ಹೊಸನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕಾಯ್ದೆಯ ಅರಿವು ಬಗ್ಗೆ ಕಾರ್ಯಾಗಾರ

0
360

ಹೊಸನಗರ : ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಛೇರಿ ಆಶ್ರಯದಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮಾಹಿತಿ ಸಭಾಂಗಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರಿಗೆ ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಕಾಯ್ದೆಯ ನಿರ್ಮೂಲನೆ ಕಾರ್ಯಾಗಾರವನ್ನು ತಾಲೂಕು ಆಡಳಿತದ ಶಿರಸ್ತೇದಾರ್ ಸುರೇಶ್ ಅವರ ಅಧ್ಯಕ್ಷತೆಯಲ್ಲಿ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ವ್ಯವಹಾರ ನ್ಯಾಯಾಧೀಶೆ ಕೆ. ಪುಷ್ಪಲತಾನವರು ಉದ್ಘಾಟಿಸಿ ಮಾತನಾಡಿ, ಅಪ್ರಾಪ್ತ ವಯಸ್ಸಿನ ಬಾಲಕಿಯರ ಹಾಗೂ ಮಕ್ಕಳ ಸಾಗಾಣಿಕೆ ಹಾಗೂ ಮಾರಾಟ ಖಂಡನಾರ್ಹವಾಗಿದೆ ಇದಕ್ಕೆ ಅನಕ್ಷರತೆ ಬಡತನ ಅತಿವೃಷ್ಟಿ ಹಾಗೂ ಅನಾವೃಷ್ಟಿಗಳು ಕಾರಣವಾಗಿದೆ. ಈ ನಿಟ್ಟಿನಲ್ಲಿ ಕಾನೂನು ಸೇವಾ ಸಮಿತಿ ಅಂಥವರ ಸಂರಕ್ಷಣೆಯಲ್ಲಿ ತೊಡಗಿದ್ದು ಇದಕ್ಕೆ ಸಾರ್ವಜನಿಕರ ಸಹಭಾಗಿತ್ವದ ಅಗತ್ಯತೆ ಇದೆ ಇಂತಹ ಪ್ರಕರಣಗಳಿಗೆ ಕಾನೂನಿನ ಮುಖಾಂತರ ಸಾಮಾಜಿಕ ಭದ್ರತೆಯ ಲಭ್ಯವಿದೆ ಎಂದರು.

ಈ ಕಾರ್ಯಾಗಾರದಲ್ಲಿ ಜೆಎಂಎಫ್ಸಿ ನ್ಯಾಯಾಲಯದ ಪ್ರಧಾನ ವ್ಯವಹಾರ ನ್ಯಾಯಾಧೀಶ ಕೆ ರವಿಕುಮಾರ್ ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಮಕ್ಕಳ ತಜ್ಞ ಡಾ ಶಾಂತರಾಜ್ ಆರಕ್ಷಕ ಠಾಣೆಯ ಪಿಎಸ್ಐ ಎಂ.ಎನ್. ರಾಜೇಂದ್ರ ನಾಯ್ಕ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ಅನಕ್ಷರತೆ ಹಾಗೂ ಬಡತನದ ಬೇಗೆಯಲ್ಲಿರುವ ಕುಟುಂಬಗಳನ್ನು ಸಂಪರ್ಕಿಸಿ ಆಮಿಷವೊಡ್ಡಿ ಅಪ್ರಾಪ್ತ ಹೆಣ್ಣುಮಕ್ಕಳನ್ನು ಹಾಗೂ ಸಣ್ಣ ಮಕ್ಕಳನ್ನು ಖರೀದಿಸಿ ಅವರುಗಳನ್ನು ವೇಶ್ಯಾವಾಟಿಕೆಗಳಿಗೆ ಹಾಗೂ ಭಿಕ್ಷಾಟನೆಗೆ ತಳ್ಳುವ ಜಾಲ ದೊಡ್ಡ ದೊಡ್ಡನಗರಗಳಲ್ಲಿ ಲೀಲಾಜಾಲವಾಗಿ ತಮ್ಮ ಬಲೆ ಬೀಸುತ್ತಿದ್ದ ಅವರುಗಳ ರಕ್ಷಣೆ ಕಾರ್ಯದ ಜವಾಬ್ದಾರಿ ಹೊಂದುವ ಮೂಲಕ ಅವರುಗಳಿಗೆ ಹೊಸಬಾಳು ನೀಡಬೇಕಾಗಿದೆ ಎಂದರು.

ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದ ವಕೀಲ ವಿ.ಜೆ ಕರ್ಣಕುಮಾರ್, ಮಹಿಳೆಯರು ಮತ್ತು ಮಕ್ಕಳು ದೇಶದ ಪ್ರಗತಿಗೆ ಪೂರಕವಾಗಿದ್ದಾರೆ ಸಣ್ಣ ಮಕ್ಕಳನ್ನು ಖರೀದಿಸಿ ಇಲ್ಲವೇ ಅಪಹರಿಸಿ ಅಂಗಾಂಗ ಊನ ಮಾಡುವ ಮೂಲಕ ಭಿಕ್ಷಾಟನೆ ಹಾಗೂ ಗಣಿಗಾರಿಕೆಯ ಕೆಲಸಗಳಿಗೆ ಬಳಸುವ ಹೀನಕೃತ್ಯಗಳು ನಡೆಯುತ್ತಿದ್ದು ಅವುಗಳಿಗೆ ಮಟ್ಟ ಹಾಕಬೇಕಾಗಿದೆ. ಬಡತನದ ಬೇಗೆಯಲ್ಲಿರುವ ಅಪ್ರಾಪ್ತ ಹೆಣ್ಣುಮಕ್ಕಳನ್ನು ಸಾಕುವ ನೆಪದಲ್ಲಿ ಖರೀದಿಸಿ ವೇಶ್ಯಾವಾಟಿಕೆಗಳಿಗೆ ತಳ್ಳುವ ಜಾಲಗಳಿಗೆ ಮಟ್ಟ ಹಾಕಬೇಕಾಗಿದೆ ಎಂದರು.

ಅಪ್ರಾಪ್ತ ವಯಸ್ಸಿನ ಮಕ್ಕಳಿಗೆ ವಿವಾಹ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದ್ದು ಇಂತಹ ವಿವಾಹಗಳನ್ನು ತಡೆಯಬೇಕಾಗಿದೆ ಎಂದ ಅವರು ಹೆಣ್ಣುಮಕ್ಕಳು ದುಡಿಮೆಯ ವಸ್ತು ಅಲ್ಲ ಎಂಬುದನ್ನು ಪ್ರತಿಪಾದಿಸಿದರು.

ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯ ಕುಮಾರಿ ಸುಜಾತ ಸ್ವಾಗತಿಸಿದರು‌‌. ದಿವ್ಯ ಕಾರ್ಯಕ್ರಮ ನಿರೂಪಿಸಿದರು. ಚಂದ್ರಕಲಾ ಅಭಾರ ಮನ್ನಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here