ಹೊಸನಗರ ಸಿಡಿಪಿಒ ಆಗಿ ಶಶಿರೇಖಾ ಅಧಿಕಾರ ಸ್ವೀಕಾರ

0
1368

ಹೊಸನಗರ: ಇಲ್ಲಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಯ ಪ್ರಭಾರ ಸಿಡಿಪಿಒ ಆಗಿ ಶಶಿರೇಖಾ ರವರು ಇಂದು ಅಧಿಕಾರ ಸ್ವೀಕಾರ ಮಾಡಿದರು.

ಇವರು ತೀರ್ಥಹಳ್ಳಿ ಸಿಡಿಪಿಒ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು ಹೊಸನಗರ ಸಿಡಿಪಿಒ ಆಗಿದ್ದ ರಾಘವೇಂದ್ರರವರು ಭದ್ರಾವತಿ ಸಿಡಿಪಿಒ ಆಗಿ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಶಶಿರೇಖಾ ರವರು ಹೊಸನಗರ ಸಿಡಿಪಿಒ ಆಗಿ ಹೆಚ್ಚುವರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ರಾಜ್ಯದಲ್ಲಿ ಅತಿ ಹೆಚ್ಚು ಭೂ ವಿಸ್ತೀರ್ಣ ಹೊಂದಿದ ಹೊಸನಗರ ತಾಲೂಕಿನಲ್ಲಿ ಒಟ್ಟು 345 ಅಂಗನವಾಡಿಗಳಿದ್ದು ಈ ತಾಲೂಕು ಅವರ ಕಾರ್ಯಕ್ಷಮತೆಗೆ ಸವಾಲಾಗಿ ಪರಿಣಮಿಸಿದೆ. ಈ ನಿಟ್ಟಿನಲ್ಲಿ ಅವರು ಇಂದು ಕಚೇರಿ ಸಿಬ್ಬಂದಿಗಳ ಸೌಹಾರ್ದ ಸಭೆ ಕರೆದು ಕರ್ತವ್ಯವೇ ದೇವರಾಗಿದ್ದು ಎಲ್ಲರೂ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುವಂತೆ ಕರೆ ನೀಡಿ ಸಹಕಾರ ಆಶಿಸಿದರು.

ಜಾಹಿರಾತು

LEAVE A REPLY

Please enter your comment!
Please enter your name here