ಹೊಸನಗರ ; ಸೀತಾರಾಮಚಂದ್ರ ಸಭಾಭವನದಲ್ಲಿ ರಾಮನವಮಿ ಆಚರಣೆ

0
364

ಹೊಸನಗರ: ಇಲ್ಲಿನ ಕೋಟೆಗಾರ್ ಯುವಕ ಸಂಘದ ಆಶ್ರಯದಲ್ಲಿ ರಾಮನವಮಿಯ ಪ್ರಯುಕ್ತ ಸೀತಾರಾಮಚಂದ್ರ ಸಭಾಭವನದ ಆವರಣದಲ್ಲಿ ಭಾನುವಾರ ರಾಮನವಮಿ ಆಚರಿಸಲಾಯಿತು.

ಬೆಳಿಗ್ಗೆಯಿಂದ ಸೀತಾರಾಮಚಂದ್ರ ದೇವರ ಫೋಟೋ ಜೊತೆಗೆ ಕಳಸ ಇಟ್ಟು ಹೊಸನಗರದ ಪ್ರಸಿದ್ಧ ಪೂರೋಹಿತರಾದ ಕೃಷ್ಣಮೂರ್ತಿ ಭಟ್‌ರವರು ಪೂಜೆ ಸಲ್ಲಿಸಿದರು. ಪೂಜೆಯ ನಂತರ ಕೋಸೊಂಬರಿ ಹಾಗೂ ಪಾನಕವನ್ನು ಭಕ್ತರಿಗೆ ವಿತರಿಸಿದರು.

ಸೋಮವಾರ ಅನ್ನಸಂತರ್ಪಣೆ:

ರಾಮನವಮಿಯ ಪ್ರಯುಕ್ತ ಸಾರ್ವಜನಿಕ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಸೋಮವಾರ ಮಧ್ಯಾಹ್ನ 1ಗಂಟೆಗೆ ಏರ್ಪಡಿಸಲಾಗಿದೆ ಎಂದು ಕೋಟೆಗಾರ್ ಯುವಕ ಸಂಘದ ಅಧ್ಯಕ್ಷರಾದ ಅರುಣ್‌ಕುಮಾರ್‌ರವರು ತಿಳಿಸಿದ್ದು ಸಾರ್ವಜನಿಕರು ಹಾಗೂ ಸ್ವಜಾತಿ ಬಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿಕೊಡಬೇಕೆಂದು ಈ ಮೂಲಕ ಕೇಳಿಕೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here