ಹೊಸನಗರ ; 27 ಲಕ್ಷ ರೂ. ಲಾಭದಲ್ಲಿ ಕಳೂರು ಶ್ರೀರಾಮೇಶ್ವರ ಸಹಕಾರಿ ಸಂಘ

0
411


ಹೊಸನಗರ: ಪಟ್ಟಣದ ಪ್ರತಿಷ್ಠಿತ ಸಹಕಾರಿ ಸಂಸ್ಥೆಗಳಲ್ಲಿ ಒಂದಾಗಿರುವ ಹಾಗೂ ವರದಿ ಸಾಲಿನಲ್ಲಿ ಎ ಶ್ರೇಣಿ ಪಡೆದಿರುವ ಕಳೂರು ಶ್ರೀರಾಮೇಶ್ವರ ಪ್ರಾಥಮಿಕ ಪತ್ತಿನ ಸಹಕಾರ ಸಂಘವೂ 2021-22ನೇ ಸಾಲಿನಲ್ಲಿ 79 ಕೋಟಿ ರೂ. ಗಿಂತಲೂ ಹೆಚ್ಚು ವಹಿವಾಟು ನಡೆಸಿದ್ದು ಹಿಂದಿನ ವರ್ಷ 71ಕೋಟಿ ರೂ. ಗಿಂತ ಈ ವರ್ಷ 8ಕೋಟಿ ರೂ. ಹೆಚ್ಚುವರಿಯಾಗಿ ವಹಿವಾಟು ನಡೆಸಿದೆ ಹಾಗೂ ಡಿಪಾಜಿಟ್‌ನಲ್ಲಿ ಗಣನೀಯ ಏರಿಕೆ ಕಂಡು ಈ ವರ್ಷ ಹಿಂದಿನ ಸಾಲಿಗಿಂತಲೂ 1ಕೋಟಿ 14 ಲಕ್ಷ ರೂ.ನಷ್ಟು ಹಣ ಡಿಪಾಸಿಟ್ ರೂಪದಲ್ಲಿ ಹಣ ಸಂಗ್ರಹವಾಗಿದೆ 2021-22ರಲ್ಲಿ 95,33,925.61 ನಿವ್ವಳ ಲಾಭ ಗಳಿಸಿದೆ ಎಂದು ಕಳೂರು ಸೊಸೈಟಿಯ ಅದ್ಯಕ್ಷರಾದ ದುಮ್ಮ ವಿನಯ್ ಕುಮಾರ್‌ರವರು ಹೇಳಿದರು.


ಹೊಸನಗರದ ಗಾಯತ್ರಿ ಮಂದಿರದಲ್ಲಿ ಸರ್ವ ಸದಸ್ಯರ ಮಹಾಸಭೆ ನಡೆಸಲಾಗಿದ್ದು ಈ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.


2021ಕ್ಕೆ 2603 ಷೇರುದಾರರನ್ನು ಹೊಂದಿದ್ದು ಷೇರು ಮೊಬಲಗು 1,25,65,661 ರೂ. ಹೊಂದಿದೆ. ನಮ್ಮ ಸಂಘವು 5,14,29,000 ರೂ. ಹೊಂದಿರುತ್ತದೆ. ನಮ್ಮ ಸಂಸ್ಥೆಯು 2022ಕ್ಕೆ ಬೆಳೆ ಸಾಲ ಶೂನ್ಯ ಬಡ್ಡಿದರದಲ್ಲಿ 743 ಜನ ಸದಸ್ಯರಿಗೆ 6,13,29,000 ರೂ. ಸಾಲ ವಿತರಿಸಲಾಗಿದೆ. ಇದರಲ್ಲಿ 51 ಜನ ಸದಸ್ಯರಿಗೆ ಹೊಸ ಸಾಲ 71,00,000 ರೂ. ಇತರೆ ಸಾಲ ರೂಪದಲ್ಲಿ 1,56,79,000 ಸಾಲ ವಿತರಣೆಯಾಗಿದೆ. ನಮ್ಮ ಸಂಘವು 200 ಸದಸ್ಯರಿಗೆ ಒಟ್ಟು 7,70,08,156 ರೂ.ಸಾಲದ ಹಣ ವಿತರಿಸಲಾಗಿದೆ. ನಮ್ಮ ತಾಲ್ಲೂಕಿನ ರೈತರ ಹಿತಕ್ಕಾಗಿ ಜಿಲ್ಲಾ ಬ್ಯಾಂಕಿನಿಂದ 9.50% ಬಡ್ಡಿ ಎಸ್.ಎ ಓ ಸಾಲಕ್ಕೆ ಕಟ್ಟಿ ನಮ್ಮ ಸಂಘದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದೇವೆ. 2021-22ನೇ ಸಾಲಿನಲ್ಲಿ ನಮ್ಮ ಸಂಸ್ಥೆ ಗೊಬ್ಬರ ಕೀಟನಾಶಕ, ರೈತರು ಸಾಮಾಗ್ರಿಗಳು 8,08,65,133 ರೂ. ಮಾರಾಟ ಮಾಡಿದ್ದು 2021-22ನೇ ಸಾಲಿನಲ್ಲಿ 8,57,45,798 ರೂ. ಮಾರಾಟವಾಗಿದ್ದು ಹೆಚ್ಚುವರಿಯಾಗಿ 48 ಲಕ್ಷಗಳಷ್ಟು ಹೆಚ್ಚುವರಿ ಗೊಬ್ಬರ, ಕೀಟನಾಶಕ ಸಾಮಾಗ್ರಿಗಳು ಮಾರಾಟವಾಗಿರುತ್ತದೆ ಸಂಸ್ಥೆಯ ಸದಸ್ಯರ ಸಹಕಾರದಿಂದ ನಮ್ಮ ಸಂಸ್ಥೆಗೆ ಅಡಿಟ್ ವರದಿಯಲ್ಲಿ ಎ ಶ್ರೇಣಿ ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ರೈತ ಸದಸ್ಯರುಗಳಿಗೆ ಮೇ, ಜೂನ್ ಮತ್ತು ಜುಲೈ ತಿಂಗಳಲ್ಲಿ ನಮ್ಮ ಅಡಿಕೆ ಮತ್ತು ಭತ್ತ ಶುಂಠಿ ಬೆಳೆಗಳಿಗೆ ಬೆಳೆ ವಿಮೆ ಮಾಡಿಸಲು ತಿಳಿಸಲಾಗಿದೆ. ನಮ್ಮ ಸಂಸ್ಥೆಯಲ್ಲಿ ಬೆಳೆ ಸಾಲ ಪಡೆದ ಸದಸ್ಯರಿಗೆ ನಮ್ಮ ಸಂಸ್ಥೆ ವತಿಯಿಂದ 2021-22ನೇ ಸಾಲಿನಿಂದ ಅಪಘಾತ ವಿಮೆ ಮಾಡಿಸಲಾಗಿದೆ ನಮ್ಮ ಸಂಸ್ಥೆ ಈ ವರ್ಷದಲ್ಲಿ 100% ವಸೂಲಾತಿಯಾಗಿದ್ದು ಮುಂದಿನ ದಿನದಲ್ಲಿ ಸಂಘದ ಏಳಿಗೆಗಾಗಿ ಎಲ್ಲ ಸದಸ್ಯರು ಸಕಾಲದಲ್ಲಿ ಸಾಲ ಪಡೆದು ಮರುಪಾವತಿ ಮಾಡಿ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕೆಂದರು.


ಕಳೂರು ಸೊಸೈಟಿಯಲ್ಲಿ ಸದಸ್ಯತ್ವ ಪಡೆದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಎಂ.ಬಿ.ಬಿ.ಎಸ್‌ನಲ್ಲಿ ಅತೀ ಹೆಚ್ಚು ಅಂಕ ಪಡೆದ ಪತ್ರಕರ್ತ ನರಸಿಂಹಮೂರ್ತಿಯವರ ಪುತ್ರಿಯಾದ ಶಾರ್ವರಿ ನರಸಿಂಹಮೂರ್ತಿಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಬ್ಯಾಂಕ್ ಉಪಾಧ್ಯಕ್ಷರಾದ ಜಿ.ಆರ್. ಚಿನ್ನಪ್ಪ, ನಿರ್ದೆಶಕರಾದ ಜಿ.ಆರ್ ಮಲ್ಲಿಕಾರ್ಜುನ, ಸಿ.ಎನ್ ಗಂಗಾಧರ ನಾಯಕ್, ಶ್ರೀನಿವಾಸ ಕುಲಾಯಿ, ಎಂ.ಆರ್ ಚಂದ್ರಶೇಖರ್, ರವಿ.ಜಿ.ಎಸ್, ಹೂವಪ್ಪ, ಲಲಿತಮ್ಮ, ಪ್ರಮೀಳ, ಅಂಬೇಡ್ಕರ್ ನಿಗಮದ ನಿರ್ದೆಶಕರಾದ ಎನ್.ಆರ್. ದೇವಾನಂದ್, ಗುಬ್ಬಿಗಾ ಅನಂತರಾವ್, ಶ್ರೀನಿವಾಸ್ ಕಾಮತ್, ಹೆಚ್. ಶ್ರೀನಿವಾಸ್, ಕಛೇರಿಯ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ವೀರೇಂದ್ರ, ನಾಗರಾಜ್, ಕಛೇರಿಯ ಎಲ್ಲ ಸಿಬ್ಬಂದಿಗಳು ಮತ್ತು ಸಂಸ್ಥೆಯ ಎಲ್ಲ ಸದಸ್ಯರುಗಳು ಉಪಸ್ಥಿತರಿದ್ದರು.

ಜಾಹಿರಾತು

LEAVE A REPLY

Please enter your comment!
Please enter your name here