ಹೋಲಿ ರೆಡಿಮರ್ ಶಾಲೆಯ ವಿದ್ಯಾರ್ಥಿನಿ ತೃಪ್ತಿಯವರಿಗೆ ದ್ವಿತೀಯ ಪಿಯುಸಿಯಲ್ಲಿ 574 ಅಂಕ ; ಅಭಿನಂದನೆ

0
476

ಹೊಸನಗರ: ಹೋಲಿ ರೆಡಿಮರ್ ಶಾಲೆಯ ವಿದ್ಯಾರ್ಥಿನಿಯಾದ ಕುಮಾರಿ ತೃಪ್ತಿ ಎಂ.ಬಿಯವರು 2022ರಂದು ನಡೆದ ದ್ವಿತೀಯ ಪಿಯುಸಿಯಲ್ಲಿ 574 ಅಂಕಗಳೊಂದಿಗೆ 96% ಪಡೆದಿದ್ದಾರೆ.

ಕನ್ನಡದಲ್ಲಿ 100ಕ್ಕೆ 95, ಇಂಗ್ಲೀಷ್‌ನಲ್ಲಿ 100ಕ್ಕೆ 94, ಇತಿಹಾಸದಲ್ಲಿ 100ಕ್ಕೆ 91, ಅರ್ಥಶಾಸ್ತ್ರದಲ್ಲಿ 100ಕ್ಕೆ 100, ಸಮಾಜ ವಿಜ್ಞಾನದಲ್ಲಿ 100ಕ್ಕೆ 97 ಹಾಗೂ ರಾಜಕೀಯಶಾಸ್ತ್ರದಲ್ಲಿ 100ಕ್ಕೆ 97 ಅಂಕಗಳನ್ನು ಪಡೆದಿದ್ದಾರೆ.

ಇವರು ಹೊಸನಗರ ಪಟ್ಟಣ ಪಂಚಾಯಿತಿ ವಾಟರ್ ಇಂಜಿನಿಯರ್ ಬಸವರಾಜ್ ಹಾಗೂ ಗೀತಾರವರ ಪುತ್ರಿಯಾಗಿದ್ದಾರೆ‌.

ಅಭಿನಂದನೆ:

ಇವರನ್ನು ಹೋಲಿ ರೆಡಿಮರ್ ಶಾಲೆಯ ಪ್ರಾಂಶುಪಾಲರಾದ ಐರನ್ ಡಿಸಿಲ್ವ ಮತ್ತು ಉಪನ್ಯಾಸಕ ವೃಂದ, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಬಾಲಚಂದ್ರಪ್ಪ ಹಾಗೂ ಸಿಬ್ಬಂದಿಗಳು ಅಭಿನಂದಿಸಿ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಅಂಕಗಳನ್ನು ಪಡೆಯುವುದರೊಂದಿಗೆ ಶಾಲೆಗೆ ಹಾಗೂ ಹೊಸನಗರಕ್ಕೆ ಕೀರ್ತಿ ತರಲೆಂದು ಹಾರೈಸಿದ್ದಾರೆ.

ಜಾಹಿರಾತು

LEAVE A REPLY

Please enter your comment!
Please enter your name here