ಹೊಸನಗರ ಪಟ್ಟಣದಲ್ಲಿ ಮಕ್ಕಳ ಸಂತೆಯಲ್ಲಿ ಭರ್ಜರಿ ವ್ಯಾಪಾರ

0 1,192

ಹೊಸನಗರ : ಪಟ್ಟಣದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಹೆಣ್ಣು ಮಕ್ಕಳ ಶಾಲೆಯ ಶತಮಾನ ಉತ್ಸವ ಹಾಗೂ ಚಿಣ್ಣರ ಸಾಂಸ್ಕೃತಿಕ ವೈಭವ ಅಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಏರ್ಪಡಿಸಿದ ಮಕ್ಕಳ ಸಂತೆಯಲ್ಲಿ ಮಕ್ಕಳು ಭರ್ಜರಿಯಾಗಿ ವ್ಯಾಪಾರ ನಡೆಸಿದರು.

ಈ ಸಂತೆಯಲ್ಲಿ ತರಕಾರಿ, ಸೊಪ್ಪು, ಎಳನೀರು, ಹಣ್ಣುಗಳಲ್ಲದೆ ವಿವಿಧ ಬಗೆಗಳ ತಿಂಡಿ-ತಿನಿಸುಗಳು ಸೇರಿದಂತೆ ವಾರದ ಸಂತೆಯಂತೆ ಎಲ್ಲ ಬಗೆ ಐಟಂಗಳನ್ನು ವ್ಯಾಪಾರಕ್ಕೆ ಬಳಸಿಕೊಂಡ ಮಕ್ಕಳು ವ್ಯಾಪಾರಕ್ಕೆ ಬಂದ ಜನರಿಗೆ ಹಾಗೂ ತಮ್ಮ ಪೋಷಕರಿಗೆ ಮಾರಾಟ ಮಾಡುವ ಮೂಲಕ ಮಕ್ಕಳು ಹೊಸತನ ಕಂಡುಕೊಂಡರು.

ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಆರ್ ಕೃಷ್ಣಮೂರ್ತಿ ಹಾಗೂ ಅವರ ಕಚೇರಿ ಸಿಬ್ಬಂದಿ ವರ್ಗದವರು ಮಕ್ಕಳ ಸಂತೆಯಲ್ಲಿ ಖರೀದಿ ಮಾಡುವ ಮೂಲಕ ಮಕ್ಕಳ ಉತ್ಸಾಹವನ್ನು ಇಮ್ಮಡಿಗೊಳಿಸಿದರು.

Leave A Reply

Your email address will not be published.

error: Content is protected !!