ಹೋಲಿ ರೆಡಿಮರ್ ಶಾಲೆಯ SSLC ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭ | ಸಕಾಲದಲ್ಲಿ ಜ್ಞಾನ ಸಂಪಾದನೆ ಮಾಡಿಕೊಂಡರೆ ಭವಿಷ್ಯದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಬದುಕು ಕಟ್ಟಿಕೊಳ್ಳಬಹುದು: ಶಿಕ್ಷಕಿ ಶಾರದ

0
615

ಹೊಸನಗರ: ವಿದ್ಯಾರ್ಥಿಗಳು ಸಕಾಲದಲ್ಲಿ ಜ್ಞಾನ ಸಂಪಾದನೆ ಮಾಡಿಕೊಂಡರೆ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಿ ಸುಖ-ಶಾಂತಿ-ನೆಮ್ಮದಿಯಿಂದ ಬದುಕಬಹುದು ವಿದ್ಯಾಭ್ಯಾಸ ಸಾಧಕರ ಸೊತ್ತೇ ಹೊರತು ಸೋಮಾರಿಗಳ ಸೊತ್ತಲ್ಲ ಎಂದು ಹೋಲಿ ರೆಡಿಮರ್ ಶಾಲೆಯ ಕನ್ನಡ ಶಿಕ್ಷಕಿ ಶಾರದರವರು ಹೇಳಿದರು.

ಹೊಸನಗರದ ಖಾಸಗಿ ಹೋಲಿ ರೆಡಿಮರ್ ಶಾಲೆಯ ಆವರಣದಲ್ಲಿ 2021-22ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕಗಳಿಸಿದ ಪ್ರತಿಭಾವಂತ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸನ್ಮಾನ ಹಾಗೂ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಲಾಗಿದ್ದು ಈ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಪೋಷಕರು ತಮ್ಮ ಮಕ್ಕಳು ಬುದ್ಧಿವಂತರಾಗಬೇಕು ಹೆಚ್ಚು-ಹೆಚ್ಚು ಅಂಕಗಳನ್ನು ಪಡೆಯಬೇಕು ಎಂಬ ಆಸೆಯಿಂದ ತಮ್ಮ ಜೀವವನ್ನು ಮುಡಿಪಾಗಿಟ್ಟು ಸಾಲ ಮಾಡುವುದರ ಜೊತೆಗೆ ಕೂಲಿ ಕೆಲಸ ಮಾಡಿ ಶಾಲೆಗೆ ಕಳುಹಿಸುತ್ತಾರೆ ತಂದೆ-ತಾಯಿಯರು ತಮ್ಮ ಕಷ್ಟಗಳನ್ನು ಮಕ್ಕಳ ಮುಂದೆ ಎಂದು ಹೇಳಿಕೊಳ್ಳುವುದಿಲ್ಲ ಆ ತಂದೆ-ತಾಯಿಗಳಿಗೆ ನಿರಸೆ ಮಾಡದೇ ವಿದ್ಯಾರ್ಥಿಗಳು ಓದಿನ ಕಡೆಗೆ ಗಮನ ಹರಿಸಿ ತಂದೆ ತಾಯಿಯರ ಆಸೆಯನ್ನು ಪೂರೈಸುವ ಜವಾಬ್ದಾರಿ ಮಕ್ಕಳ ಮೇಲೆ ಇರುತ್ತದೆ ಕಷ್ಟಪಟ್ಟು ಓದಿದರೆ ಸಾಧನೆ ನಿಮ್ಮ ಬೆನ್ನ ಹಿಂದೇ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂದರು.

ವಿದ್ಯಾರ್ಥಿಗಳಿಂದ ಮೊಬೈಲ್ ದೂರವಿಡಿ: ಐರನ್ ಡೀಸಿಲ್ವಾ

ಮಕ್ಕಳ ಪೋಷಕರು ಮಕ್ಕಳಿಂದ ಮೊಬೈಲ್ ದೂರವಿಡುವ ಕೆಲಸವನ್ನು ಮಾಡಬೇಕು ಇಲ್ಲವಾದರೆ ಓದಿನಿಂದ ದೂರ ಉಳಿಯುವ ಸಂಭವವಿದೆ ಎಂದು ಹೋಲಿರೆಡಿಮರ್ ಶಾಲೆಯ ಪ್ರಾಂಶುಪಾಲರಾದ ಐರೀನ್ ಡಿಸಿಲ್ವಾರವರು ಹೇಳಿದರು.

ಅವರು ಈ ಸಮಾರಂಭದ ಅಧ್ಯಕ್ಷತೆ ವಹಿಸಿ ಎಸ್‌ಎಸ್‌ಎಲ್‌ಸಿ ಪ್ರತಿಭಾವಂತ ಮಕ್ಕಳನ್ನು ಸನ್ಮಾನಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ 10ನೇ ತರಗತಿ ಅಂತಿಮ ಘಟ್ಟ ಈ ಸಮಯದಲ್ಲಿ ಸೋಮಾರಿಯಾಗಿ ಬೆಳೆದರೆ ಮುಂದೆ ಜೀವನದಲ್ಲೇ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ವಿದ್ಯಾರ್ಥಿ ಜೀವನದಲ್ಲಿ ಓದಿ ಮುಂದೆ ಸುಖ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ ಅದರ ಜೊತೆಗೆ ಯಾವುದೇ ವಿದ್ಯಾರ್ಥಿಗೆ ಆಗಲಿ ಮನುಷ್ಯರಿಗೆ ಆಗಲಿ ಶಿಸ್ತು ಸಂಯಮ ಬಹಳ ಮುಖ್ಯ ಅದನ್ನು ಕಲಿತರೆ ಎಲ್ಲಿ ಬೇಕಾದರೂ ಗೌರವಯುತವಾಗಿ ಬದುಕ ಬಹುದೆಂದು ಮುಂದಿನ ಸಾಲಿನಲ್ಲಿ ಇನ್ನೂ ಹೆಚ್ಚಿನ ಸಂಖೆಯಲ್ಲಿ ಹೆಚ್ಚು-ಹೆಚ್ಚು ಅಂಕ ಪಡೆದು ಸಾಧನೆ ಮಾಡಿ ಸನ್ಮಾನಿಸಿಕೊಳ್ಳಬೇಕೆಂದು 10ನೇ ತರಗತಿ ಮಕ್ಕಳಿಗೆ ತಿಳಿ ಹೇಳಿದರು.

ಈ ಸಮಾರಂಭದಲ್ಲಿ ಪ್ರಾಂಶುಪಾಲರಾದ ಐರೀನ್ ಡಿಸಿಲ್ವಾ, ವ್ಯವಸ್ಥಾಪಕರಾದ ರೋಸಿನ ಸಿಸ್ಟರ್, ಈ ಶಾಲೆಯ ಶಿಕ್ಷಕರಾದ ರಾಮಕೃಷ್ಣ, ಧನಂಜಯ, ಭೋಜರಾಜ, ಶಿಕ್ಷಕಿಯಾದ ದೀಪಿಕಾ, ಶಾರದ, ರಶ್ಮಿತಾ ಇನ್ನೂ ಮುಂತಾದವರು ಹಾಗೂ ಮಕ್ಕಳ ಪೋಷಕರು ಉಪಸ್ಥಿತರಿದ್ದರು.

ಎಸ್‌ಎಸ್‌ಎಲ್‌ಸಿಯಲ್ಲಿ ಹೆಚು ಅಂಕಗಳಿಸಿರುವ 30 ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿದರು.

ಜಾಹಿರಾತು

LEAVE A REPLY

Please enter your comment!
Please enter your name here