ಹೊಸನಗರ: ಸಂಭ್ರಮದ ಗೋಪೂಜೆ

0
1105

ಹೊಸನಗರ: ಹಿಂದುಗಳ ಅತಿದೊಡ್ಡ ಹಬ್ಬವಾದ ದೀಪಾವಳಿ ಆಚರಣೆಯ ಮೂರನೇ ದಿನವಾದ ಶುಕ್ರವಾರ ತಾಲೂಕಿನಾದ್ಯಂತ ಗೋಪೂಜೆಯನ್ನು ಸಂಭ್ರಮದಿಂದ ಆಚರಿಸಲಾಯಿತು‌.

ದನ-ಕರುಗಳಿಗೆ ಚೆಂಡು ಹೂವಿನ ಮಾಲೆ, ಉಗಣೆಕಾಯಿ ಸರ, ಪಚ್ಚೆತೆನೆ, ಅಂಬಾಡಿ ಎಲೆ, ಹಸಿ ಅಡಿಕೆಗಳನ್ನು ಸೇರಿಸಿ ಮಾಲೆ ಮಾಡಿ ಕಟ್ಟುವ ಮೂಲಕ ಗೋವುಗಳಿಗೆ ವಿಶೇಷ ಖಾದ್ಯ ಉಣಬಡಿಸಿ ಸಂಭ್ರಮಿಸುತ್ತಾರೆ.

ಜಗದ್ವಿಖ್ಯಾತ ಶ್ರೀ ಗೋಕುಲ ಸಂಸ್ಥಾನದ ಶ್ರೀರಾಮಚಂದ್ರಪುರ ಮಠದ ಗೋಶಾಲೆಯಲ್ಲಿ ಗೋವುಗಳನ್ನು ಸಿಂಗರಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಗೋಪೂಜೆಯನ್ನು ಸಂಭ್ರಮಿಸಲಾಯಿತು.

ದೀಪಾವಳಿ ಹಬ್ಬದ ನಾಲ್ಕನೆಯ ದಿನ ಶನಿವಾರ ಯಮನ ಬಿದಿಗೆ ಆಚರಿಸಲಾಗುವುದು. ಹಬ್ಬದ ಸಂಭ್ರಮದ ಕೊನೆಯ ದಿನವಾದ ಭಾನುವಾರ ವರ್ಷದೊಡಕು ಆಚರಣೆಯೊಂದಿಗೆ ದೀಪಾವಳಿ ಸಂಭ್ರಮಕ್ಕೆ ತೆರೆಬೀಳಲಿದೆ.

ಜಾಹಿರಾತು

LEAVE A REPLY

Please enter your comment!
Please enter your name here