ಚಿಕ್ಕಮಗಳೂರು : ಹೋಟೆಲ್ ನಲ್ಲಿ ಇಬ್ಬರಿಗೆ ಚೂರಿ ಇರಿದು ತಲೆಮಾರಿಸಿಕೊಂಡಿದ್ದ ಆರೋಪಿಯನ್ನು ಚಿಕ್ಕಮಗಳೂರು ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.
ಬಂಧಿತ ಆರೋಪಿ ಅಲೆಕ್ಸಾಂಡರ್ (17) ತಲೆಮರೆಸಿಕೊಂಡಿದ್ದು ಆರೋಪಿಯು ಕಳಸ ತಾಲೂಕಿನ ಕುದುರೆಮುಖದಲ್ಲಿ ಇಬ್ಬರು ವ್ಯಕ್ತಿಗಳನ್ನು ವೈಯಕ್ತಿಕ ಕಾರಣದಿಂದ ಚೂರಿಯಿಂದ ಇರಿದು ಪರಾರಿಯಾಗಿ ಕೇರಳದಲ್ಲಿ ತಲೆಮಾರಿಸಿಕೊಂಡಿದ.
ಈ ಸಂಬಂಧ ಕುದುರೆಮುಖ ಪೋಲಿಸ ಠಾಣೆಯಲ್ಲಿ ಐಪಿಸಿ 307,506,324,143,147,148 ಅಡಿಯಲ್ಲಿ ಪ್ರಕರಣ ದಾಖಲಿಸಿ ಕೊಂಡು ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ ಪತ್ತೆಗಾಗಿ ತಂಡ ನೇಮಕ ಮಾಡಲಾಗಿತ್ತು.
ಕೇರಳದಲ್ಲಿ ಆರೋಪಿಯನ್ನು ಬಂಧಿಸಿದ ಕುದುರೆಮುಖ ಪೋಲಿಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ ಪೊಲೀಸರಿಗೆ ಜಿಲ್ಲಾ ಪೊಲೀಸ್ ಸೂಪರಿಟೆಂಡೆಂಟ್ ಅಭಿನಂದನೆಗಳನ್ನು ಸಲ್ಲಿಸಿದರು.
Related