ಸುಣ್ಣ-ಬಣ್ಣ ಕಾಣದ ಹೊಸನಗರ ತಾಪಂ ‘ಸಾಮರ್ಥ್ಯ ಸೌಧ’ | ಕಟ್ಟಡ ನಿರ್ವಹಣೆಗೆ ನಿರ್ಲಕ್ಷ್ಯ, ಕಟ್ಟಡದ ಸುತ್ತಲೂ ಕುರುಚಲು ಗಿಡ | ದಶಕ ಕಳೆದರೂ ಮುಗಿಯದ ಜಾಗದ ಹಕ್ಕು ಬದಲಾವಣೆ ಪ್ರಕ್ರಿಯೆ

0 559

ಹೊಸನಗರ: ತಾಲೂಕು ಪಂಚಾಯಿತಿ ಹಾಗೂ ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯಿತಿಗಳಿಗೆ (Grama Panchayath) ಸಂಬಂಧಿಸಿದ ತರಬೇತಿ (Training), ವಿಡಿಯೋ ಕಾನ್ಫರೆನ್ಸ್ (Video Conference) ಕಾರ‍್ಯಕ್ರಮಗಳನ್ನು ನಡೆಸುವ ಇಲ್ಲಿನ ಸಾಮರ್ಥ್ಯ ಸೌಧ (Samarthya Saudha) ಕಟ್ಟಡ ನಿರ್ವಹಣೆ ಇಲ್ಲದೇ ಹಲವು ತಿಂಗಳುಗಳು ಕಳೆದಿವೆ.


ಇಲ್ಲಿನ ಪ್ರವಾಸಿ ಬಂಗಲೆಯ ಸಮೀಪ ನಿರ್ಮಿಸಿರುವ ಕಟ್ಟಡ ಸದಾ ಬಾಗಿಲು ಹಾಕಿದ್ದು, ಪಾಳು ಬಿದ್ದಂತೆ ಕಾಣ ತೊಡಗಿದೆ. ಕಟ್ಟಡದ ಸುತ್ತಲೂ ಕುರುಚಲು ಸಸ್ಯಗಳು ಆವರಿಸಿಕೊಂಡಿವೆ. ಗಿಡ-ಗಂಟಿ, ಬಳ್ಳಿಗಳು ಕಟ್ಟಡದ ಗೋಡೆಗಳ ಮೇಲೂ ಹಬ್ಬಿಕೊಂಡು ಬಳಸಲು ಯೋಗ್ಯವಲ್ಲದ ಕಟ್ಟಡದಂತೆ ಭಾಸವಾಗತೊಡಗಿದೆ. ಸೌಧದಕಿಟಕಿ, ಗಾಜುಗಳು ಹಾಳಾಗಿದ್ದು, ದುರಸ್ತಿ ಕರ‍್ಯ ನಡೆದಿಲ್ಲ. ಗೋಡೆಗಳಿಗೆ ಸುಣ್ಣ ಬಣ್ಣಕಾಣದೇ ವರ್ಷ ಕಳೆದಿದೆ. ಮಳೆಗಾಲದ ಸಮಯದಲ್ಲಿಚಾವಣೆ ಸೋರುವ ಸಮಸ್ಯೆ ಹಲವು ವರ್ಷದಿಂದಲೂಇದೆ. ಕಿಟಕಿ ಗಾಜುಗಳು ಇಲ್ಲದಿರುವುದು ಹಾಗೂ ತೆರೆದಕಿಟಕಿಯಿಂದ ಬೀಸುವ ಗಾಳಿ, ದೂಳು, ಕ್ರಿಮಿ-ಕೀಟಗಳು ಸದಾ ಒಳಗೆ ಬರುವ ಕಾರಣಕ್ಕೆ ಕಟ್ಟಡದ ಒಳಗಿರುವ ಪೀಠೋಪಕರಣಗಳು ಹಾಳಾಗುವ ಸಂಭವ ಕಂಡು ಬಂದಿದೆ. ಶೌಚಾಲಯಕ್ಕೆ ನೀರಿನ ಸಂಪರ್ಕ ಕಲ್ಪಿಸುವುದು, ದುರಸ್ತಿ ಮಾಡುವ ಕಾರ‍್ಯ ಆಗಬೇಕಿದೆ.

ಒಟ್ಟಿನಲ್ಲಿ 25 ಲಕ್ಷರೂ. ವೆಚ್ಚದಲ್ಲಿ ಗ್ರಾಮ ಸ್ವರಾಜ್‌ ಯೋಜನೆಯಡಿ ನಿರ್ಮಿಸಿರುವ ಸಾಮರ್ಥ್ಯ ಸೌಧ ಅವ್ಯವಸ್ಥೆಯ ಆಗರವಾಗಿದೆ.

ಪಹಣಿ ದಾಖಲೆ ಇಲ್ಲ:
ಸಾಮರ್ಥ್ಯ ಸೌಧವಿರುವ ಈ ಜಾಗ ಮೊದಲು ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ ಕಳೂರು ವಾರ್ಡ್‌ಗೆ ಸೇರಿದ ಜಾಗವಾಗಿತ್ತು. ಸರ್ವೆ ನಂ.152/3ರಲ್ಲಿ 1 ಎಕರೆ 8 ಗುಂಟೆ ಗ್ರಾಮ ಠಾಣಾ ಜಾಗವನ್ನು ಸಾಮರ್ಥ್ಯಸೌಧ ನಿರ್ಮಾಣಕ್ಕಾಗಿ ತಾಲೂಕು ಪಂಚಾಯಿತಿಗೆ ಹಸ್ತಾಂತರಿಸಲಾಯಿತು. ಆದರೆ 2010ರಲ್ಲಿ ಕಟ್ಟಡ ಕಟ್ಟುವ ವೇಳೆ ಕೇವಲ 8 ಗುಂಟೆ ಜಾಗವನ್ನು ಮಾತ್ರ ಅಧಿಕೃತವಾಗಿ ಹಕ್ಕು ಬದಲಾವಣೆ ಮಾಡಿ ಪಹಣಿ ದಾಖಲೆಗಳಲ್ಲಿ ನಮೂದಿಸಲಾಗಿದೆ. ಇನ್ನುಳಿದ 1 ಎಕರೆಜಾಗಕ್ಕೆ ಸಂಬಂಧಿಸಿದಂತೆ ಹಕ್ಕು ಬದಲಾವಣೆ ಮುಟೇಷನ್ ಮಾಡಲಾಗಿಲ್ಲ. ಈ ಕಾರಣಕ್ಕೆಸೌಧದ ಸುತ್ತಲೂ ಕಾಂಪೌಂಡ್ ನಿರ್ಮಾಣ ಮಾಡದೇ ಹಾಗೆಯೇ ಬಿಡಲಾಗಿದೆ. ಅಲ್ಲದೇ ಈ ಜಾಗದಲ್ಲಿರುವ ಅಕೇಶಿಯಾ ಮರಗಳನ್ನು ಕಡಿತಲೆ ಮಾಡಲು ಸಾಧ್ಯವಾಗುತ್ತಿಲ್ಲ. ಜಾಗ ಹಾಗೂ ಕಟ್ಟಡಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸರಿಪಡಿಸಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಇಚ್ಛಾ ಶಕ್ತಿ ಕೊರತೆ ಕಂಡು ಬಂದಿದೆ.

ಸಭೆ ಸ್ಥಳಾಂತರ:
ಕಳೆದ ವಾರ ತಾಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರಿಗೆ ತರಬೇತಿ ಕಾರ‍್ಯಕ್ರಮ ಏರ್ಪಡಿಸಲಾಗಿತ್ತು. ಸಾಮರ್ಥ್ಯ ಸೌಧದಲ್ಲಿ ನಿಗದಿಯಾಗಿದ್ದ ಕಾರ‍್ಯಕ್ರಮ ಅಲ್ಲಿನ ಅವ್ಯವಸ್ಥೆಗಳಿಂದಾಗಿ ತರಬೇತಿ ಆರಂಭಗೊಂಡ ಕೆಲ ಸಮಯದಲ್ಲಿಯೇ ಬೇರೆಡೆಗೆ ಸ್ಥಳಾಂತರಗೊಳಿಸಲಾಯಿತು. ಇದು ಅಲ್ಲಿನ ದುರವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ಚಿತ್ರ: ಹೊಸನಗರದ ಸಾಮರ್ಥ್ಯ ಸೌಧ ಕಟ್ಟಡದ ಸುತ್ತಲೂ ಗಿಡ-ಗಂಟಿಗಳು ಆವರಿಸಿರುವುದು.


ಹೊಸನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಪಟ್ಟಣ ಪಂಚಾಯತಿ ಕಟ್ಟಡ, ಸಮಾಜ ಕಲ್ಯಾಣ ಇಲಾಖೆ ಕಟ್ಟಡ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರ ಹೊಸನಗರ ಕಛೇರಿ, ಅಕ್ಷರ ದಾಸೋಹ ಕಛೇರಿಗಳನ್ನು ನೋಡಿದರೆ ನಾವು ಇನ್ನೂ ಸುಮಾರು 25 ವರ್ಷಗಳ ಹಿಂದೆ ಇದ್ದೇವೆ ಎಂದು ಅನಿಸುತ್ತೀವೆ. ಸುಮಾರು 10 ವರ್ಷಗಳ ಹಿಂದೆ ಇಂದಿನ ನಮ್ಮ ನೂತ ಶಾಸಕರಾದ ಬೇಳೂರು ಗೋಪಾಲಕೃಷ್ಣರವರ ಹೇಳಿಕೆಯಲ್ಲಿ ಹೊಸನಗರ ಹೊಸ-ನಗರವನ್ನಾಗಿ ಮಾಡುತ್ತೇವೆ ಎಂಬ ಆಶ್ವಾಸನೆ ನೀಡಿದ್ದರು ಇಂದು ನೂತನವಾಗಿ ಶಾಸಕರಾದ ಮೇಲೆಯೇ ಹೊಸನಗರ-ಹೊಸನಗರ ಸುಂದರ ನಗರವನ್ನಾಗಿ ಮಾಡುವುದೇ ನನ್ನ ಗುರಿ ಎಂದಿದ್ದಾರೆ ಇವರ ಆಶ್ವಾಸನೆ ಗುರಿ ಬೇಗ ಈಡೇರಿಸಲೀ ಸಮಾಜ ಕಲ್ಯಾಣ ಇಲಾಖೆ ಅಕ್ಷರ ದಾಸೋಹ ಕಛೇರಿ, ತಾಲ್ಲೂಕು ಪಂಚಾಯತಿ ಅಧೀನದಲ್ಲಿರುವ ಆರಗ ಜ್ಞಾನೇಂದ್ರರವರ ಕಛೇರಿ, ಸಬ್ ರಿಜೀಸ್ಟರ್ ಕಛೇರಿ ಹಾಗೂ ಪಟ್ಟಣ ಪಂಚಾಯಿತಿ ಕಚೇರಿಗಳು ನೂತನ ಬಿಲ್ಡಿಂಗ್‌ಗಳಾಗಿ ಹೊರಬರಲಿ.

8 ಗುಂಟೆ ಜಾಗ ಹಸ್ತಾಂತರವಾಗಿದ್ದು ಇನ್ನೂ ಒಂದು ಎಕರೆ ಜಾಗ ತಾಲೂಕು ಪಂಚಾಯಿತಿ ಹೆಸರಿಗೆ ಪಹಣಿ ನಮೂದಾಗಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆಯಲಾಗಿದೆ. ದಾಖಲೆಗಳು ಸರಿಯಾಗದ ಹಿನ್ನೆಲೆಯಲ್ಲಿ ಸುತ್ತಲೂ ಬೇಲಿ ನಿರ್ಮಾಣ ಮಾಡಿಲ್ಲ ಹಾಗೂ ಅಕೇಶಿಯಾ ನೆಡುತೋಪು ಕಟಾವು ಮಾಡಲು ಅನುಮತಿ ಸಿಕ್ಕಿಲ್ಲ. ಮುಂದಿನ ದಿನಗಳಲ್ಲಿ ಕಟ್ಟಡಕ್ಕೆ ಸುವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು. ಜಾಗದ ದಾಖಲೆಗಳು ಸರಿಯಾಗಿದ್ದಿದ್ದರೆ, ಅಕೇಶಿಯಾ ನೆಡುತೋಪು ಕಡಿತಲೆಯಿಂದ ಸಿಗುವ ಹಣವನ್ನೇ ಕಟ್ಟಡದ ಅಭಿವೃದ್ದಿಗೆ ಬಳಸಿಕೊಳ್ಳಬಹುದಿತ್ತು.
– ನರೇಂದ್ರಕುಮಾರ್, ಇಓ, ತಾ.ಪಂ.ಹೊಸನಗರ

Leave A Reply

Your email address will not be published.

error: Content is protected !!