ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶಿಷ್ಟ ರೀತಿಯಲ್ಲಿ ವಿಶ್ವ ಹೃದಯ ದಿನಾಚರಣೆ ಆಚರಿಸಿದ ರಿಪ್ಪನ್‌ಪೇಟೆ ರೋಟರಿಯನ್‌ಗಳು

0
532

ಹೊಸನಗರ : ಯಾವುದೇ ವ್ಯವಸ್ಥೆಗಳು ಇರಲಿ ಪ್ರಥಮವಾಗಿ ಪ್ರಕಟಿಸುವುದು ಹೊಸನಗರ ತಾಲ್ಲೂಕು ರಿಪ್ಪನ್‌ಪೇಟೆ ವಾಸಿಗಳಾಗಿದ್ದಾರೆ. ಅದೇ ರೀತಿ ಇಂದು ಸಹ ರಿಪ್ಪನ್‌ಪೇಟೆ ರೋಟರಿ ಕ್ಲಬ್ ನವರು ಸ್ಥಾಪಕ ಅಧ್ಯಕ್ಷ ಉದ್ಯಮಿ ಎಂ.ಬಿ ಲಕ್ಷ್ಮಣಗೌಡ ರವರ ಮಗಳು ಮತ್ತು ಅಳಿಯ ಅಮೇರಿಕದಲ್ಲಿದ್ದು ಅವರು ತವರಿಗೆ ನೀಡಿದ ಕೊಡುಗೆಗಳಾದ ಮೂರು ಆಮ್ಲಜನಕ ಕೇಂದ್ರಿಕರಣ ಉಪಕರಣಗಳಲ್ಲಿ ಎರಡು ಉಪಕರಣಗಳನ್ನು ಹೊಸನಗರ ಸಾರ್ವಜನಿಕ ಆಸ್ಪತ್ರೆಗೆ ಹಾಗೂ ಒಂದು ಉಪಕರಣವನ್ನು ರಿಪ್ಪನ್‌ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹಸ್ತಾಂತರಿಸುವ ಮೂಲಕ ವಿಶ್ವ ಹೃದಯ ದಿನಾಚರಣೆಯನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿ ಸಂಭ್ರಮಿಸಿದರು.

ರಿಪ್ಪನ್‌ಪೇಟೆ ರೋಟರಿ ಕ್ಲಬ್ ಅಧ್ಯಕ್ಷ ಆರ್. ನಾಗಭೂಷಣ್ ರವರ ಅಧ್ಯಕ್ಷತೆಯಲ್ಲಿ ಹೊಸನಗರ ತಾಲೂಕು ಆಸ್ಪತ್ರೆ ಸಭಾಂಗಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ರೋಟರಿ ಕ್ಲಬ್‌ನ ಜೋನಲ್ ಲೆಫ್ಟಿನೆಂಟ್ ಗಣೇಶ ಎನ್. ಕಾಮತ್, ಸಂಸ್ಥಾಪಕ ಅಧ್ಯಕ್ಷ ಎಂ.ಬಿ ಲಕ್ಷ್ಮಣಗೌಡ, ಕಾರ್ಯದರ್ಶಿ ಡಾಕಪ್ಪ, ತಾಲೂಕು ಆರೋಗ್ಯಾಧಿಕಾರಿ ಡಾ‌. ಸುರೇಶ್, ವೈದ್ಯಾಧಿಕಾರಿಗಳಾದ ಡಾ. ಲಿಂಗರಾಜು, ಡಾ. ಹೇಮಂತ್, ಆಸ್ಪತ್ರೆ ನರ್ಸಿಂಗ್ ಆಫೀಸರ್ ಗಜೇಂದ್ರ, ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿಗಳು, ರೋಟರಿ ಕ್ಲಬ್ ಸದಸ್ಯರುಗಳು ಪಾಲ್ಗೊಂಡಿದ್ದರು.

ಐಎಂಎ ಅಧ್ಯಕ್ಷ ಡಾ. ಶಿವಯೋಗಿ ಮಾತನಾಡಿ, ಕೋವಿಡ್ ನಂತಹ ಮಾರಣಾಂತಿಕ ಕಾಯಿಲೆ ಹಿಮ್ಮೆಟ್ಟಿಸುವ ಏಕೈಕ ಯಂತ್ರ ಆಕ್ಸಿಜನ್ ಕಾನ್ಸರ್ ಥಿಯೇಟರ್ ಆಗಿದ್ದು ಆಧುನಿಕ ಯಂತ್ರದ ಬಳಕೆಯಿಂದ ಕೋವಿಡ್ ನಿಂದ ಮರಣ ಶಯೆಯಲ್ಲಿರುವವರನ್ನು ಬದುಕಿಸ ಬಹುದಾಗಿದೆ ಎಂದರು. ವಿಶ್ವದಲ್ಲಿ ಕೋವಿಡ್ ನಿಂದ ಸಾವನ್ನಪ್ಪುತ್ತಿರುವವರಲ್ಲಿ ಹತ್ತು ಜನರಲ್ಲಿ ಒಬ್ಬ ಭಾರತೀಯರಿದ್ದಾರೆ. ರೋಟರಿ ಸಂಸ್ಥೆಯವರು ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಸೇವೆ ಚಿರಸ್ಮರಣೀಯವಾಗಿದೆ ಎಂದರು.

ನೇತ್ರತಜ್ಞ ಎ.ಎಂ ಕೃಷ್ಣರಾಜು ಸ್ವಾಗತಿಸಿದರು. ಆರ್. ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಎಂ.ಬಿ ಮಂಜುನಾಥ್ ಗೌಡ ವಂದಿಸಿದರು.

ವರದಿ : ಉಡುಪಿ ಎಸ್ ಸದಾನಂದ ಹೊಸನಗರ 8277173177
ಜಾಹಿರಾತು

LEAVE A REPLY

Please enter your comment!
Please enter your name here