ಕೋಣಂದೂರು ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಜ.14 ರಂದು ಮಕರ ಸಂಕ್ರಾಂತಿ ಜಾತ್ರಾ ಮಹೋತ್ಸವ | ಧನುರ್ಮಾಸ ಶಿವಪೂಜಾನುಷ್ಠಾನ ಮತ್ತು ಶಿವಲಿಂಗೇಶ್ವರ ಪ್ರಶಸ್ತಿ ಪ್ರದಾನ ಧರ್ಮ ಜಾಗೃತಿ ಸಮಾರಂಭ

0 248

ರಿಪ್ಪನ್‌ಪೇಟೆ: ಸಮೀಪದ ಕೋಣಂದೂರು ಶ್ರೀಕ್ಷೇತ್ರ ಶಿವಲಿಂಗೇಶ್ವರ ಬೃಹನ್ಮಠದಲ್ಲಿ ಜನವರಿ 14 ರಂದು ಮಕರ ಸಂಕ್ರಾಮತಿ ಜಾತ್ರಾ ಮಹೋತ್ಸವ ಉಜ್ಜಯನಿ ಶ್ರೀಶೈಲ ಲಿಂ.ಶ್ರೀಗಳ ಸಂಸ್ಮರಣೆ ಹಾಗೂ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳ ಸಂಕಲ್ಪದಂತೆ ಲೋಕಕಲ್ಯಾಣಾರ್ಥ ಧನುರ್ಮಾಸ ಶಿವಪೂಜಾನುಷ್ಠಾನ ಹಾಗೂ ಶಿವಲಿಂಗ ಶ್ರೀ ಪ್ರಶಸ್ತಿ ಪ್ರದಾನ ಹಾಗೂ ಧರ್ಮ ಜಾಗೃತಿ ಸಭೆಯನ್ನು ಆಯೋಜಿಸಲಾಗಿದೆ ಎಂದು ಮಠದ ಶ್ರೀಗಳಾದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ತಿಳಿಸಿದರು.

ಜನವರಿ 14 ರಂದು ಮಕರ ಸಂಕ್ರಾಂತಿಯ ಧರ್ಮಜಾಗೃತಿ ಸಮಾರಂಭವು ಆನಂದಪುರ ಮುರುಘಾರಾಜೇಂದ್ರ ಮಹಾಸಂಸ್ಥಾನ ಮಠದ ಜಗದ್ಗುರು ಡಾ.ಮಲ್ಲಿಕಾರ್ಜುನ ಮುರುಘಾರಾಜೇಂದ್ರ ಮಹಾಸ್ವಾಮಿಗಳು ದಿವ್ಯಸಾನಿಧ್ಯವನ್ನು ವಹಿಸಿ ಆಶೀರ್ವಚನ ನೀಡುವರು.

ಸಮಾರಂಭದ ಅಧ್ಯಕ್ಷತೆಯನ್ನು ವೀರಾಪುರ ಹಿರೇಮಠದ ಡಾ.ಮರುಳಸಿದ್ದ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸುವರು. ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯರು ರೆಟ್ಟಿಹಳ್ಳಿ ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ನೇತೃತ್ವ ವಹಿಸುವರು.

ಧರ್ಮಜಾಗೃತಿ ಸಮಾರಂಭವನ್ನು ಸಂಸದ ಬಿ.ವೈ.ರಾಘವೇಂದ್ರ ಉದ್ಘಾಟಿಸುವರು. ಶ್ರೀಶಿವಲಿಂಗೇಶ್ವರ ಪಂಚಾಂಗವನ್ನು ಶಾಸಕ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಬಿಡುಗಡೆಗೊಳಿಸುವರು.

ಮುಖ್ಯತಿಥಿಗಳಾಗಿ ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ, ಹಿರೇಕೆರೂರು ಶಾಸಕ ಯು.ಬಿ.ಬಣಕಾರ್, ಶಾಸಕ ರುದ್ರೇಗೌಡರು, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಮಂಜುನಾಥಗೌಡ, ಬಿ.ಜೆ.ಪಿ.ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಹೆಚ್.ವಿ.ಮಹೇಶ್ವರಪ್ಪ ಭಾಗವಹಿಸುವರು. ಕ್ಯಾಸನೂರು ಮಠದ ಗುರುಬಸವ ಪಂಡಿತಾರಾಧ್ಯ ಶಿವಾಚಾರ್ಯರು. ತಾವರೆಕೆರೆ ಶೀಲಾಮದ ಸಿದ್ದಲಿಂಗ ಶಿವಾಚಾರ್ಯರು ಸದಾಶಯ ನುಡಿ ಸಲ್ಲಿಸುವರು.

ಇದೇ ಸಂದರ್ಭದಲ್ಲಿ ಕೋಣಂದೂರು ಶ್ರೀ ಶಿವಲಿಂಗೇಶ್ವರ ಮಠದಿಂದ ಕೊಡಮಾಡುವ ಶ್ರೀಶಿವಲಿಂಗೇಶ್ವರ ಪ್ರಶಸ್ತಿಗೆ ಭಾಜನರಾಗಿರುವ ಖ್ಯಾತ ವೈದ್ಯಾಧಿಕಾರಿ ಡಾ.ಗುರುರಾಜ್, ಸಾಗರ ಅಕ್ಷಯ ಬ್ಯಾಂಕ್ ಅಧ್ಯಕ್ಷ ದಿನೇಶ್ ತಟ್ಟೆಕೊಪ್ಪ, ರಾಣೆಬೆನ್ನೂರು ಎಪಿಎಂಸಿ ಯಾರ್ಡ್ ವರ್ತಕ ಸೋಮಶೇಖರ ಈರಪ್ಪ ಹಿರೇಬಿದರಿ ಹಾಗೂ ಮಂಗಳದ ಖ್ಯಾತ ನಾಟಿ ವೈದ್ಯ ಶಿವನಗೌಡ್ರು ಇವರಿಗೆ ಪ್ರದಾನ ಮಾಡಲಾಗುವುದೆಂದು ಕೋಣಂದೂರು ಮಠದ ಶ್ರೀಗಳಾದ ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯರು ವಿವರಿಸಿದರು.

ಈ ಸಂದರ್ಭದಲ್ಲಿ ಬೆಳಕೋಡು ಹಾಲಸ್ವಾಮಿಗೌಡರು, ಕೊಳವಳ್ಳಿ ಎಂ.ರಾಜೇಶ್, ಜಗದೀಶ್ ಕುಕ್ಕಳಲೇ, ಶಿವರಾಜ್ ಪಾಟೀಲ್, ಜೆ.ಎಂ.ಶಾಂತಕುಮಾರ್, ಡಿ.ಈ.ಮಧುನೂದನ್, ಗುರುಪಾದಪ್ಪಗೌಡ, ಶಿವಪುರ ದೇವರಾಜ್, ಗಿರೀಶ್ ಜಂಬಳ್ಳಿ ಹಾಜರಿದ್ದರು.

Leave A Reply

Your email address will not be published.

error: Content is protected !!