24.3 C
Shimoga
Friday, December 9, 2022

ಹೊಸನಗರ ; ಸಾವನ್ನು ಆಹ್ವಾನಿಸುತ್ತಿರುವ ರಸ್ತೆ ಗುಂಡಿಗಳು !!

ಹೊಸನಗರ : ಪಟ್ಟಣದ ಬಸ್ ಸ್ಟ್ಯಾಂಡ್, ಪೊಲೀಸ್ ಸ್ಟೇಷನ್, ಪಟ್ಟಣ ಪಂಚಾಯತಿ ಕಚೇರಿಗಳ ಎದುರು ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 766 ಸಿ ರಲ್ಲಿ ಕಳೆದ ಕೆಲವು ತಿಂಗಳುಗಳಿಂದ ರಸ್ತೆ ಗುಂಡಿಗಳಿಂದ ತುಂಬಿದ ಪ್ರತಿದಿನ ಸಂಚರಿಸುವ ನೂರಾರು ದ್ವಿಚಕ್ರ ವಾಹನಗಳು ರಸ್ತೆ ಗುಂಡಿಗಳು ಕಾಣದೆ ಬಿದ್ದು ಸವಾರರು ಗಾಯಗೊಳ್ಳುತ್ತಿದ್ದರು ಪಟ್ಟಣದ ಜವಾಬ್ದಾರಿಯನ್ನು ಹೊತ್ತ ಆಡಳಿತ ಗುಂಡಿಗಳನ್ನು ಮುಚ್ಚದೆ ಅಥವಾ ಸಂಬಂಧಪಟ್ಟವರ ಗಮನಕ್ಕೆ ತಾರದ ಕಾರಣ ಪ್ರತಿ ದಿನ ನೂರಾರು ವಾಹನ ಚಾಲಕರು ಪ್ರಯಾಣಿಕರು ಪಟ್ಟಣದ ಆಡಳಿತಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.

ಪಟ್ಟಣದ ಶಾಸಕರ ಹಿರಿಯ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಶಾಲೆ, ಗಂಡು ಮಕ್ಕಳ ಪ್ರಾಥಮಿಕ ಶಾಲೆ, ಸರ್ಕಾರಿ ಪದವಿ ಪೂರ್ವ ಕಾಲೇಜು ತಾಲೂಕು ಕಚೇರಿ ತಾಲೂಕು ಪಂಚಾಯಿತಿ ಕಚೇರಿ ಸಾರ್ವಜನಿಕ ಆಸ್ಪತ್ರೆಗೆ ಸಾವಿರಾರು ಜನರು ಶಾಲಾ ಮಕ್ಕಳು ಈ ಗುಂಡಿಗಳನ್ನು ತಪ್ಪಿಸಿಕೊಂಡು ಓಡಾಡಬೇಕಾಗಿದ್ದು ಸಂಬಂಧಪಟ್ಟವರು ತಕ್ಷಣ ಗುಂಡಿಗಳನ್ನು ಮುಚ್ಚುವ ಮೂಲಕ ಇಲ್ಲಿ ಓಡಾಡುವ ಸಾರ್ವಜನಿಕರು ಶಾಲಾ ಮಕ್ಕಳಿಗೆ ನೆರೆದ ನೆರವಾಗಬೇಕೆಂದು ಆಗ್ರಹಿಸಿದ್ದಾರೆ.

- Advertisement -

More articles

1 COMMENT

LEAVE A REPLY

Please enter your comment!
Please enter your name here

- Advertisement -

Latest article

error: Content is protected !!