಯದಲ್ಲಿ ಚೈತ್ರಶುದ್ಧ ಷಷ್ಠಿ ಏಪ್ರಿಲ್ 7ರಿಂದ ಚೈತ್ರ ಶುದ್ಧ ದಶಮಿ ಏಪ್ರಿಲ್ 11 ರವರಗೆ ಶ್ರೀ ರಾಮೋತ್ಸವ ಸಂಭ್ರಮ ನಡೆಯಲಿರುವುದಾಗಿ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಮೋತ್ಸವ ಸೇವಾ ಸಮಿತಿ ನಿರ್ವಹಣಾ ಸಮಿತಿ ಹಾಗೂ ಹವ್ಯಕ ಮಹಾಮಂಡಲ ಸಮಿತಿಯವರು ತಿಳಿಸಿ, ಅದ್ದೂರಿಯಾಗಿ ನಡೆಯುವ ಈ ಉತ್ಸವಗಳಲ್ಲಿ ಭಾಗಿಗಳಾಗಿ ಶ್ರೀಗುರು ದೇವತಾ ಕೃಪೆಗೆ ಪಾತ್ರರಾಗಬೇಕೆಂದು ಕೋರಿದ್ದಾರೆ.

ಏಪ್ರಿಲ್ 7 ರ ಗುರುವಾರ ಚೈತ್ರ ಶುದ್ಧ ಷಷ್ಠಿಯಂದು ಶಿಬಿಕೋತ್ಸವ ಕಂಕಣ ಧ್ವಜಾರೋಹಣ ಯಂತ್ರೋತ್ಸವ ರಾಮತಾರಕ ಹವನ ಯೋಗ ಪಟ್ಟಾಭಿಷೇಕ ದಿನ ಮಹಾಪಾದುಕಾ ಪೂಜೆ, ಏಪ್ರಿಲ್ 08ರ ಚೈತ್ರಶುದ್ಧ ಸಪ್ತಮಿಯ ದಿನ ಗರುಡೋತ್ಸವ ರಾಮತಾರಕ ಹವನ, ಏಪ್ರಿಲ್ 9ರ ಚೈತ್ರ ಶುದ್ಧ ಅಷ್ಟಮಿಯಂದು ಪುಷ್ಪ ಉತ್ಸವ ರಾಮತಾರಕ ಹವನ ಅಖಂಡ ಭಜನೆ ಸೀತೊತ್ಸವ ಪೂಗ ಪೂಜೆ ಶ್ರೀಶ್ರೀಗಳವರ ಅಮೃತ ಹಸ್ತದಿಂದ ಶ್ರೀಮಾತಾ ಪ್ರಶಸ್ತಿ ಪ್ರಧಾನ ಆಶೀರ್ವಚನ ರಾತ್ರಿ ಪುಷ್ಪ ರಥೋತ್ಸವ, ಏಪ್ರಿಲ್ 10 ಚೈತ್ರ ಶುದ್ಧ ನವಮಿಯಂದು ಸ್ಕಂದನೋತ್ಸವ ರಾಮೋತ್ಸವ ಶ್ರೀರಾಮ ಜನ್ಮೋತ್ಸವ ಶ್ರೀಮನ್ ಮಹಾ ರಥೋತ್ಸವ ಪುರುಷೋತ್ತಮ ಪ್ರಶಸ್ತಿ ಪ್ರಧಾನ ಶ್ರೀಗಳವರಿಂದ ಆಶೀರ್ವಚನ ಸಂಜೆ ಸೀತಾ ಕಲ್ಯಾಣ ಶ್ರೀ ರಾಮ ಲೀಲಾ ಉತ್ಸವ, ಏಪ್ರಿಲ್ 11ರ ಸೋಮವಾರ ಚೈತ್ರ ಶುದ್ಧ ದಶಮಿಯಂದು ಕುಂಕುಮೋತ್ಸವ ಆಂಜನೇಯುತ್ಸವ ಸಂಧ್ಯಾಮಂಗಲ ಭಜನಾ ಮಂಗಲ ಧನ್ಯ ಸೇವಕ ಪ್ರಶಸ್ತಿ ಪ್ರಧಾನ ಶ್ರೀಗಳವರಿಂದ ಆಶೀರ್ವಚನ ಮಂತ್ರಾಕ್ಷತೆ ಹಾಗೂ ಸಂಜೆ ದೀಪ ಮಾಲಿಕೆ ಕಾರ್ಯಕ್ರಮಗಳು ನಡೆಯಲಿದೆ.

ಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳವರ ದಿವ್ಯಸಾನಿಧ್ಯದಲ್ಲಿ ಸಮಾಯೋಚಿತಗೊಂಡಿರುವ ಶ್ರೀ ರಾಮೋತ್ಸವ ಸಪರಿವಾರ ಶ್ರೀ ಸೀತಾ ರಾಮಚಂದ್ರದೇವರ ವಿಶಿಷ್ಟ ಉಪಾಸನೆಯಾಗಿದ್ದು ಭಕ್ತ ವೃಂದದವರು ಉತ್ಸವಗಳಲ್ಲಿ ಭಾಗಿಗಳಾಗಿ ಶ್ರೀ ಗುರುದೇವತಾ ಕೃಪೆಗೆ ಪಾತ್ರರಾಗಬೇಕೆಂದು ಸಮಿತಿಯವರು ಕೋರಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here