ಮೇರಿ ಮಾಟಿ ಮೇರಾ ದೇಶ್-ಉದ್ಯಾನವನ ನಿರ್ಮಾಣ ಪುಣ್ಯದ ಕೆಲಸ ; ಬಿ.ವೈ.ರಾಘವೇಂದ್ರ

0 65

ಶಿವಮೊಗ್ಗ : ಮೇರಿ ಮಾಟಿ ಮೇರಾದೇಶ್ ಅಮೃತ ಕಳಶ ಯಾತ್ರೆಯು ದೇಶದ್ಯಾಂತ ಒಂದು ಪ್ರಮುಖ ಕಾರ್ಯಕ್ರಮವಾಗಿದ್ದು, ಎಲ್ಲಾ ಹಳ್ಳಿಯ ಮಣ್ಣನ್ನು ಸಂಗ್ರಹಿಸಿ ದೆಹಲಿಯ ಕರ್ತವ್ಯ ಪಥ್‍ನಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದು ಬಿ.ವೈ ರಾಘವೇಂದ್ರರವರು ತಿಳಿಸಿದರು.


ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ನೆಹರುಯುವ ಕೇಂದ್ರ, ತಾಲ್ಲೂಕು ಪಂಚಾಯತ್, ಶಿವಮೊಗ್ಗ, ರಾಷ್ಟ್ರೀಯ ಸೇವಾ ಯೋಜನೆ, ಕುವೆಂಪು ವಿಶ್ವವಿದ್ಯಾಲಯ. ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಯುವ ಸಬಲೀಕರಣ ಮತು ಕ್ರೀಡಾ ಇಲಾಖೆ, ಭಾರತೀಯ ಅಂಚೆ ಇಲಾಖೆ, ಕೇಂದ್ರ ಸಂವಹನ ಇಲಾಖೆ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಶಿವಮೊಗ ಇತರೆ ಇಲಾಖೆಗಳು, ವಿವಿಧ ಸಂಘ-ಸಂಸ್ಥೆಗಳು ಇವರ ಸಹಯೋಗದೊಂದಿಗೆ ದಿ: 20.10.2023 ರಂದು ನೆಹರು ಯುವ ಕೇಂದ್ರ, ತಾಲ್ಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೇರಿ ಮಾಟಿ ಮೇರಾದೇಶ್ ಅಮೃತ ಕಳಶ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು. ಉದ್ಘಾಟಿಸಿ ಮಾತನಾಡಿದರು.


ಹಳ್ಳಿ, ಹಳ್ಳಿಗಳಿಂದ ಮಣ್ಣು ಸಂಗ್ರಹಿಸಿ ಉದ್ಯಾನವನ ನಿರ್ಮಿಸುವ ಈ ಪುಣ್ಯದ ಕೆಲಸದಲ್ಲಿ ನಾವೆಲ್ಲರೂ ಕೈ ಜೋಡಿಸೋಣ ಎಂದು ಹೇಳಿ ಎಲ್ಲರಿಗೂ ದಸರಾ ಮತ್ತು ವಿಜಯದಶಮಿ ಹಬ್ಬದ ಶುಭಾಶಯವನ್ನು ತಿಳಿಸಿದರು.
ಮೆರವಣಿಗೆಯು ತಾಲ್ಲೂಕು ಪಂಚಾಯತ್ ಕಚೇರಿಯಿಂದ ಹೊರಟು ಡಿ.ಸಿ ಕಚೇರಿ ಮುಂಭಾಗದಿಂದ ಕೋರ್ಟ್ ರಸ್ತೆ ಮೂಲಕ ನೆಹರು ಒಳಾಂಗಣ ಕ್ರೀಡಾಂಗಣಕ್ಕೆ ತಲುಪಿತು. ಇದೇ ಸಂದರ್ಭದಲ್ಲಿ ನಂತರ ಎಲ್ಲರೂ ಪಂಚಪ್ರಾಣ ಪ್ರತಿಜ್ಞೆಯನ್ನುತೆಗೆದು ಕೊಳ್ಳಲಾಯಿತು.


ಶಿವಮೊಗ್ಗದ 7 ತಾಲ್ಲೂಕಿನ ತಾಲ್ಲೂಕು ಮಟ್ಟದ ಮೇರಿ ಮಾಟಿ ಮೇರಾದೇಶ್ ಅಮೃತ ಕಳಶ ಯಾತ್ರೆಯು ಮುಗಿದ ನಂತರ ಆ ಕಳಶವನ್ನು ನೆಹರು ಯುವ ಕೇಂದ್ರಕ್ಕೆ ಹಸ್ತಾಂತರಿಸಲಾಗುತ್ತದೆ. ನಂತರ ಈ ಕಳಶವನ್ನು ರಾಷ್ಟ್ರೀಯ ಯುವ ಕಾರ್ಯಕರ್ತರುಗಳು ದೆಹಲಿಗೆ ತೆಗೆದುಕೊಂಡು ಹೋಗುತ್ತಾರೆ. ಅಮೃತ ಕಳಶ ಯಾತ್ರೆಯ ರಾಷ್ಟ್ರಮಟ್ಟದ ಕಾರ್ಯಕ್ರಮವನ್ನು ದೆಹಲಿಯಲ್ಲಿ ಅಕ್ಟೋಬರ್ ತಿಂಗಳಿನ ಕೊನೆಯಲ್ಲಿ ಹಮ್ಮಿಕೊಳ್ಳಲಾಗುವುದು. ಈ ಮಣ್ಣಿನಿಂದದೆ ಹಲಿಯಲ್ಲಿ ಅಮೃತ ವಾಟಿಕಾ (ಉದ್ಯಾನವನ) ಮತ್ತು ಆಜಾದಿ ಕಾ ಅಮೃತ ಮಹೋತ್ಸವ ಸ್ಮಾರಕವನ್ನು ಕರ್ತವ್ಯ ಪಥ್, ಇಂಡಿಯಾಗೇಟ್‍ನಲ್ಲಿ ಸ್ಥಾಪಿಸಲಾಗುವುದು.


ಶಿವಮೊಗ್ಗ ನಗರ ಶಾಸಕರಾದ ಎಸ್.ಎನ್‍ಚನ್ನಬಸಪ್ಪ, ಶಿವಮೊಗ್ಗ ಜಿಲ್ಲಾಧಿಕಾರಿಗಳಾದ ಡಾ. ಸೆಲ್ವಮಣಿಆರ್. ಜಿ.ಪಂ ಸಿಇಓ ಲೋಕಂಡೆ ಸ್ನೇಹಲ್ ಸುಧಾಕರ್, ತಾ,ಪಂ ಇಓ ಅವಿನಾಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್, ನೆಹರು ಯುವಕೇಂದ್ರದ, ಜಿಲಾ ಯುವ ಅಧಿಕಾರಿ ಉಲ್ಲಾಸ್, ಶಿವಮೊಗ್ಗ ತಾಲ್ಲೂಕಿನ ಗ್ರಾ.ಪಂ ಪಿಡಿಓ ಗಳು, ಕಾಲೇಜುಗಳ ಎನ್‍ಎಸ್‍ಎಸ್ ವಿಭಾಗದ ಅಧಿಕಾರಿಗಳು ಮತ್ತು ಕಾರ್ಯಕರ್ತರುಗಳು, ಮಹಿಳಾ ಸಂಘದ ಸದಸ್ಯರುಗಳು, ಕಾಲೇಜು ವಿದ್ಯಾರ್ಥಿಗಳು, ರಾಷ್ಟ್ರೀಯ ಯುವಕಾರ್ಯಕರ್ತರುಗಳು ಸರಿಸುಮಾರು 1000 ಕ್ಕೂ ಹೆಚ್ಚು ಜನರು ಅಮೃತ ಕಳಶ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

Leave A Reply

Your email address will not be published.

error: Content is protected !!