ಹೊಸ ಶರ್ಟ್ ಧರಿಸಿ ತಾನೇ ಹೂವಿನ ಹಾರ ಹಾಕಿಕೊಂಡು ನೇಣಿಗೆ ಶರಣಾದ ಕೆಎಸ್‌ಆರ್‌ಟಿಸಿ ನೌಕರ..!

0
23470

ಭದ್ರಾವತಿ: ಇಲ್ಲಿನ ಕೆಎಸ್‌ಆರ್‌ಟಿಸಿ ನೌಕರರೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ಭದ್ರಾವತಿಯ ಹೊಸ ಸಿದ್ದಾಪುರದಲ್ಲಿ ನಡೆದಿದೆ.

ಕೆಎಸ್‌ಆರ್‌ಟಿಸಿ ಚಾಲಕ ಗಂಗಾಧರ್ (46) ಎಂಬವರೇ ನೇಣಿಗೆ ಶರಣಾದ ವ್ಯಕ್ತಿ. ಹೊಸ ಸಿದ್ದಾಪುರದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ನೇಣಿಗೆ ಕೊರಳೊಡ್ಡುವ ಮುನ್ನ ಗಂಗಾಧರ್ ತಾನೇ ಹೂವಿನ ಹಾರ ಹಾಕಿಕೊಂಡಿದ್ದಾರೆ. ಹಾರದ ಜೊತೆಗೆ ಹೊಸ ಶರ್ಟ್ ಧರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಭದ್ರಾವತಿಯ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಾಹಿರಾತು

LEAVE A REPLY

Please enter your comment!
Please enter your name here