ಹೊಸನಗರ: ಹಿನ್ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದ ಪ್ರವಾಸಿಗನ ಮೃತದೇಹ ಪತ್ತೆ..!

0
1545

ಹೊಸನಗರ: ತಾಲ್ಲೂಕಿನ ಚಕ್ರನಗರ ಡ್ಯಾಂ ಹಿನ್ನೀರಿನಲ್ಲಿ ಶನಿವಾರ ಸಂಜೆ ಈಜಲು ಹೋಗಿ ವಿಶ್ವೇಶ್ವರ ಮತ್ತು ಹರಿ ಎಂಬ ಇಬ್ಬರು ನೀರಿನಲ್ಲಿ ಮುಳುಗಿದ್ದು ವಿಶ್ವೇಶ್ವರ (58) ಎಂಬುವವರನ್ನು ರಕ್ಷಿಸಿ ಕೂಡಲೇ ಮಾಸ್ತಿಕಟ್ಟೆ ಖಾಸಗಿ ಕ್ಲಿನಿಕ್‌ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ತೀರ್ಥಹಳ್ಳಿ ಆಸ್ವತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ವಿಶ್ವೇಶ್ವರರವರು ಮೃತಪಟ್ಟಿದ್ದರು.

ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದ ಹರಿ (58) ಶವ ಇಂದು ಬೆಳಗ್ಗೆ ಪತ್ತೆಯಾಗಿದ್ದು ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧನೆ ಮಾಡಿ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದಾರೆ.

ಘಟನೆ ನಡೆದ ಬಗ್ಗೆ ವಿಷಯ ತಿಳಿದು ಕೂಡಲೇ ಹೊಸನಗರ ಅಗ್ನಿ ಶಾಮಕದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಕಾರ್ಯಚರಣೆ ನಡೆಸಿದ್ದರು‌. ಆದರೆ ಯಾವುದೇ ಪ್ರಯೋಜನವಾಗಿರಲಿಲ್ಲ. ಬೆಂಗಳೂರು ಬಸವನಗುಡಿ ನಿವಾಸಿಗಳಾದ ನಾಲ್ವರು ಮಹಿಳೆಯರು ಸೇರಿ 16 ಜನರು ಪ್ರವಾಸಕ್ಕೆ ಬಂದಿದ್ದರು. ಚಕ್ರನಗರ ಕಾಡು ಪ್ರವಾಸದಲ್ಲಿರುವ ಮತ್ತೂರು ಶ್ರೀ ವನದುರ್ಗಪರಮೇಶ್ವರಿ ದೇವಸ್ಥಾನಕ್ಕೆ ಹೋಗಿ ನಂತರ ಹಿನ್ನೀರ ತೀರಕ್ಕೆ ತೆರಳಿದ್ದರು.

ಸ್ಥಳಕ್ಕೆ ನಗರ ಪೋಲೀಸ್ ಠಾಣೆ ಸಬ್ ಇನ್ಸ್ಪೇಕ್ಟರ್ ಶಿವರಾಜ್ ಹಾಗೂ ಎ.ಎಸ್.ಐ ಗಣಪತಿ ಭೇಟಿ ನೀಡಿ ಪರೀಶೀಲನೆ ನಡೆಸಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here