ಹೊಸನಗರ: 5 ಲಕ್ಷ ರೂ. ಮೌಲ್ಯದ ಗಾಂಜಾ ವಶ..! 4 ಬಂದೂಕು ಸಹಿತ ಆರೋಪಿಯ ಬಂಧನ

0
3520

ಹೊಸನಗರ: ಇಂದು ಬೆಳಗಿನ ಜಾವ 02-30ಕ್ಕೆ ಹೊಸನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಳೂರು ನಂದ್ಯಾಲಕೊಪ್ಪ ಗ್ರಾಮದ ವಾಸಿ ಸುನಿಲ್ (45) ಎಂಬಾತನು ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ, ತನ್ನ ಮನೆಯ ಮುಂದೆ ನಿಲ್ಲಿಸಿರುವ ಕಾರ್ ನಲ್ಲಿ ಇಟ್ಟುಕೊಂಡಿರುವ ಬಗ್ಗೆ ಪೊಲೀಸರಿಗೆ ಬಂದ ಮಾಹಿತಿಯ ಮೇರೆಗೆ, ಹೊಸನಗರ ಪಿಎಸ್ಐ, ದಂಡಾಧಿಕಾರಿಗಳು, ಪಂಚರು ಮತ್ತು ಸಿಬ್ಬಂದಿಗಳ ತಂಡದೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ನಡೆಸಿ ಆರೋಪಿ ಸುನಿಲ್ ನಿಂದ 5 ಲಕ್ಷ ರೂ. ಮೌಲ್ಯದ 16 ಕೆ.ಜಿ 420 ಗ್ರಾಂ ತೂಕದ ಗಾಂಜಾ, 4 ಬಂದೂಕು ಹಾಗೂ ಜೀವಂತ ಮದ್ದು ಗುಂಡುಗಳು, 3,500 ರೂ. ನಗದುಹಣ, 2 ಮೊಬೈಲ್ ಫೋನ್ ಗಳು ಮತ್ತು ಒಂದು KIA ಕಂಪನಿ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯ ವಿರುದ್ಧ ಹೊಸನಗರ ಪೊಲೀಸ್ ಠಾಣೆಯಲ್ಲಿ ಕಲಂ 8(c), 20(B) (II) (b) NDPS ACT ಹಾಗೂ ಕಲಂ 3, 25 INDIAN ARMS ACT ರಿತ್ಯಾ ಪ್ರಕರಣ ದಾಖಲಿಸಿ, ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here